grave 
ದೇಶ

ಸಾಯುವ ಮೊದಲೇ ತನ್ನ ಸಮಾಧಿ ಸಜ್ಜಾಗಿರಿಸಿದ ವೃದ್ಧ

ಹೈದರಾಬಾದ್: ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ 80 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸಮಾಧಿಯನ್ನು ಮುಂಚಿತವಾಗಿ ಸಜ್ಜಾಗಿರಿಸಿಕೊಂಡು ಗಮನ ಸೆಳೆದಿದ್ದಾರೆ.
ಲಕ್ಷ್ಮೀಪುರ ಗ್ರಾಮದ ನಕ್ಕ ಇಂದ್ರಯ್ಯ ಎಂಬವರು ತಮ್ಮ ಪತ್ನಿಯ ಸಮಾಧಿ ಬಳಿ ತಮ್ಮ ಸಮಾಧಿ ಸಿದ್ಧಪಡಿಸಿಕೊಂಡಿದ್ದು, ಅಲ್ಲಿ ಸಾವು-ಬದುಕಿನ ಕುರಿತ ಸಂದೇಶಗಳಿರುವ ಫಲಕ ಕೂಡ ಇರಿಸಿದ್ದಾರೆ. ಗ್ರಾನೈಟ್​ನಲ್ಲಿ ನಿರ್ವಿುಸಲಾಗಿರುವ ಈ ಸಮಾಧಿಗೆ ಅವರು ಸುಮಾರು 12 ಲಕ್ಷ ರೂ. ಖರ್ಚು ಮಾಡಿದ್ದಾರೆ.
‘ನಾನು ನಾಲ್ಕೈದು ಮನೆ, ಒಂದು ಶಾಲೆ ಹಾಗೂ ಒಂದು ಚರ್ಚ್ ಕೂಡ ನಿರ್ವಿುಸಿದ್ದೇನೆ. ನನಗೆ ನಾಲ್ಕು ಮಕ್ಕಳಿದ್ದು, ಕುಟುಂಬದಲ್ಲಿ 9 ಮದುವೆ ಕೂಡ ಮಾಡಿಸಿದ್ದೇನೆ. ಇದೀಗ ನನ್ನ ಸಮಾಧಿಯನ್ನೂ ನಿರ್ವಿುಸಿಕೊಂಡಿದ್ದೇನೆ. ಸಮಾಧಿ ನಿರ್ವಿುಸಿಕೊಳ್ಳುವುದು ಇತರರಿಗೆ ದುಃಖದ ಸಂಗತಿ ಆಗಿರಬಹುದು, ಆದರೆ ನನಗೆ ಇದು ಖುಷಿ ನೀಡಿದೆ’ ಎಂದಿರುವ ಅವರು, ಸಾವಿನ ಬಳಿಕ ಮಕ್ಕಳಿಗೆ ತೊಂದರೆ ಕೊಡಬಾರದೆಂದು ತಾವೇ ಸಮಾಧಿ ಸಜ್ಜಾಗಿರಿಸಿಕೊಂಡಿದ್ದಾಗಿ ಹೇಳಿದ್ದಾರೆ.