Financial Mistakes 
ದೇಶ

ಈ 9 ಹಣಕಾಸು ತಪ್ಪುಗಳಿಂದ ನಿಮ್ಮ ಸಂಪತ್ತು ಬೇಗ ಕುಸಿಯುತ್ತದೆ! ಇದನ್ನು ತಪ್ಪದೇ ತಿಳಿದುಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಹಣಕಾಸು ನಿರ್ವಹಣೆಯಲ್ಲಿ ಈ 9 ತಪ್ಪುಗಳನ್ನು ಮಾಡದಿರಿ
  • ಹೂಡಿಕೆ ಮಾಡುವಲ್ಲಿ ಎಚ್ಚರಿಕೆಯಿಂದ ಮಾಡಿ
ಬೆಂಗಳೂರು: ಹಣದ ನಿರ್ವಹಣೆಯಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳು ನಮ್ಮ ಆದಾಯವನ್ನು ನಿಧಾನವಾಗಿ ಕಸಿಯುತ್ತದೆ. ಕೆಲವರಿಗೆ ಒಂದೇ ಸಂಬಳದಲ್ಲಿ ಮನೆಯ ವೆಚ್ಚಗಳನ್ನು ನಿರ್ವಹಿಸುವುದು ಅನಿಶ್ಚಿತವಾಗಿರುವುದರಿಂದ, ತಮ್ಮ ಕುಟುಂಬಗಳಲ್ಲಿ ಏಕೈಕ ಆದಾಯ ಗಳಿಸುವವರಿಗೆ ಈ ಪರಿಸ್ಥಿತಿಯು ವಿಶೇಷವಾಗಿ ಕಳವಳಕಾರಿಯಾಗಿದೆ. 
ಹಣದ ನಿರ್ವಹಣೆಯಲ್ಲಿ  ಈ 9 ಸಾಮಾನ್ಯ ತಪ್ಪುಗಳನ್ನು ಮಾಡುವುದರಿಂದ ಹಣ ಬೇಗ ಖಾಲಿಯಾಗಿ ತಲೆಮೇಲೆ ಕೈಹೊತ್ತು ಕೂತುಕೊಳ್ಳುತ್ತೇವೆ. ಗಳಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಒಂಬತ್ತು ಸಾಮಾನ್ಯ ತಪ್ಪುಗಳನ್ನು ತಿಳಿದು, ಅದನ್ನು ಇಂದಿನಿಂದಲೇ ಬದಲಾವಣೆ ಮಾಡಿದರೆ ನಿಮ್ಮ ಹಣಕಾಸು ಸುಧಾರುತ್ತದೆ.

1.ವಿಮೆ ಹೂಡಿಕೆ ಅಲ್ಲ

ಸಾಮಾನ್ಯವಾಗಿ ಭಾರತದಲ್ಲಿ ಹಲವರು ವಿಮೆಯನ್ನು ಹೂಡಿಕೆ ಎಂದು ಭಾವಿಸುತ್ತಾರೆ. ಏಕೆಂದರೆ ಇದರಲ್ಲಿ ಲಾಭ ಮತ್ತು ರಕ್ಷಣೆ ಎರಡನ್ನೂ ನಿರೀಕ್ಷೆ ಮಾಡುತ್ತಾರೆ. ಲಾಂಗ್​ ಟರ್ಮ್ ಯೋಜನೆ ಅಥವಾ ಸಂಪೂರ್ಣ ಜೀವ ವಿಮೆ ಪಾಲಿಸಿಗಳನ್ನು ಖರೀದಿಸುತ್ತಾರೆ. ಆದರೆ, ಈ ಆಯ್ಕೆಗಳು ಸಾಕಷ್ಟು ರಕ್ಷಣೆ ಮತ್ತು ಲಾಭ ಒದಗಿಸುವುದಿಲ್ಲ. ಬದಲಾಗಿ, ಸರಳ ಟರ್ಮ್ ಇನ್ಸೂರೆನ್ಸ್ ತಿಂಗಳಿಗೆ 500 ರೂ ಅಥವಾ 1000 ರೂ ಕಟ್ಟುವ 50 ಲಕ್ಷ ದಿಂದ 2 ಕೋಟಿ ವಿಮೆ ಮಾಡಿಸಿ, ಬಾಕಿ ಹಣವನ್ನು ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳಿತು. 
2.ಲೋನ್‌ಗೆ ಕೋ-ಸೈನರ್ ಆಗುವುದು
ಸ್ನೇಹಿತ ಅಥವಾ ರಿಸ್ತೇದಾರರ ಲೋನ್‌ಗೆ ಗ್ಯಾರಂಟರ್ ಆಗಿ ಸಹಿ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಹಾನಿಯಾಗಬಹುದು. ಲೋನ್ ತೆಗೆದುಕೊಳ್ಳುವವರ ಸಾಮರ್ಥ್ಯವನ್ನು ಆಳವಾಗಿ ಪರಿಶೀಲಿಸಿ. ಸಾಧ್ಯವಾದರೆ ತಪ್ಪಿಸಿ.

3.ಕ್ರೆಡಿಟ್ ಕಾರ್ಡ್‌ನ ಮಿನಿಮಮ್ ಅಮೌಂಟ್ ಮಾತ್ರ ಪಾವತಿ 

ಮತ್ತೊಂದು ಅಪಾಯಕಾರಿ ಅಭ್ಯಾಸವೆಂದರೆ ಕ್ರೆಡಿಟ್ ಕಾರ್ಡ್‌ಗಳಿಗೆ ಪಾವತಿಸಬೇಕಾದ ಕನಿಷ್ಠ ಮೊತ್ತವನ್ನು ಮಾತ್ರ ಪಾವತಿಸುವುದು. ಈ ಅಭ್ಯಾಸವು ವಾರ್ಷಿಕ ಶೇಕಡಾ 36-40 ರಷ್ಟು ಬಡ್ಡಿದರಗಳನ್ನು ವಿಧಿಸುತ್ತದೆ. ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸಲು ಪೂರ್ಣ ಬಿಲ್ ಪಾವತಿಸುವುದು ಅಥವಾ ಕಾರ್ಡ್ ಬಳಸುವುದನ್ನು ತಪ್ಪಿಸುವುದು ಕಡ್ಡಾಯವಾಗಿದೆ.

4.ಜ್ಞಾನವಿಲ್ಲದೆ ಹೂಡಿಕೆ 

ಕ್ರಿಪ್ಟೋ, NFT ಅಥವಾ ಟಿಪ್ಸ್‌ನ ಆಧಾರದಲ್ಲಿ ಅಪರಿಚಿತ ಹೂಡಿಕೆಗಳು ಮಾಡೋದು ಅಪಾಯಕಾರಿ. ಹೀಗಾಗಿ, ಹೂಡಿಕೆಯನ್ನು ಒಂದು ವಾಕ್ಯದಲ್ಲಿ ವಿವರಿಸಲು ಸಾಧ್ಯವಲ್ಲದಿದ್ದರೆ ತಪ್ಪಿಸಿ. FOMOಗೆ ಬಲಿಯಾಗಬೇಡಿ.

5.ಲೈಫ್‌ಸ್ಟೈಲ್ ಇನ್‌ಫ್ಲೇಷನ್

ಸಂಬಳ ಹೆಚ್ಚಾದ ಮೇಲೆ ಖರ್ಚುಗಳನ್ನು ಹೆಚ್ಚಿಸುವುದು ಕೂಡ ಹಣ ವ್ಯಯವಾಗುತ್ತದೆ. ಹೌದು, ಸಂಬಳ ಹೈಕ್​ ಆದ್ರೆ ಅಥವಾ ಕೈಯಲ್ಲಿ ದುಡ್ಡು ಜಾಸ್ತಿಯಾದರೆ ಲಕ್ಷ್ವರಿ ಐಟಂಗಳು ಖರೀದಿ ಮಾಡೋದು ಸಾಮಾನ್ಯ ತಪ್ಪು. ಇದನ್ನು ಜೀವನಶೈಲಿ ಹಣದುಬ್ಬರ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, 2 ಲಕ್ಷ ರೂ. ಗಳಿಸಿ ಅದನ್ನೆಲ್ಲ ಕಾರುಗಳು, ಫೋನ್‌ಗಳು ಮತ್ತು ಹೊರಗೆ ಊಟದಂತಹ ಐಷಾರಾಮಿ ವಸ್ತುಗಳಿಗೆ ಖರ್ಚು ಮಾಡುವುದು ಹಾನಿಕಾರಕ.

6.ಲೋನ್ ಮೇಲೆ ಹೊಸ ಕಾರ್ ಖರೀದಿ

ಹೊಸ ಕಾರ್ ಖರೀದಿಸಿ EMIಗಳಿಂದ ಆರ್ಥಿಕ ಒತ್ತಡ ಮತ್ತು ಮೌಲ್ಯ ಕಡಿಮೆಯಾಗುವುದು. ನಗದು ಇದ್ದರೆ ಮಾತ್ರ ಖರೀದಿಸಿ ಅಥವಾ ಸೆಕೆಂಡ್ ಹ್ಯಾಂಡ್/ಚಿಕ್ಕ ಕಾರ್ ಆಯ್ಕೆಮಾಡಿ.

7.ಒಂದೇ ಹೂಡಿಕೆಯಲ್ಲಿ ಎಲ್ಲ ಹಣವನ್ನು ಹಾಕುವುದು

ಒಂದು ಆಸ್ತಿಯಲ್ಲಿ ಎಲ್ಲ ಹಣ ಹೂಡಿದರೆ ಅಪಾಯ ಹೆಚ್ಚು. ಹೂಡಿಕೆಗಳನ್ನು ಶೇರ್‌ಗಳು, ಮ್ಯೂಚುಯಲ್ ಫಂಡ್‌ಗಳು, ಗೋಲ್ಡ್ ಬಾಂಡ್‌ಗಳಲ್ಲಿ ಇರಿಸಿ.

8.ದೊಡ್ಡ ಹೋಮ್ ಲೋನ್ 

ಸಂಬಳದ ಅರ್ಧಕ್ಕಿಂತ ಹೆಚ್ಚು EMIಗಳು ಉಳಿತಾಯವನ್ನು ಕಡಿಮೆಮಾಡಿ ಉದ್ಯೋಗ ಬದಲಾವಣೆಯನ್ನು ಕಷ್ಟಕರಗೊಳಿಸುತ್ತವೆ. ಆದರೆ, EMIಗಳನ್ನು ಸಂಬಳದ 25-30%ಗೆ ಸೀಮಿತಗೊಳಿಸಿ ಸ್ಥಿರತೆ ಇದ್ದಾಗ ಮಾತ್ರ ಮನೆ ಖರೀದಿಸಿ.

9.ಇನ್‌ಸ್ಟಂಟ್ ಲೋನ್ 

ಅತ್ಯಂತ ಹಾನಿಕಾರಕ ಅಭ್ಯಾಸವೆಂದರೆ ವಾರ್ಷಿಕವಾಗಿ 40-50 ಪ್ರತಿಶತದಷ್ಟು ಬಡ್ಡಿದರದಲ್ಲಿ ಪೇಡೇ ಅಥವಾ ತ್ವರಿತ ಸಾಲಗಳನ್ನು ತೆಗೆದುಕೊಳ್ಳುವುದು. ಬಜೆಟ್ ಯೋಜಿಸುವುದು ಮತ್ತು ತುರ್ತು ನಿಧಿಯನ್ನು ನಿರ್ವಹಿಸುವುದು ಭವಿಷ್ಯದ ಆರ್ಥಿಕ ನಾಶವನ್ನು ತಪ್ಪಿಸಬಹುದು(ಏಜೆನ್ಸೀಸ್​).