- ತಮಿಳುನಾಡಿನ ನೂತನ ಸಿಎಂ ಜೋಸೆಫ್ ವಿಜಯ್
- ಇಂದು ಪ್ರಮಾಣವಚನ ಸ್ವೀಕರಿಸಿದ ಟಿವಿಕೆ ನಾಯಕ ವಿಜಯ್
- ರಾಜಕೀಯ ಭಾಷಣದಲ್ಲಿ ಪಂಚ್ ಡೈಲಾಗ್ ಹೊಡೆದ ದಳಪತಿ
CM Vijay: ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ ನಾಯಕ ವಿಜಯ್ರನ್ನು ಮೂರು ಬಾರಿ ವಾಪಾಸ್ ಕಳುಹಿಸಿದ್ದ ರಾಜ್ಯಪಾಲರು, ಕಡೆಗೂ ನಾಲ್ಕನೇ ಭೇಟಿಯಲ್ಲಿ ಮ್ಯಾಜಿಕ್ ನಂಬರ್ ದಾಟಿದ್ದನ್ನು ತೋರಿಸಿದ ಬೆನ್ನಲ್ಲೇ ಸರ್ಕಾರ ರಚನೆಗೆ ಅಸ್ತು ಎಂದರು. ಇಂದು ಬೆಳಗ್ಗೆ ಪ್ರಮಾಣವಚನ ಸ್ವೀಕರಿಸುವ ಮೂಲಕ ದಳಪತಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಹರ್ಷೋದ್ಗಾರಗಳ ನಡುವೆ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ರಾಜ್ಯಪಾಲ ಆರ್. ಲೇಕರ್ ಅವರು ನೂತನ ಸಿಎಂಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ, ಮೂರು ಫೈಲ್‌ಗಳಿಗೆ ಸಹಿ ಹಾಕಿದ ವಿಜಯ್, ತಮ್ಮ ಭಾಷಣದಲ್ಲಿ ಥೇಟ್ ಸಿನಿಮಾದಲ್ಲಿ ಡೈಲಾಗ್ ಹೊಡೆಯುವಂತೆ ಸಖತ್ ಪಂಚ್ ಡೈಲಾಗ್ ಹೊಡೆದು ತಮ್ಮ ಫ್ಯಾನ್ಸ್ಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಭಾಷಣದಲ್ಲಿ ದಳಪತಿಯ 12 ಪಂಚ್ ಡೈಲಾಗ್‌ಗಳಿವು
1. ಸರ್ಕಾರದಲ್ಲಿ ಒಂದೇ ಒಂದು ಶಕ್ತಿ ಕೇಂದ್ರ ಇದೆ. ಅದು ನಾನು! ಬೇರೆ ಯಾವುದೇ ಶಕ್ತಿ ಕೇಂದ್ರ ಇಲ್ಲಿಲ್ಲ, ಬೇರೆ ಯಾವುದೇ ಶಕ್ತಿ ಕೇಂದ್ರ ಇರುವುದೂ ಇಲ್ಲ.
2. ಇದು ಹೊಸ ಆರಂಭ. ಹೊಸ ಯುಗದ ಸಾಕ್ಷಿ. ಜಾತ್ಯತೀತ, ಸಾಮಾಜಿಕ ನ್ಯಾಯ ಇನ್ಮುಂದೆ ಶುರು.
3. ಈ ವಿಜಯ್ ಎಂದಿಗೂ ತಪ್ಪು ಮಾಡೋದಿಲ್ಲ. ಯಾರನ್ನೂ ತಪ್ಪು ಮಾಡಲು ಬಿಡುವುದಿಲ್ಲ.
4. ನಾನು ಜನರ ಹಣದಿಂದ ಒಂದು ಪೈಸೆಯನ್ನೂ ತಿನ್ನೋದಿಲ್ಲ. ನನಗೆ ಅವರ ಹಣ ಬೇಡ.
5. ನಾನು ಏನೇ ಮಾಡಿದ್ರೂ ಅದನ್ನು ಧೈರ್ಯದಿಂದ, ಬಹಿರಂಗವಾಗಿ ಮತ್ತು ಪಾರದರ್ಶಕವಾಗಿ ಮಾಡುವೆ
6. ನಾನು ನಿಮಗೆ ಎಂದಿಗೂ ಸುಳ್ಳು ಭರವಸೆಗಳನ್ನು ಕೊಡುವುದಿಲ್ಲ. ಪೂರೈಸಬಹುದಾದ ಭರವಸೆಗಳನ್ನು ಮಾತ್ರ ನೀಡುತ್ತೇನೆ.
7. ಈ ಕ್ಷಣದಿಂದ ಮಾದಕ ದ್ರವ್ಯಗಳನ್ನು ಹತೋಟಿಗೆ ತರಲು ಕ್ರಮ ಜರುಗಿಸುವೆ
8. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ
9. ಕೆಲವರು ನನ್ನನ್ನು ಟೀಕಿಸಬಹುದು, ಸ್ನೇಹಿತರಾಗಬಹುದು. ಶತ್ರುಗಳೂ ಆಗಬಹುದು. ಆದರೆ, 8 ಕೋಟಿ ಜನ ನನ್ನವರು.
10. ನಾನು ದೊಡ್ಡ ದೇವದೂತನಲ್ಲ ಅಥವಾ ಪ್ರವಾದಿಯೂ ಅಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ.
11. ನಾನು ರಾಜಮನೆತನದಿಂದ ಬಂದವನಲ್ಲ. ನಾನೂ ನಿಮ್ಮಲ್ಲಿ ಒಬ್ಬ.
12. ಕೋಟ್ಯಂತರ ಜನರು ನನ್ನ ಬೆಂಬಲಕ್ಕೆ ನಿಂತರೆ ನಾನು ಏನನ್ನಾದರೂ ಸಾಧಿಸಬಹುದು ಎಂದು ನಂಬಿರುವವನು ನಾನು.