ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ 
ದೇಶ

ಬಿಹಾರ ಚುನಾವಣೆಯಲ್ಲಿ ರಿಗ್ಗಿಂಗ್ ನಡೆದಿದೆ; ಆದರೆ ನಮ್ಮ ಬಳಿ ಯಾವುದೇ ಪುರಾವೆ ಇಲ್ಲ; ಪ್ರಶಾಂತ್ ಕಿಶೋರ್ ಉವಾಚ | Prashant Kishor

ಪಾಟ್ನಾ: ಇತ್ತೀಚೆಗೆ ಮುಕ್ತಾಯಗೊಂಡಿರುವ ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಒಂದು ಸ್ಥಾನ ಗೆಲ್ಲದೇ ಹೀನಾಯವಾಗಿ ಸೋತಿರುವ ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್(Prashant Kishor), ಚುನಾವಣೆಯಲ್ಲಿ ರಿಗ್ಗಿಂಗ್ ನಡೆದಿದೆ. ಆದರೆ ಅದನ್ನು ಸಾಬೀತುಪಡಿಸಲು ನಮ್ಮಲ್ಲಿ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಪಾಟ್ನಾದಲ್ಲಿ ಮಾತನಾಡಿರುವ ಅವರು, ತಮ್ಮ ಪಕ್ಷದ ಸೋಲನ್ನು ಭಯಾನಕ ಎಂದು ಬಣ್ಣಿಸಿದ್ದು, ಪಕ್ಷದ ಅಭಿಯಾನ ತಳಮಟ್ಟದಲ್ಲಿ ಪ್ರಭಾವ ಬೀರಿದೆ. ಜನ್ ಸುರಾಜ್ ಯಾತ್ರೆಯ ಸಮಯದಲ್ಲಿ ನಮ್ಮ ತಂಡವು ಸಂಗ್ರಹಿಸಿದ ಪ್ರತಿಕ್ರಿಯೆಯೊಂದಿಗೆ ನಿಜವಾದ ಮತದಾನದ ಪ್ರವೃತ್ತಿ ಹೊಂದಿಕೆಯಾಗುತ್ತಿಲ್ಲ. ಚುನಾವಣೆ ಪ್ರಕ್ರಿಯೆಯಲ್ಲಿ ಏನೋ ತಪ್ಪಾಗಿದೆ ಎಂದು ಆರೋಪಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ಮೇಲೆ ಅಜೇಯ ಶಕ್ತಿಗಳು ಪ್ರಭಾವ ಬೀರಿವೆ. ಅಪರಿಚಿತ ಪಕ್ಷಗಳು ಲಕ್ಷಾಂತರ ಮತಗಳನ್ನು ಪಡೆದಿವೆ. ಇವಿಎಂ ಯಂತ್ರಗಳಲ್ಲಿ ತಿರುಚಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ. ಆದರೆ ನಮ್ಮ ಬಳಿ ಆ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾರೆ.
243 ವಿಧಾನಸಭಾ ಸ್ಥಾನಗಳಲ್ಲಿ 238 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜನ್ ಸುರಾಜ್ ಪಕ್ಷವು ಒಂದೇ ಒಂದು ಕ್ಷೇತ್ರವನ್ನು ಗೆಲ್ಲಲು ವಿಫಲವಾಯಿತು. ಪಕ್ಷದ ಪ್ರಾಥಮಿಕ ಅಂದಾಜಿನ ಪ್ರಕಾರ ಅದು ಕೇವಲ 2–3% ಮತಗಳನ್ನು ಮಾತ್ರ ಗಳಿಸಿದೆ, ಹೆಚ್ಚಿನ ಅಭ್ಯರ್ಥಿಗಳು ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದಾರೆ (ಏಜೆನ್ಸೀಸ್).