Marriage 
ದೇಶ

ಪತಿಯ 2ನೇ ಮದುವೆಗೆ ದಿಢೀರ್​ ಎಂಟ್ರಿ ಕೊಟ್ಟ ಪತ್ನಿ! ಕಕ್ಕಾಬಿಕ್ಕಿಯಾದ ಗಂಡ ಮಾಡಿದ್ದೇನು?

ಪ್ರಮುಖ ಮುಖ್ಯಾಂಶಗಳು

  • ಪತಿಯ 2ನೇ ಮದುವೆಗೆ ಆಗ್ತಿದ್ದಂತೆ ಮಂಟಪ್ಪಕ್ಕೆ ಬಂದ ಪತ್ನಿ
  • ಪೊಲೀಸರ ಎದುರೇ ಗಂಡ- ಹೆಂಡತಿಯ ಹೈಡ್ರಾಮ
ಉತ್ತರಪ್ರದೇಶ: ಮದುವೆ ಮಂಟಪದಲ್ಲಿ ವರನ ಮೊದಲ ಪತ್ನಿ ದಿಢೀರ್​ ಎಂಟ್ರಿ ಕೊಡುವ ಮೂಲಕ ಹೈಡ್ರಾಮ ನಡೆದ ಘಟನೆ ಉತ್ತರಪ್ರದೇಶದ ಬಸ್ತಿ ನಗರದಲ್ಲಿ ನಡೆದಿದೆ.
ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಪೈಕೌಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿರೈಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಗಣೇಶಪುರದ ವಾಲ್ಟರ್‌ಗಂಜ್‌ನ ಲವ್‌ಕುಶ್ ಎಂದೂ ಕರೆಯಲ್ಪಡುವ ವಿನಯ್ ಅಂಗದ್ ಶರ್ಮಾ, ಪಿರೈಲಾದ ಸ್ಥಳೀಯ ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದರು. ನವೆಂಬರ್ 17, ಸೋಮವಾರ ರಾತ್ರಿ ವಿವಾಹ ಮೆರವಣಿಗೆ ಬ್ಯಾಂಡ್ ಮತ್ತು ಎಲ್ಲಾ ಸಾಮಾನ್ಯ ಆಚರಣೆಗಳೊಂದಿಗೆ ಆರಂಭಗೊಂಡಿತ್ತು. ಆದರೆ, ವರನ ಮೊದಲ ಪತ್ನಿ ರೇಷ್ಮಾ ಶರ್ಮಾ ಪೊಲೀಸರೊಂದಿಗೆ ಬಂದಾಗ ಕಾರ್ಯಕ್ರಮ ನಾಟಕೀಯ ತಿರುವು ಪಡೆದುಕೊಂಡಿದೆ.
ನಡೆದ ಘಟನೆ ಏನು?
ರೇಷ್ಮಾ ರಾತ್ರಿ 11:30 ರ ಸುಮಾರಿಗೆ ಮದುವೆ ಮಟಂಪಕ್ಕೆ ಬಂದು ವಿನಯ್ ಮತ್ತೆ ಮದುವೆಯಾಗಲು ಏಕೆ ಪ್ರಯತ್ನಿಸುತ್ತಿದ್ದಾನೆಂದು ಕೇಳಿದರು. ವಿನಯ್ ತನ್ನನ್ನು ಈಗಾಗಲೇ ಮದುವೆಯಾಗಿದ್ದಾನೆಂದು ಆರೋಪಿಸಿ, ಅವರ ಮದುವೆಯ ಫೋಟೋಗಳನ್ನು ಮತ್ತು ಮದುವೆ ನೋಂದಣಿ ಪ್ರಮಾಣಪತ್ರವನ್ನು ಸಹ ಜನರ ಎದುರಿಗೆ ಪ್ರದರ್ಶಿಸಿದರು. ಇದರಿಂದ ಕಕ್ಕಾಬಿಕ್ಕಿಯಾದ ವರ ವಿನಯ್ ಅವಳು ಯಾರೆಂದು ನನಗೆ ತಿಳಿದಿಲ್ಲ ಎಂದು ನಿರಾಕರಿಸಿದನು. ಅಲ್ಲದೆ, ತಾನು ಎಂದಿಗೂ ಮದುವೆಯಾಗಿಲ್ಲ ಎಂದು ಹೇಳಿಕೊಂಡನು ಎಂದು ವರದಿ ಉಲ್ಲೇಖಿಸಿದೆ. ಇನ್ನು ಮಂಟಪದಲ್ಲಿನ ವಾಗ್ವಾದ ವಿಡಿಯೋಗಳು ವೈರಲ್​ ಆಗಿವೆ.
ದೂರ ಸರಿದ ವಧು
ವಧುವಿನ ಮನೆಯವರು ರೇಷ್ಮಾಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಈ ಘರ್ಷಣೆಯಿಂದ ವಧು ಅಸಮಾಧಾನಗೊಂಡು ಅವಳು ಮಂಟಪದಿಂದ ಎದ್ದು ಬೇರೆ ಕೋಣೆಗೆ ಹೋದಳು. ಸ್ವಲ್ಪ ಸಮಯದ ಬಳಿಕ, ಮದುವೆಯನ್ನು ವರನ ಜೊತೆ ಆಗಲು ಅವಳು ನಿರಾಕರಿಸಿದ್ದಾಳೆ.
ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಜಗಳ ತಡೆದು, ವಿನಯ್ ಮತ್ತು ರೇಷ್ಮಾ ಇಬ್ಬರನ್ನೂ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ(ಏಜೆನ್ಸೀಸ್​).