Nainar Nagendran on Annamalai Resignation
ಚೆನ್ನೈ: ಅಣ್ಣಾಮಲೈ ರಾಜೀನಾಮೆ ಕೊಟ್ಟ ಬಗ್ಗೆ ನಾನೇನು ಮಾತನಾಡೋದಿಲ್ಲ. ತನ್ನದೇ ಆದ ಸಿದ್ಧಾಂತ ಹೊಂದಿರುವ ಬಿಜೆಪಿ ಇತ್ತೀಚೆಗೆ ರಚನೆಯಾಗಿಲ್ಲ. ಅವರು ರಾಜೀನಾಮೆ ಕೊಟ್ಟಿರುವುದು ಪಕ್ಷದ ಮೇಲೆ ಪರಿಣಾಮ ಬೀರೋದಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ (nainar nagendran)ಹೇಳಿದರು.
ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಅಂಗೀಕರಿಸಿದ್ದಾರೆ. ಈ ಮೂಲಕ ಪಕ್ಷದ ಜೊತೆಗಿದ್ದ ಆರು ವರ್ಷದ ಸಂಬಂಧಕ್ಕೆ ತಿಲಾಂಜಲಿ ಹಾಡಿದ್ದಾರೆ. ಹನ್ನೆರಡಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ಅವರು ಹೊಸದಾಗಿ ಪ್ರಾದೇಶಿಕ ಪಕ್ಷ ಕಟ್ಟುವುದಾಗಿ ಸ್ಪಷ್ಟಪಡಿಸಿದ್ದರು.
ನೈನಾರ್ ನಾಗೇಂದ್ರನ್ ಹೀಗಂದ್ರು
ಅಣ್ಣಾಮಲೈ ನಿರ್ಗಮನದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನೈನಾರ್ ನಾಗೇಂದ್ರನ್ ಪ್ರತಿಕ್ರಿಯೆ ಕೊಟ್ಟಿದ್ದು, 'ವಿಶ್ವದ ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಯಾವುದೇ ನಷ್ಟವಾಗುವುದಿಲ್ಲ ಅಥವಾ ಹಿನ್ನಡೆಯಾಗೋದಿಲ್ಲ. ಬಿಜೆಪಿ ತನ್ನದೇ ಆದ ಸಿದ್ಧಾಂತವನ್ನು ಹೊಂದಿದೆ. ಹೀಗಾಗಿ ದೃಢವಾಗಿರುತ್ತದೆ' ಎಂದು ಹೇಳಿದರು.
ಇನ್ನೂ ಅಣ್ಣಾಮಲೈ ಹೊಸ ಪಕ್ಷ ಕಟ್ಟುವ ಬಗ್ಗೆ ಮಾತನಾಡಿದ ಅವರು, 'ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರೂ ಹೊಸದಾಗಿ ಪಕ್ಷ ಕಟ್ಟಬಹುದು. ಎಲ್ಲರಿಗೂ ರಾಜಕೀಯ ಪಕ್ಷ ಆರಂಭಿಸುವ ಸ್ವತಂತ್ರ್ಯವಿದೆ' ಎಂದರು.
ಮೋದಿ ಬಗ್ಗೆ ಸಮರ್ಥನೆ
'ರಾಜ್ಯಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ ಎಂದು ಪ್ರಧಾನಿಯವರ ಮೇಲೆ ಮಾಡಲಾಗುತ್ತಿರುವ ಆರೋಪ ಸತ್ಯಕ್ಕೆ ದೂರವಾದ ಮಾತು, ಪ್ರಧಾನಿಯವರು ಯಾವುದೇ ದೇಶಕ್ಕೆ ತೆರಳಿದರು ತಮಿಳುನಾಡಿನ ಸೊಗಡು. ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ' ಎಂದು ಸಮರ್ಥಿಸಿಕೊಂಡರು.
ಅಣ್ಣಾಮಲೈ ಹೇಳಿದ್ದು ಹೀಗೆ
'ನಾನು 2025 ಡಿಸೆಂಬರ್4ರಂದು ರಾಜೀನಾಮೆ ಕೊಡುವ ಬಗ್ಗೆ ಮಾತನಾಡಿದ್ದೆ. ಆದರೆ ವಿಧಾನಸಭಾ ಚುನಾವಣೆ ನಂತರ ನಿರ್ಗಮಿಸುವಂತೆ ಪಕ್ಷ ಹೇಳಿತ್ತು. ಅಲ್ಲಿವರೆಗೂ ಜವಾಬ್ದಾರಿ ನಿರ್ವಹಿಸುವಂತೆ ಹೇಳಿತ್ತು.ತಮಿಳುನಾಡಿನಲ್ಲಿ ಎಂದೂ ರಾಷ್ಟ್ರೀಯ ಪಕ್ಷಗಳು ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾತನಾಡಲಿಲ್ಲ. ನನ್ನ ಹಾಗೂ ಪಕ್ಷದ ಹಿರಿಯ ನಾಯಕರ ವಿಚಾರಗಳು ತಮಿಳುನಾಡಿನ ರಾಜಕೀಯದಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನುವುದನ್ನು ಮೂಲಗಳು ಸ್ಪಷ್ಟಪಡಿಸಿವೆ,(ಏಜೆನ್ಸೀಸ್).