1984ರ ಸಿಖ್ ಹತ್ಯಾಕಾಂಡವನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಬ್ಬರಿಸಿದ ಗೃಹ ಸಚಿವ ಅಮಿತ್ ಶಾ. 
ದೇಶ

ಸಿಖ್ ಸಮುದಾಯ ನಿಮ್ಮನ್ನು ಎಂದಿಗೂ ಕ್ಷಮಿಸಲ್ಲ: "ಸೋನಿಯಾ ಜೀ, ನಿಮ್ಮ ಮಗ ಪ್ರಧಾನಿ ಆಗಲ್ಲ" ಕಾಂಗ್ರೆಸ್​​ ವಿರುದ್ಧ ಅಮಿತ್​ ಶಾ ಅಬ್ಬರ! Amit Shah

ಚಂಢೀಗಡ: ಕಾಂಗ್ರೆಸ್​ ಪಕ್ಷದ ನೇತೃತ್ವದಲ್ಲಿ ದೆಹಲಿಯ ರಾಮ ಲೀಲಾ ಮೈದಾನದಲ್ಲಿ ಆಯೋಜಿಸಲಾಗಿರುವ ರ‍್ಯಾಲಿಯನ್ನು, ಸಿಖ್ಖರ​​ ಹತ್ಯಾಕಾಂಡವನ್ನು ಸಂಭ್ರಮಿಸಿದ ಆಚರಣೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಆರೋಪಿಸಿದ್ದಾರೆ. ನಾವಿಂದು (ಬಿಜೆಪಿ) ದೆಹಲಿಯಲ್ಲಿ ಸಿಖ್ಖರ ಹತ್ಯಾಕಾಂಡದ ಕರಾಳ ದಿನವನ್ನು ಆಚರಿಸುತ್ತಿದರೆ, ಅವರಲ್ಲಿ 'ಜಲ್ಸಾ' (ಸಂಭ್ರಮಾಚರಣೆ) ನಲ್ಲಿ ತೊಡಗಿದ್ದಾರೆಂದು ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ನಡೆದಿದ್ದ ಸಿಖ್ಖರ ಹತ್ಯಾಕಾಂಡಕ್ಕೆ ಕಾಂಗ್ರೆಸ್​ ಪಕ್ಷವೇ ನೇರ ಕಾರಣವಾಗಿದ್ದು, ಅಂದು ನಡೆದ ಘಟನೆ ಫಲವಾಗಿ ಲಕ್ಷಾಂತರ ಸಿಖ್ಖರು ದೆಹಲಿ ತೊರೆಯ ಬೇಕಾಯಿತೆಂದು ಗುಡುಗಿದ್ದಾರೆ. ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿ ಪರಿಷ್ಕರಣೆ ನೀತಿಯನ್ನು ವಿರೋಧಿಸಿ, ಇಂಡಿಯಾ ಒಕ್ಕೂಟ ನವದೆಹಲಿಯ ರಾಮ್​ಲೀಲಾ ಮೈದಾನದಲ್ಲಿ ನವೆಂಬರ್​ 1 ರಿಂದ 3 ರ ವರೆಗೆ ಪ್ರತಿಭಟನೆ ನಡೆಸಲಿದೆ.

ಸಿಖ್ಖರು ನಿಮ್ಮನ್ನು ಕ್ಷಮಿಸಲ್ಲ!

ನಾವು ಪತ್ರಿಕಾಗೋಷ್ಟಿಯನ್ನು ನಡೆಸಿ, ಈ ಸಂದರ್ಭದಲ್ಲಿ ದೆಹಲಿಯಲ್ಲಿ ರ‍್ಯಾಲಿಯನ್ನು ನಡೆಸಬೇಡಿ ಎಂದು ವಿರೋಧ ಪಕ್ಷಕ್ಕೆ ತಿಳಿಸಿದ್ದೆವು. ಕಾರಣ ಇದೇ ಕಾಲದಲ್ಲಿ ದೆಹಲಿಯಲ್ಲಿ ಸಿಖ್ಖರ ನರಸಂಹಾರ ನಡೆದಿತ್ತು. ನೀವು ಹೀಗೆ ರ‍್ಯಾಲಿ ಮಾಡಿದರೆ, ಸಿಖ್​ ಕುಟುಂಬಗಳ ಮಹಿಳೆಯರ, ಮಕ್ಕಳ ಕೋಪಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದೆವು. ಆದರೂ ಅವರು ನಮ್ಮ ಮಾತನ್ನು ಕೇಳಲಿಲ್ಲ ಎಂದಿದ್ದಾರೆ.

ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ, ದೆಹಲಿಯಲ್ಲಿ ಲಕ್ಷಾಂತರ ಸಿಖ್ಖರನ್ನು ಜೀವಂತವಾಗಿ ಸುಡಲಾಯಿತು. ಮನೆ-ಅಂಗಡಿಗಳನ್ನು ಲೂಟಿ ಮಾಡಲಾಯಿತು. ಈ ದೇಶ ಗುರುಗಳ ನಾಡಾಗಿದೆ, ಇಂತಹ ನಾಡಿನಲ್ಲಿ ಗುರುಗಳ ಮಕ್ಕಳನ್ನು ನೀವು ಸಾಯಿಸಿದ್ದಿರಿ. ಈ ಘಟನೆಯನ್ನು ಸಿಖ್​​ ಸಮುದಾಯ ಎಂದಿಗೂ ಮರೆಯುದಿಲ್ಲ. ಭಾರತ ಹಾಗೂ ಪಂಜಾಬ್​ ಕಾಂಗ್ರೆಸ್​ ಅನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅಮಿತ್​ ಶಾ ಅಬ್ಬರಿಸಿದ್ದಾರೆ.

ಆ, ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾಗಿದ್ದ ರಾಜೀವ್​ ಗಾಂಧಿ, ಒಂದು ದೊಡ್ಡ ಮುರಿದು ಬಿದ್ದರೆ, ಭೂಮಿ ಸಣ್ಣಗೆ ಕಂಪಿಸುತ್ತದೆ ಎಂಬ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಇದನ್ನೆಲ್ಲಾ ಸಹಿಸಿಕೊಂಡು ಸಿಖ್​ ಸಮುದಾಯ ಇಂದಿಗೂ ಈ ದೇಶಕ್ಕೆ ನಿಯತ್ತಾಗಿದ್ದಾರೆ. ಕಾಂಗ್ರೆಸ್​ ಸರ್ಕಾರ ಸಿಖ್​ ಸಮುದಾಯಕ್ಕೆ ಎಂತಹ ದ್ರೋಹ ಮಾಡಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ.

ಸೋನಿಯಾ ಜೀ, ನಿಮ್ಮ ಮಗ ಪ್ರಧಾನಿ ಆಗಲ್ಲ!

ಸೋನಿಯಾ ಜೀ, ನೀವು ಕಳೆದ 15 ವರ್ಷಗಳಿಂದ ನಿಮ್ಮ ಸುಪುತ್ರ ರಾಹುಲ್​ ಗಾಂಧಿಯನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಹವಣಿಸುತ್ತಿದ್ದಿರಾ. ಆದರೆ, ಇಮ್ಮ ಈ ಆಸೆ ಎಂದಿಗೂ ಈಡೇರುವುದಿಲ್ಲ ಎಂದು ಅಮಿತ್​ ಶಾ ಹಂಗಿಸಿದ್ದಾರೆ. ಪ್ರಧನಿ ಆಗುದಿಲ್ಲ ಎಂದು ಅವರಿಗೂ ಗೊತ್ತಿದೆ, ಅದಕ್ಕೆ, ಅಣಕು ಸಂಸತ್​ ಅನ್ನು ನಡೆಸುತ್ತಿದ್ದಾರೆ. ನೀವು ಜೀವನವೀಡಿ ಹೀಗೆ ಅಣಕು ಸಂಸತ್​ ಅನ್ನೇ ನಡೆಸುತ್ತಾ ಕಾಲ ಕಳೆಯುವುದೇ ಸೂಕ್ತವೆಂದು ಅಮಿತ್​ ಶಾ ವ್ಯಂಗ್ಯವಾಡಿದ್ದಾರೆ, (ಏಜೆನ್ಸೀಸ್).