ಕೋ-ಪೈಲಟ್ ಬಗ್ಗೆ ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಒಮಾನ್ ಮೂಲಗಳು 
ದೇಶ

ಇದೊಂದೆ ಕಾರಣಕ್ಕೆ ಅವನನ್ನು ವಾಯುಯಾನದಿಂದ ದೂರವಿಡಲಾಗಿತ್ತು.... ಕೋ-ಪೈಲಟ್ ಬಗ್ಗೆ ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಒಮಾನ್ ಮೂಲಗಳು! | Hamam Al Hammami

Hamam Al Hammami: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ ಫ್ಲೈದುಬೈ ಕೋ ಪೈಲಟ್ ಒಮಾನ್‌ನಲ್ಲಿ ಉಗ್ರವಾದಿ ವೆಬ್‌ಸೈಟ್‌ಗಳ ಜಾಲದಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕೇ ಈ ಹಿಂದೆ ಆತನಿಗೆ ವಿಮಾನಯಾನ ವೃತ್ತಿ ಕೈಗೊಳ್ಳುವುದನ್ನು ಒಮಾನ್ ಅಧಿಕಾರಿಗಳು ತಡೆದಿದ್ದರು ಎಂದು ಒಮಾನ್‌ನ ಉನ್ನತ ಸರ್ಕಾರಿ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

Hamam Al Hammami: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ ಫ್ಲೈದುಬೈ ಕೋ ಪೈಲಟ್ ಒಮಾನ್‌ನಲ್ಲಿ ಉಗ್ರವಾದಿ ವೆಬ್‌ಸೈಟ್‌ಗಳ ಜಾಲದಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕೇ ಈ ಹಿಂದೆ ಆತನಿಗೆ ವಿಮಾನಯಾನ ವೃತ್ತಿ ಕೈಗೊಳ್ಳುವುದನ್ನು ಒಮಾನ್ ಅಧಿಕಾರಿಗಳು ತಡೆದಿದ್ದರು ಎಂದು ಒಮಾನ್‌ನ ಉನ್ನತ ಸರ್ಕಾರಿ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಹಲವಾರು ಮಾಧ್ಯಮ ವರದಿಗಳ ಪ್ರಕಾರ ಆ ವ್ಯಕ್ತಿಯನ್ನು ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಮಿ ಎಂದು ಗುರುತಿಸಲಾಗಿದೆ. ಆದಾಗ್ಯೂ, ಯುಎಇ ಅಧಿಕಾರಿಗಳು ಅಥವಾ ಫ್ಲೈದುಬೈ ಈ ವರದಿಗಳನ್ನು ಸಾರ್ವಜನಿಕವಾಗಿ ಇದನ್ನು ಖಚಿತಪಡಿಸಿಲ್ಲ.

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ FZ1073 ರ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್ ಮಚ್ಚಾರ್ ಅವರ ಮೇಲೆ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಯುನೈಟೆಡ್ ಅರಬ್ ಎಮಿರೇಟ್ಸ್ ತನಿಖೆ ಮುಂದುವರಿಸಿರುವ ಬೆನ್ನಲ್ಲೇ ಒಮಾನ್‌ನ ಈ ಸ್ಪಷ್ಟನೆ ಬಂದಿದೆ. ಯುಎಇ ಅಧಿಕಾರಿಗಳು ಮತ್ತು ಇಸ್ರೇಲ್ ಸರ್ಕಾರ ಈ ಘಟನೆಯನ್ನು ಉಗ್ರ ಕೃತ್ಯ ಎಂದು ಕರೆದಿವೆ.

ಇದನ್ನೂ ಓದಿ:ರಾಜ್ಯಸಭಾ ಚುನಾವಣೆ: ಇಬ್ಬರು ಕೇಂದ್ರ ಸಚಿವರು ಸೇರಿದಂತೆ ಎಂಟು ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್​! | BJP

ಹಿರಿಯ ಒಮಾನ್ ಸರ್ಕಾರಿ ಮೂಲಗಳ ಪ್ರಕಾರ, ಅಲ್-ಹಮ್ಮಮಿ ಒಮಾನ್ ಪ್ರಜೆಯಾಗಿದ್ದು, ತನ್ನ ಜೀವನದ ಹೆಚ್ಚಿನ ಭಾಗವನ್ನು ಯುನೈಟೆಡ್ ಅರಬ್ ಎಮಿರೇಟ್ಸ್, ಸಿರಿಯಾ ಮತ್ತು ಇತರ ದೇಶಗಳು ಸೇರಿದಂತೆ ಒಮಾನ್ ಹೊರಗೆ ಕಳೆದಿದ್ದನು. ಆತನ ತಾಯಿ ಸಿರಿಯನ್ ಎಂದು ಮೂಲಗಳು ತಿಳಿಸಿವೆ ಮತ್ತು ಅವರ ಕುಟುಂಬವು ದೀರ್ಘಕಾಲದವರೆಗೆ ಒಮಾನ್ ಹೊರಗೆ ವಾಸಿಸುತ್ತಿತ್ತು.

ಅಲ್-ಹಮ್ಮಮಿ ಒಂದು ಹಂತದಲ್ಲಿ ಒಮಾನ್ ಏರ್‌ಲೈನ್ಸ್‌ನಲ್ಲಿ ಸೀಮಿತ ಅವಧಿಗೆ ತರಬೇತಿದಾರನಾಗಿ ಕೆಲಸ ಮಾಡಿದ್ದು, ಅಲ್ಲಿನ ಸರ್ಕಾರದ ಪ್ರಕಾರ, ಆತನ ಇಂಟರ್ನೆಟ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಅಧಿಕಾರಿಗಳು ಆತನಿಗೆ ಉಗ್ರವಾದಿ ವಿಷಯಗಳ ಮೇಲಿದ್ದ ಆಸಕ್ತಿಯನ್ನು ಪತ್ತೆಹಚ್ಚಿದ್ದು ಈ ಅವಧಿಯಲ್ಲೇ ಆಗಿದೆ. ಇದರ ನಂತರ ಅಧಿಕಾರಿಗಳು ಆತನಿಗೆ ವಾಯುಯಾನ ವೃತ್ತಿಯನ್ನು ಮುಂದುವರಿಸಲು ಅನುಮತಿ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅದರ ಬಗ್ಗೆ ನಮ್ಮನ್ನೇನು ಕೇಳಿಲ್ಲ!..

ವರದಿಗಳ ಪ್ರಕಾರ, ಅಲ್-ಹಮ್ಮಮಿಯ ಸಿದ್ಧಾಂತದ ಬಗ್ಗೆ ಇದ್ದ ಕಳವಳಗಳಿಂದಾಗಿ ಈ ಹಿಂದೆ ಒಮಾನ್‌ನಲ್ಲಿ ಆತನನ್ನು ವಿಮಾನಯಾನ ಸಂಬಂಧಿತ ತರಬೇತಿ ಅಥವಾ ಕರ್ತವ್ಯಗಳಿಂದ ಮುಕ್ತಗೊಳಿಸಲಾಗಿತ್ತು. ದಿ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಇತರ ಪ್ರಕಾಶನಗಳು ಸಹ ಆತನ ಹಿಂದಿನ ವಿಮಾನಯಾನ ವೃತ್ತಿಯ ಬಗ್ಗೆ ಇದೇ ರೀತಿಯ ಕಳವಳಗಳನ್ನು ವರದಿ ಮಾಡಿವೆ. ಅಲ್ಲದೆ, ಅಲ್-ಹಮ್ಮಮಿ ಬೇರೆಡೆ ಉದ್ಯೋಗ ಪಡೆಯುವ ಮೊದಲು ಭದ್ರತಾ ಪರಿಶೀಲನೆಗಾಗಿ ಒಮಾನ್ ಅನ್ನು ಸಂಪರ್ಕಿಸಿರಲಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ನಮ್ಮ ಬಳಿ ಲಭ್ಯವಿರುವ ಎಲ್ಲಾ ಸಂಗತಿಗಳನ್ನು ಸಂಬಂಧಪಟ್ಟವರೊಂದಿಗೆ ಹಂಚಿಕೊಳ್ಳಲಾಗುತ್ತಿತ್ತು ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಸೂಕ್ತ ತಪಾಸಣೆ ನಡೆಸುವಲ್ಲಿ ವಿಫಲವಾದ ನಿರ್ದಿಷ್ಟ ವಿಮಾನಯಾನ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಯನ್ನು ಒಮಾನ್ ಮೂಲಗಳು ಹೆಸರಿಸಿಲ್ಲ. ಒಮಾನ್ ಅಧಿಕಾರಿಗಳು ವಿಮಾನಕ್ಕೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಯನ್ನು ಎತ್ತಿದ್ದಾರೆ. ಈ ಸಮಸ್ಯೆಯು ಇಸ್ರೇಲ್ ಮತ್ತು ಯುಎಇ ನಡುವಿನ ವಿಮಾನಯಾನ ವ್ಯವಸ್ಥೆಗಳಿಗೆ ಸಂಬಂಧಿಸಿದೆ.

ಒಮಾನ್ ಮೂಲಗಳ ಪ್ರಕಾರ, ಸಂಬಂಧಿತ ವಿಮಾನಯಾನ ವ್ಯವಸ್ಥೆಗಳನ್ನು ನಿಯಂತ್ರಿಸುವ ಸಾರ್ವಜನಿಕವಾಗಿ ತಿಳಿದಿರುವ ನಿಯಮಗಳ ಅಡಿಯಲ್ಲಿ, ಒಪ್ಪಂದದಿಂದ ಒಳಗೊಂಡಿರುವ ವಿಮಾನಗಳನ್ನು ಯುಎಇ ನಾಗರಿಕರು ಅಥವಾ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶಗಳ ನಾಗರಿಕರು ಮಾತ್ರ ನಿರ್ವಹಿಸಬಹುದಾಗಿದೆ. ಒಮಾನ್‌ಗೆ ಇಸ್ರೇಲ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳಿಲ್ಲ. ಆದ್ದರಿಂದ ಅಲ್-ಹಮ್ಮಮಿ ಬೇರೆ ದೇಶದ ಪೌರತ್ವ ಹೊಂದಿರಬಹುದು ಎಂದು ಒಮಾನ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ದುಬೈ-ಟೆಲ್ ಅವೀವ್ ವಿಮಾನದಲ್ಲಿ ಒಮಾನ್ ಪ್ರಜೆಯೊಬ್ಬರು ಸಹ-ಪೈಲಟ್ ಆಗಿ ಸೇವೆ ಸಲ್ಲಿಸಲು ಹೇಗೆ ಅವಕಾಶ ಸಿಕ್ಕಿತು ಎಂಬುದನ್ನು ತನಿಖಾಧಿಕಾರಿಗಳು ಈಗಾಗಲೇ ಪರಿಶೀಲಿಸುತ್ತಿದ್ದಾರೆ. ಇಸ್ರೇಲ್​ಗೆ ತೆರಳುವ ವಿಮಾನಕ್ಕೆ ಅಲ್-ಹಮ್ಮಮಿಯನ್ನು ಹೇಗೆ ನಿಯೋಜಿಸಲಾಯಿತು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ರಾಯ್ಟರ್ಸ್ ಕೂಡ ವರದಿ ಮಾಡಿದೆ.

ಎಲ್ಲಿಯೋ ಒಂದು ಕಡೆ ದೊಡ್ಡ ತಪ್ಪು ಸಂಭವಿಸಿದ್ದು, ಈ ಪ್ರಕರಣವು ಎರಡು ದೇಶಗಳ ನಡುವಿನ ಸ್ಥಾಪಿತ ಕಾರ್ಯವಿಧಾನಗಳಿಗೆ ಕಳಂಕ ಅಂಟಿಸಿದಂತೆ, ಇದರಲ್ಲಿ ಕೆಲವರ ನಿರ್ಲಕ್ಷ್ಯ, ಮೇಲ್ವಿಚಾರಣೆಯ ವೈಫಲ್ಯ ಅಥವಾ ಉದ್ದೇಶಪೂರ್ವಕ ನಿರ್ಲಕ್ಷ್ಯದಂತಹ ಅಂಶಗಳು ಸೇರಿರಬಹುದು ಎಂದು ಮೂಲಗಳು ಅನುಮಾನ ಪಟ್ಟಿವೆ(ಏಜೆನ್ಸೀಸ್​).