ಸಾಂದರ್ಭಿಕ ಚಿತ್ರ 
ದೇಶ

ಕಾರ್ಮಿಕ ಸುರತೆಯ ಬಲ, ಆತ್ಮನಿರ್ಭರ ಭಾರತಕ್ಕಾಗಿ ಛಲ

ನಮ್ಮ ದೇಶವು ವಿಶ್ವದ ಅತ್ಯುನ್ನತ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯೊಂದಿಗೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ (ವಿಶ್ವದ ಒಟ್ಟೂ ಜನಸಂಖ್ಯೆಯ ಶೇ. 17) ಬೃಹತ್​ ಮಾನವ ಸಂಪನ್ಮೂಲ ದೇಶವಾಗಿದೆ. ಭಾರತವನ್ನು ಸಮೃದ್ಧ ರಾಷ್ಟ್ರವನ್ನಾಗಿಸಿ ಅಭಿವೃದ್ಧಿಯ ಪಥದಲ್ಲಿ ಜಾಗತಿಕ ಮುಂಚೂಣಿಯ ಮೊದಲ ಸ್ಥಾನದಲ್ಲಿ ನಿಲ್ಲಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಮಹಾ ಪ್ರತಿಜ್ಞೆಯಾಗಿದೆ.
ಒಂದು ದೇಶ ಸಬಲವಾಗಿ ಎದ್ದು ನಿಲ್ಲಬೇಕಾದರೆ ಆ ದೇಶದ ಮಾನವ ಸಂಪನ್ಮೂಲದ ಸದ್ಬಳಕೆಗೆ ಆದ್ಯತೆ ನೀಡಬೇಕು. ಪ್ರತಿ ಪ್ರಜೆಯ ಬದ್ಧತೆಯ ಪರಿಶ್ರಮಕ್ಕೆ ವಿಶೇಷ ಕಾಳಜಿ, ಸುರತೆ ಹಾಗೂ ಉತ್ತೇಜನ ನೀಡುವ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕೆಂಬುದು ತಜ್ಞರ ಅಭಿಮತ. ಇದನ್ನು ಅಕ್ಷರಶಃ ಒಪ್ಪುವ ಕೇಂದ್ರ ಸರ್ಕಾರ ವಿಕಸಿತ ಭಾರತ ನಿರ್ಮಾಣಕ್ಕಾಗಿ ಕಾರ್ಮಿಕ ಇಲಾಖೆಯ ಕಾನೂನುಗಳಿಗೆ ಪ್ರಗತಿಯಲ್ಲಿ ಸುಧಾರಣೆಯ ಸ್ವರೂಪ ನೀಡುತ್ತಿದೆ.
ಶ್ರಮಿಕ ವರ್ಗ ಹಾಗೂ ಸ್ವಾವಲಂಬಿ ಬದುಕು ಅವಲಂಬಿಸಿರುವವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಒಟ್ಟು ಸಮಾಜದ ಪರಿಕಲ್ಪನೆಯನ್ನು ಪಡಿಮೂಡಿಸುವ ಸಮಾಜ ಶಿಲ್ಪಿಗಳು ನಮ್ಮ "ಕಾಯಕ ವರ್ಗ' ಎಂದು 12ನೇ ಶತಮಾನದಲ್ಲಿ ಜಗತ್ತಿಗೆ ತೋರಿಸಿಕೊಟ್ಟು "ವಿಶ್ವ ಗುರು' ಎನಿಸಿಕೊಂಡವರು ನಮ್ಮ ಬಸವಣ್ಣನವರು. ಶ್ರಮಿಕ ವರ್ಗಗಳ ಕೌಶಲಕ್ಕೆ ಗೌರವ, ಸಮಾನತೆ, ಸ್ವಾಭಿಮಾನ ದೊರಕಬೇಕೆಂದರೆ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಬಸವಣ್ಣನವರು ಮಾನವ ಶ್ರೇಷ್ಠತೆಯ ಅರಿವು ಮೂಡಿಸಲು "ಕಾಯಕವೇ ಕೈಲಾಸ' ಎಂದು ದುಡಿಮೆಯಲ್ಲಿ ದೇವರನ್ನು ಕಾಣುವ ಸಂದೇಶವನ್ನು ನೀಡುವ ಮೂಲಕ ಯುಗದ ಕ್ರಾಂತಿಪುರುಷರಾಗಿ ಶಾಶ್ವತ ಜಗಜ್ಯೋತಿಯಾದರು.
ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಯಾವುದೇ ಭಾಗಕ್ಕೆ ತೆರಳಿದರೂ ಸಂದರ್ಭ ಬಂದಾಗಲೆಲ್ಲ ವಿಶ್ವಗುರು ಬಸವಣ್ಣನವರನ್ನು ಉಲ್ಲೆಖಿಸಿ ಮಾತನಾಡುತ್ತಾರೆ. ಗತಕಾಲದ ಕೋಟಿ ಕೋಟಿ ಭಾರತೀಯರ ಕನಸು ನನಸಾದ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಪರಿಪೂರ್ಣತೆಯನ್ನು ಸಂಕೇತಿಸಿದ ಮೊನ್ನೆಯ ರಾಮಧ್ವಜಾರೋಹಣ ಸಂದರ್ಭದಲ್ಲಿಯೂ ಬಸವಣ್ಣನವರನ್ನು ಮೋದಿಯವರು ಉಲ್ಲೆಖಿಸಿದರು. ಸ್ವಾವಲಂಬಿ ಭಾರತ ನಿರ್ಮಾಣ ಶ್ರಮಿಕ ವರ್ಗವನ್ನು ಉತ್ತೇಜಿಸುವುದರಿಂದ ಮಾತ್ರ ಸಾಧ್ಯ ಎಂದು ನಂಬಿರುವ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳಿಗೆ ಸುಧಾರಿತ ಮಾರ್ಪಾಟುಗಳನ್ನು ಮಾಡಿ, ಮಾನವ ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಆತ್ಮಗೌರವ ಸಿಗುವಂತೆ ನಿರ್ಧಾರಗಳನ್ನು ಕೈಗೊಂಡಿದೆ.
ಈ ಹಿಂದೆ ದೇಶವು ಕಾರ್ಮಿಕ ಹಿತಾಸಕ್ತಿಗೆ ಪೂರಕವಲ್ಲದ ಕಾನೂನುಗಳನ್ನು ಅಳವಡಿಸಿಕೊಂಡು, ಶ್ರಮಿಕ ವರ್ಗವನ್ನು ನಲುಗಿಸುತ್ತಿತ್ತು. ರಾಜಕೀಯ ಕಾರಣಗಳಿಗಾಗಿ ಕಾರ್ಮಿಕ ಸಂಟನೆಗಳನ್ನು ದುರುಪಯೋಗ ಮಾಡಿಕೊಳ್ಳುವ ಚಟುವಟಿಕೆಗಳು ಮೇಲುಗೈ ಸಾಧಿಸಿದ್ದರ ಪರಿಣಾಮವಾಗಿ ಇತ್ತ ಕಾರ್ಮಿಕ ಕಲ್ಯಾಣವೂ ಆಗದೇ ಹೆಚ್ಚಿನ ಉದ್ಯೋಗ ಸೃಷ್ಟಿ ಹಾಗೂ ಉತ್ಪನ್ನಗಳ ವೃದ್ಧಿ ಗುರಿ ಸಾಧಿಸದೇ ಕೈಗಾರಿಕಾ ಚಟುವಟಿಕೆಗಳಿಗೂ ಅಡಚಣೆ ಉಂಟಾಗುತ್ತಿತ್ತು. ಶ್ರಮಿಕ ವರ್ಗ ಸರ್ಕಾರದ ಮೇಲೆ ಹಾಗೂ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು.
ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಾಮರ್ಶಿಸಿ ಕಾಯಕ ವರ್ಗಕ್ಕೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ "ಶ್ರಮೇವ ಜಯತೇ' ಎಂಬ ಘೋಷವಾಕ್ಯವನ್ನು ಮುಂದಿಟ್ಟುಕೊಂಡು ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ಗೌರವ ತಂದುಕೊಡುವ ಪ್ರಯತ್ನ ಹಾಗೂ ಕಾರ್ಮಿಕ ಕಲ್ಯಾಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೊಸ ನೀತಿಗಳನ್ನು ರೂಪಿಸಿದೆ.
ಪ್ರಧಾನಿ ನರೇಂದ್ರ ಮೋದಿ "ವಸಾಹತುಶಾಹಿ ಮನೋಭಾವವನ್ನು ತೊರೆಯಿರಿ' ಎಂಬ ಸಂದೇಶ ನೀಡುವ ಮೂಲಕ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಮುಂದಿನ ಗುರಿ ಸಾಧಿಸಬೇಕು ಎಂದು ಕರೆ ನೀಡಿದ್ದಾರೆ. ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡಿದ್ದ ಕಾನೂನುಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಸುಧಾರಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಚದುರಿ ಹೋಗಿದ್ದ 29 ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಿ ನಾಲ್ಕು ಸರಳ ಮತ್ತು ಸ್ಪಷ್ಟ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲಾಗಿದೆ.
  1. ವೇತನ ಸಂಹಿತೆ,
  2. ಕೈಗಾರಿಕಾ ಸಂಬಂಧ ಸಂಹಿತೆ,
  3. ಸಾಮಾಜಿಕ ಸುರತಾ ಸಂಹಿತೆ,
  4. ವೃತ್ತಿಪರ ಸುರತೆ, ಆರೋಗ್ಯ ಮತ್ತು ಕಾರ್ಯಸ್ಥಿತಿಗಳ ಸಂಹಿತೆ.
ಕಳೆದ ನ. 21ರಿಂದ ಈ ಸಂಹಿತೆಗಳು ಜಾರಿಗೆ ಬಂದಿವೆ. ಈ ಸುಧಾರಿತ ಕಾನೂನುಗಳ ಮೂಲಕ ಕಾರ್ಮಿಕರ ಸರ್ವ ಸುರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಬಲ ಚೌಕಟ್ಟನ್ನು ರೂಪಿಸಲಾಗಿದೆ. ಭಾರತವು ಜಗತ್ತಿನ ವೇಗದ ನಡಿಗೆಯೊಂದಿಗೆ ಸಮರ್ಥವಾಗಿ ಹೆಜ್ಜೆ ಹಾಕುತ್ತಿದ್ದು, ಜಾಗತಿಕ ವಲಯದಲ್ಲಿ ಆರ್ಥಿಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮಾನವ ಶ್ರಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣದ ಸಂಕಲ್ಪ ಸಾಧನೆಗಾಗಿ ಸುಧಾರಿತ ಕಾರ್ಮಿಕ ಕಾನೂನು ಬಹುದೊಡ್ಡ ಶಕ್ತಿ ನೀಡಲಿದೆ ಎಂದು ವ್ಯಾಖ್ಯಾನಿಸಬಹುದಾಗಿದೆ. ನಮ್ಮ ದೇಶದಲ್ಲಿ ಈ ಹಿಂದಿನಿಂದಲೂ ಶ್ರಮಿಕ ವರ್ಗವನ್ನು ಶೋಷಿಸುವ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಇದರಿಂದ ಶ್ರಮಿಕ ವರ್ಗದವರ ಬದುಕು ಹಾಗೂ ದೇಶದ ಅಭಿವೃದ್ಧಿ ಇವೆರಡೂ ಸಂಕಷ್ಟ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದವು,
ಶ್ರಮಿಕ ವರ್ಗವೆಂದರೆ ದೇಶವನ್ನು ಕಟ್ಟುವವರು, ದೇಶವನ್ನು ರಸುವವರು ಎಂಬ ವಾಸ್ತವ ಸತ್ಯವನ್ನು ವ್ಯವಸ್ಥೆಯಿಂದ ಮುಚ್ಚಿಟ್ಟು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾನವ ಶ್ರಮದ ರಕ್ತ ಹಾಗೂ ಬೆವರ ಹನಿಯನ್ನು ತಮ್ಮ ಸ್ವಾರ್ಥಕ್ಕಾಗಿ ಹೀರುತ್ತಿದ್ದವು. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ದೇಶ ಮುನ್ನಡೆಯ ಹಾದಿಯಲ್ಲಿ ಕ್ರಿಯಾಶೀಲವಾಗಿ ಚಲಿಸಲು ಸಾಧ್ಯವೇ ಆಗಲಿಲ್ಲ. ಮೋದಿಯವರು ಪ್ರಧಾನಿಯಾದ ನಂತರ ಮಾನವ ಶ್ರಮದ ಬೆವರಿನಿಂದ ರಾಷ್ಟ್ರವನ್ನು ಬಂಗಾರಮಯ ಮಾಡಬಹುದು ಎಂಬ ಸತ್ಯ ಅರಿತು ದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಜನಪರ ಯೋಜನೆಗಳಿಗೆ ಚಾಲನೆ ನೀಡಿದರು. ಈ ನಿಟ್ಟಿನಲ್ಲಿ ಸ್ವಾವಲಂಬಿ ಭಾರತದ ಮೂಲಕ ವಿಕಸಿತ ಭಾರತವನ್ನು ನಿರ್ಮಾಣ ಮಾಡುವ ಅವರ ಮಹಾಸಂಕಲ್ಪದ ಗುರಿ ಸಾಧನೆಗೆ ಅತ್ಯಮೂಲ್ಯ ಮಾನವ ಶ್ರಮವನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆಗಳಿಗೆ ಮುಂದಾಗಿ ಈ ಸುಧಾರಿತ ಕಾನೂನನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಕೃಷಿ ಕಾರ್ಮಿಕರು ಒಳಗೊಂಡಿರುವುದು ಅತ್ಯಂತ ವಿಶೇಷವಾಗಿದೆ.
ಕಾನೂನು ಬದ್ಧ ಕನಿಷ್ಠ ವೇತನದ ಖಾತ್ರಿ, ಆರೋಗ್ಯ ರಣೆ, ಸಂಬಳ, ರಜೆ, ಮುಂತಾದವುಗಳಲ್ಲಿ ನ್ಯಾಯಪರತೆಯನ್ನು ಕಾಯ್ದುಕೊಂಡು "ಸ್ಥಿರ ಅವಧಿಯ ಉದ್ಯೋಗ' (ಎಫ್​ಟಿಇ) ಎಂಬ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದು ಕಾರ್ಮಿಕರಿಗೆ ಖಾಯಂ ಉದ್ಯೋಗಿಗಳಂತೆಯೇ ವೇತನ ಸೌಲಭ್ಯಗಳು ಹಾಗೂ ಇತರ ಎಲ್ಲ ಸೌಲಭ್ಯಗಳು ಸಿಗುವಂತೆ ಕಾನೂನು ರೂಪಿಸಲಾಗಿದೆ.
ಹೆಚ್ಚಿನ ಅವಧಿಯ ದುಡಿಮೆಗೆ ಸಾಮಾನ್ಯ ಸಂಬಳದ ದುಪ್ಪಟ್ಟು ವೇತನ ಸಿಗುವಂತೆಯೂ ನಿಯಮ ರೂಪಿಸಲಾಗಿರುವುದು ಕ್ರಾಂತಿಕಾರಕ ಹೆಜ್ಜೆಯೆಂದೇ ಹೇಳಬೇಕಾಗಿದೆ. ಅದರಲ್ಲೂ ಮಹಿಳೆಯರನ್ನು ಕೇಂದ್ರೀಕರಿಸಿ ರೂಪಿಸಲಾಗಿರುವ ನಿಯಮಗಳು ನಾರಿಶಕ್ತಿಗೆ ಚೈತನ್ಯ ಸ್ವರೂಪಿಯಾಗಿದೆ. ಮಹಿಳಾ ನಾಯಕತ್ವದ ಅಭಿವೃದ್ಧಿಯ ಹೆಸರಿನ ಸಂಹಿತೆಗಳು ಮಹಿಳೆಯರಿಗೆ ಗಣಿಗಾರಿಕೆ, ಯಂತ್ರೋಪಕರಣಗಳು ಮತ್ತು ರಾತ್ರಿ ಪಾಳಿಯ ಕೆಲಸಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಸಾಧನೆಗೆ ಅವಕಾಶದ ಬಾಗಿಲನ್ನು ಮುಕ್ತವಾಗಿ ತೆರೆದಿಡಲಾಗಿದೆ. ಇದು ಮಹಿಳೆಯರ ಒಪ್ಪಿಗೆ ಹಾಗೂ ಸುರತೆಯ ಅಭಯ ಒದಗಿಸುವ ಬದ್ಧತೆಯನ್ನು ಒಳಗೊಂಡಿರುವುದು ವಿಶೇಷವಾಗಿದೆ.
ಉದ್ಯೋಗದಾತರ ಹಿತದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಆತ್ಮನಿರ್ಭರ ಭಾರತಕ್ಕಾಗಿ ತಂದಿರುವ ಕಾರ್ಮಿಕ ಸುಧಾರಣೆಯ ಕಾಯ್ದೆಗಳು ಪೂರಕ ಬೆಂಬಲವನ್ನು ನೀಡಿದೆ. ಒಂದೇ ಬಾರಿಗೆ ನೋಂದಣಿ, ಏಕ ಪರವಾನಗಿ ಮತ್ತು ಒಂದೇ ಬಾರಿಗೆ ರಿಟರ್ನ್ಸ್​
ಸಲ್ಲಿಕೆಯ ಮೂಲಕ ಉದ್ಯೋಗದಾತರ ಹೊರೆಯನ್ನು ಬಹುವಾಗಿ ಇಳಿಸಲಾಗಿದೆ. ಇದು ಉದ್ಯಮಗಳು ದೇಶಾದ್ಯಂತ ತಮ್ಮ ಟಕಗಳನ್ನು ವಿಸ್ತರಿಸಲು ಪ್ರೇರಣೆ ಹಾಗೂ ಪೋತ್ಸಾಹವನ್ನು ನೀಡುತ್ತದೆ. ಇದರ ಜೊತೆಜೊತೆಗೇ ಸ್ಥಳಿಯ ಉದ್ಯೋಗ ಸೃಷ್ಟಿಗೂ ಉತ್ತೇಜನ ತುಂಬಲು ಸಹಾಯಕವಾಗಿದೆ.
ಸುಧಾರಿತ ಕಾರ್ಮಿಕ ಸಂಹಿತೆಗಳು ಆತ್ಮನಿರ್ಭರ ಭಾರತ ಹಾಗೂ ವಿಕಸಿತ ಭಾರತದ ಕಡೆಗೆ ಆಧಾರ ಸ್ಥಂಭಗಳಾಗಿದ್ದು ಕಾರ್ಮಿಕರ ಆತ್ಮಗೌರವ ಹಾಗೂ ಉತ್ಪನ್ನ ಕ್ಷೇತ್ರವನ್ನು ಉತ್ತೇಜಿಸುವ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿದ್ದು, ಕಾರ್ಮಿಕರ ಸುರತೆ, ಅವರಲ್ಲಿ ಬದ್ಧತೆ ಹಾಗೂ ಪ್ರಾಮಾಣಿಕತೆಯನ್ನು ಹೆಚ್ಚಿಸಲು ಅಚಲ ವಿಶ್ವಾಸದ ಸುರತೆಯ ಚೌಕಟ್ಟು ನಿರ್ಮಿಸಿಕೊಟ್ಟಂತಾಗಿದೆ.
ಇದರ ಜತೆ ಜತೆಗೇ ದೇಶದ ಪ್ರತಿಯೊಬ್ಬ ಪ್ರಜೆ ಅದರಲ್ಲೂ ಕಾರ್ಮಿಕ ವರ್ಗಗಳ ಆದಾಯ ಮೂಲ ವೃದ್ಧಿಸಿ, ಭಾರತ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿ, ಅಭಿವೃದ್ಧಿಯ ಪಥದಲ್ಲಿ ವಿಶ್ವ ಮುಂಚೂಣಿಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿ ನಿಲ್ಲಲು ಸುಧಾರಿತ ನೂತನ ಸಂಹಿತೆಗಳು ಭದ್ರ ಬುನಾದಿಯಾಗಿವೆ. ಪ್ರಧಾನಿ ಮೋದಿಯವರ "ಸಬ್​ ಕಾ ಸಾಥ್​&ಸಬ್​ ಕಾ ವಿಕಾಸ್​, ಸಬ್​ ಕಾ ವಿಶ್ವಾಸ್​&ಸಬ್​ ಕಾ ಪ್ರಯಾಸ್​' ಎಂಬ ಘೋಷಣೆ "ಆಡದೇ ಮಾಡುವವನು ರೂಢಿಯೊಳಗುತ್ತಮನು' ಎಂಬ ಸರ್ವಜ್ಞ ಮಾತನ್ನು ನೆನಪಿಸುತ್ತದೆ.
(ಲೇಖಕರು ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ವಿಧಾನಸಭೆ ಸದಸ್ಯರು)