ಆರ್‌ಎಸ್‌ಎಸ್ ನಾಯಕ ಸಿ.ಆರ್.ಮುಕುಂದ ಸುದ್ದಿಗೋಷ್ಠಿ
ವಿಶಾಖಪಟ್ಟಣ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಭ್ರಷ್ಟಾಚಾರವನ್ನಷ್ಟೇ ಅಲ್ಲ, ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಪ್ರತಿಬಿಂಬಿಸಿದೆ, ಈ ಕುರಿತು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಶುಕ್ರವಾರ(ಆ. 21) ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಹೇಳಿದೆ.
ವಿಶಾಖಪಟ್ಟಣದಲ್ಲಿ ನಡೆದ ಸಂಘದ ಮೂರು ದಿನಗಳ ಸಮನ್ವಯ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಎಸ್‌ಎಸ್ ನಾಯಕ ಸಿಆರ್ ಮುಕುಂದ, ದೇಶಾದ್ಯಂತ ವ್ಯವಸ್ಥೆಗಳಲ್ಲಿ ಕೊರತೆಗಳಿದ್ದರೂ, ಅಡ್ಡಿಪಡಿಸುವಿಕೆ ಅಥವಾ ವಿನಾಶದ ಮೂಲಕ ಬದಲಾವಣೆಯನ್ನು ತರಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳು ಒಂದು ದೊಡ್ಡ ಸಮಸ್ಯೆಯ ಲಕ್ಷಣವೆಂದು ಸಭೆಯಲ್ಲಿ ಚರ್ಚಿಸಲಾಯಿತು. ಮತ್ತು ನೀಟ್‌ನಂತಹ ವೈಯಕ್ತಿಕ ಸಮಸ್ಯೆಗಳನ್ನು ಮೀರಿದ ಕಳವಳಗಳಿಗೆ ಸರ್ಕಾರ ಸ್ಪಂದಿಸಬೇಕು. ಶಿಕ್ಷಣ, ಉದ್ಯೋಗಳ ಬಗ್ಗೆಯೂ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗಳನ್ನು ರಚನಾತ್ಮಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಸಂಘ ವ್ಯವಸ್ಥೆ ಉತ್ತಮ ರೀತಿಯಲ್ಲಿ ನಡೆಯಬೇಕೆಂದು ಬಯಸುತ್ತದೆ. ಅದನ್ನು ಮಾಡಲು ಸರ್ಕಾರವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ವ್ಯವಸ್ಥೆಯನ್ನು ಸರಿಪಡಿಸಲು ಸಮಾಜವನ್ನು ಜಾಗೃತಗೊಳಿಸಬೇಕು. ಯುವಕರ ಭವಿಷ್ಯದ ಆತಂಕಗಳನ್ನು ನಾವು ಪರಿಹರಿಸಬೇಕು ಎಂದಿದ್ದಾರೆ.
ಇದು ಕೇವಲ ನೀಟ್ ಅಥವಾ ಒಂದೇ ಸರ್ಕಾರದ ಬಗ್ಗೆ ಅಲ್ಲ. ದೇಶಾದ್ಯಂತ ವ್ಯವಸ್ಥೆಗಳಲ್ಲಿ ವಿವಿಧ ನ್ಯೂನತೆಗಳಿವೆ. ಇದನ್ನು ನಿವಾರಿಸಲು ಸರ್ಕಾರ ಮತ್ತು ಸಮಾಜ ಎರಡೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಈ ದೃಷ್ಟಿಕೋನದಿಂದಲೇ ಆರ್‌ಎಸ್‌ಎಸ್ ಸಭೆಯು ಈ ವಿಷಯದ ಬಗ್ಗೆ ಚರ್ಚೆ ನಡೆಸಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).