ಪ್ರತಿಭಟನೆ ವೇಳೆ ಬರ್ಗರ್ ತಿಂದಿದ್ದಕ್ಕೆ ಸಿಜೆಪಿಯಿಂದ ಉಚ್ಚಾಟನೆಗೊಂಡ ವಿಜೇತಾ ದಹಿಯಾ 
ದೇಶ

ನನ್ನನ್ನು ಬಲಿ ಕಾ ಬಕ್ರಾ ಮಾಡಿದರು: ಸೋನಮ್ ಉಪವಾಸದಲ್ಲಿದ್ದಾಗ ಅಭಿಜಿತ್ ಸಮೋಸಾ ತಿಂದಿಲ್ಲವೇ? ಸ್ವಪಕ್ಷದ ವಿರುದ್ಧ ದಹಿಯಾ ಅಸಮಾಧಾನ! Vijeta Dahiya on Abhijit Dipke

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ ವೇಳೆ ಬರ್ಗರ್ ತಿಂದಿದ್ದಕ್ಕೆ ಸಿಜೆಪಿಯಿಂದ ಉಚ್ಚಾಟನೆಗೊಂಡ ವಿಜೇತಾ ದಹಿಯಾ
  • ಸ್ವಪಕ್ಷದ ಅಭಿಜಿತ್ ದಿಪ್ಕೆ ವಿರುದ್ಧ ಸಮೋಸಾ-ಕಚೋರಿ ಬಾಂಬ್ ಸಿಡಿಸಿ ಆಕ್ರೋಶ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಎ ದಹಿಯಾ
ನವದೆಹಲಿ: ಸೋಮವಾರ (ಜು.20) ದೆಹಲಿಯಲ್ಲಿ ನೀಟ್​ ಪರೀಕ್ಷೆ ಅಕ್ರಮವನ್ನು ವಿರೋಧಿಸಿ, ಜಂತರ್​ ಮಂತರ್​ನಿಂದ ಸಂಸತ್​ ಭವದವರೆಗೆ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್​ರಿಂದ ಲಾಠಿ ಚಾರ್ಜ್​​ ಹಾಗೂ ಅಶ್ರುವಾಯು ಪ್ರಯೋಗವನ್ನು ನಡೆಸಲಾಗಿತ್ತು.
ಆದರೆ ಈ ಹೋರಾಟವನ್ನು ಹಮ್ಮಿಕೊಂಡಿದ್ದ ಸಿಜೆಪಿ ಪಕ್ಷದ ವಕ್ತಾರ, ವಿಜೇತಾ ದಹಿಯಾ ಘಟನಾ ಸ್ಥಳದಿಂದ ದೂರವಿದ್ದು, ಹೋಟೆಲ್​ವೊಂದರಲ್ಲಿ ಬರ್ಗರ್​ ತಿನ್ನುತ್ತಿದ್ದ ವಿಡಿಯೋ ವೈರಲ್​ ಆದ ಬೆನ್ನಲ್ಲೆ, ಆತನನ್ನು ಸಿಜೆಪಿ ಪಕ್ಷದಿಂದ ಆಚೆ ಹಾಕಲಾಗಿತ್ತು. ಈಗ ಈ ವಿಚಾರವಾಗಿ ಮಾತನಾಡಿರುವ ದಹಿಯಾ (Vijeta Dahiya on Abhijit Dipke), ಅಭಿಜಿತ್​ ದಿಪ್ಕೆ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.

ನನ್ನನ್ನು ಬಲಿ ಕಾ ಬಕ್ರಾ ಮಾಡಿದರು!

ತಮ್ಮನ್ನು ಪಕ್ಷದಿಂದ ಆಚೆ ಹಾಕಿದ ಬಗ್ಗೆ ವಿಡಿಯೋ ಹಂಚಿಕೊಂಡಿರು ವಿಜೇತಾ ದಹಿಯಾ, ನಾನು ಆ ದಿನ ಹೋರಾಟದಲ್ಲಿ ಭಾಗವಹಿಸಿದ್ದೆ. ಕೆಲ ಸಮಯದ ನಂತರ ನನಗೆ ಹಸಿವಾಯಿತು ಹೀಗಾಗಿ ತಿಂಡಿ ತಿನ್ನಲು ಆಚೆ ಹೋಗಿದ್ದೆ. ಆದರೆ ನಾನು ಬರ್ಗರ್​ ತಿನ್ನುವುದನ್ನು ದೊಡ್ಡ ಸಂಗತಿ ಎಂಬಂತೆ ಬಿಂಬಿಸಿದ ಹಿನ್ನಲೆ ನನ್ನನ್ನು ಪಕ್ಷದಿಂದ ತೆಗೆದು ಹಾಕಲಾಗಿದೆ. 
ಆದರೆ ಸೋನಮ್​ ವಾಂಗ್​​ಚುಕ್​ ಅವರು ಉಪವಾಸ ಕುಳಿತಾಗ ಅಭಿಜಿತ್​ ದಿಪ್ಕೆ ಅವರ ಎದುರೇ ಕಚೋರಿ, ಸಮೋಸ ತಿನ್ನುತ್ತಿದ್ದ, ಆಗ ಅವನ ಪರವಾಗಿ ನಾನು ನಿಂತಿದ್ದೆ, ಅವನ ಪರ ನಿಂತು ನಾನು ಮಾತನಾಡಿದ್ದೆ. ಆದರೆ ನನ್ನ ವಿಚಾರದಲ್ಲಿ ಯಾರು ನನ್ನ ಪರ ನಿಲ್ಲಲಿಲ್ಲ, ನನ್ನನ್ನು ಒಂದು ರೀತಿಯಲ್ಲಿ ಬಲಿಕುರಿಯಾಗಿ ಮಾಡಿದರು ಎಂದು ಬೇಸರ ಹೊರಹಾಕಿದ್ದಾರೆ. 

ನನ್ನ ಬೆಂಬಲ ನಿಮಗೆ ಇದ್ದೇ ಇರುತ್ತದೆ!

ನನ್ನನ್ನು ಸಿಜೆಪಿಯಿಂದ ತೆಗೆದು ಹಾಕಿರಬಹುದು. ಆದರೆ ನನ್ನ ಬೆಂಬಲ ಈ ಹೋರಾಟಕ್ಕೆ ಇದ್ದೇ ಇರುತ್ತದೆ. ನಮ್ಮ ಈ ಹೋರಾಟದಿಂದ ಸರ್ಕಾರಕ್ಕೆ ಬಿಸಿ ಮುಟ್ಟಿದ್ದು, ಅವರು ನಮ್ಮ ಜೊತೆ ಚರ್ಚೆಗೆ ಬಂದೇ ಬರುತ್ತಾರೆ, ನಮ್ಮ ಬೇಡಿಕೆಗಳು ಈಡೇರುತ್ತವೆ ಎಂದು ದಹಿಯಾ ಭರವಸೆ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್​).