ರಾಜಕೀಯ ನಿವೃತ್ತಿ ಕುರಿತು ಮುನ್ಸೂಚನೆ ನೀಡಿದ ನಿತಿನ್​ ಗಡ್ಕರಿ? 
ದೇಶ

ಮುಂದಿನ ಪೀಳಿಗೆಗೆ ಅವಕಾಶ ಕೊಡಬೇಕು: ಆರೋಗ್ಯವಿಲ್ಲದ ಅಧಿಕಾರ ವ್ಯರ್ಥ; ರಾಜಕೀಯ ನಿವೃತ್ತಿ ಸೂಚನೆ ನೀಡಿದ ನಿತಿನ್​ ಗಡ್ಕರಿ? Nitin Gadkari Retirement

ಪ್ರಮುಖ ಮುಖ್ಯಾಂಶಗಳು

  • ಮುಂದಿನ ಪೀಳಿಗೆಗೆ ಅವಕಾಶ ನೀಡಬೇಕು, ಆರೋಗ್ಯವಿಲ್ಲದ ಅಧಿಕಾರ ವ್ಯರ್ಥ ಎಂದ ಕೇಂದ್ರ ಸಚಿವ
  • ರಾಜಕೀಯ ನಿವೃತ್ತಿ ಕುರಿತು ಮುನ್ಸೂಚನೆ ನೀಡಿದ ನಿತಿನ್​ ಗಡ್ಕರಿ?
  • ಇ-20 ನೀತಿ ವಿರೋಧ ಹಿನ್ನಲೆ ಈ ನಡೆ?
ನಾಗ್ಪುರ: ಇತ್ತೀಚೆಗೆ ಮೊದಲಿನಂತೆ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ನಾವು ನಿರ್ವಹಿಸುತ್ತಿರುವ ಕಾರ್ಯ ಹಾಗೂ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ನೀಡಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ನೀಡಿರುವ ಹೇಳಿಗೆ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ನಾಗ್ಪುರದಲ್ಲಿ ನಡೆದ ಏಕಲವ್ಯ ಏಕಲ್ ವಿದ್ಯಾಲಯ ಶಿಕ್ಷಕ-ಮೇಲ್ವಿಚಾರಕರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಅವಕಾಶ ಕೊಡುವ ಕುರಿತು ನೀಡಿರುವ ಹೇಳಿಕೆ ಈಗ ರಾಜೀನಾಮೆ (Nitin Gadkari Retirement) ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಮೊದಲಿನಷ್ಟು ಕೆಲಸ ಸಾಧ್ಯವಾಗುತ್ತಿಲ್ಲ!

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಿತಿನ್​ ಗಡ್ಕರಿ, ನಾನು ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವದಲ್ಲಿದ್ದೇನೆ. ಇಲ್ಲಿ ಅನೇಕ ಏರು-ಪೇರುಗಳನ್ನು ಕಂಡಿದ್ದೇನೆ. ಹಲವಾರು ಪ್ರಶಸ್ತಿ, ಪುರಸ್ಕಾರ, ಅಧಿಕಾರ ಎಲ್ಲವನ್ನು ಅನುಭವಿಸಿದ್ದೇನೆ. ಆದರೆ ಈಗ ಮೊದಲಿನ ರೀತಿಯಲ್ಲಿಯೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ಪೀಳಿಗೆಯನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಅವರಿಗೂ ಅವಕಾಶವನ್ನು ನೀಡಬೇಕು ಆಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದಿದ್ದಾರೆ.

ಆರೋಗ್ಯ ಇಲ್ಲದ ಅಧಿಕಾರ ವ್ಯರ್ಥ!


ಕೊರೊನಾ ವಿಪತ್ತಿನ ದಿನಗಳನ್ನು ನೆನಪಿಸಿಕೊಂಡ ಸಚಿವರು, ಕೋವಿಡ್​ ಬರುವ ಮೊದಲು ನಾನು ಪಕ್ಷದ ಕೆಲಸ ಮಾಡಿ, ನಂತರ ಸಮೋಸಾ ತಿಂದು ಎಲ್ಲೆಂದರಲ್ಲಿ ಮಲಗಿ ಬಿಡುತ್ತಿದೆ. ಆದರೆ ಕೋವಿಡ್​ ನಂತರ, ಪ್ರತಿದಿನ ಯೋಗ ಮಾಡುತ್ತಿದ್ದೆನೆ, ಆರೋಗ್ಯದ ವಿಷಯದಲ್ಲಿ ಶಿಸ್ತನ್ನು ಅಳವಡಿಸಿಕೊಂಡಿದದ್ದೆನೆ. ಆರೋಗ್ಯ ಸರಿಯಿಲ್ಲದೆ ಯಾವುದೇ ಅಧಿಕಾರವನ್ನು ನಿಭಾಯಿಸಲು ಸಾಧ್ಯವಿಲ್ಲವೆಂದು ನನಗೆ ಕೋವಿಡ್​ ಕಲಿಸಿತು ಎಂದಿದ್ದಾರೆ.

ರಾಜೀನಾಮೆ ಕೊಡುವುದು ನಿಜವೇ?

2014 ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್​ ಸಚಿವರಾಗಿ ನಿತಿನ್​ ಗಡ್ಕರಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಹೈವೇ ಯೋಜನೆಗಳಿಂದ ದೇಶದ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದ ಗಡ್ಕರಿ, ಇತ್ತೀಚೆಗೆ ಜಾರಿಗೆ ತಂದ ಇ-20 ಪೆಟ್ರೋಲ್​ ನೀತಿಯಿಂದ ಸಾಕಷ್ಟು ಟ್ರೋಲ್​ ಮತ್ತು ಜನರ ಕೋಪಕ್ಕೆ ಕಾರಣವಾಗಿರುವುದು ನಿಜವಾಗಿದೆ.
ಆದರೆ ಎಲ್ಲಿಯೂ ಸಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ, ರಾಜಕೀಯ ನಿವೃತ್ತಿ ಪಡೆಯುವ ಹೇಳಿಕೆ ನೀಡಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ, ಮುಂದಿನ ಪೀಳಿಗೆಗೆ ಅವಕಾಶ ಕೊಡಬೇಕು ಎಂಬ ಮಾತು, ಅಧಿಕಾರ ರಾಜಕಾರಣದಿಂದ ದೂರ ಸರಿಯುವ ಬಗ್ಗೆ ಯೋಚನೆ ಇರಬಹುದು ಎಂದು ಊಹಿಸಬಹುದಾಗಿದೆ, (ಏಜನ್ಸೀಸ್​).