ವ್ಯಾಪಾರಿಗೆ ಪಿಸ್ತೂಲ್ ತೋರಿಸಿ 'ನನ್ನ ಶೂಟ್ ಮಾಡು' ಎಂದು ಹುಚ್ಚಾಟ 
ದೇಶ

ಐಸ್​ಕ್ರೀಮ್ ಸೂಪರ್ ಆಗಿದೆ, ತಗೋ ನನ್ನ ಕೊಂದುಬಿಡು!ನಡುರಸ್ತೆಯಲ್ಲಿ ಗನ್ ತೋರಿಸಿ ಕಿರಾತಕರ ಹುಚ್ಚಾಟ; ವಿಡಿಯೋ ವೈರಲ್​! Hathras Ice Cream

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಐಸ್‌ಕ್ರೀಮ್ ಸವಿದ ಯುವಕರು,
  • ವ್ಯಾಪಾರಿಗೆ ಪಿಸ್ತೂಲ್ ತೋರಿಸಿ 'ನನ್ನ ಶೂಟ್ ಮಾಡು' ಎಂದು ಹುಚ್ಚಾಟ
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ವೈರಲ್​​: ಅಂಗಡಿಯೊಂದರಲ್ಲಿ ಐಸ್​​ಕ್ರೀಮ್​ ಸೇವಿಸಿ, ಮಾಲೀಕನ ಕೈಗೆ ಬಂದೂಕನ್ನು ನೀಡಿ ಶೂಟ್​ ಮಾಡು ಎಂದು ಹೇಳಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ (Hathras Ice Cream)​​ ನಲ್ಲಿ ನಡೆದಿದೆ. ಈ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಉತ್ತರ ಪ್ರದೇಶ ಪೊಲೀಸರು ಕಿರಾತಕರ ಪತ್ತೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ನಾಲ್ಕು ಜನ ಯುವಕರು ತಳ್ಳುಗಾಡಿಯಲ್ಲಿ ಐಸ್​ಕ್ರೀಮ್​ಯನ್ನು ಖರೀದಿ ಮಾಡಿದ್ದಾರೆ. ಹಾಗೆಯೇ ತಮ್ಮ ಕಾರಿನಲ್ಲಿ ಕುಳಿತುಕೊಂಡು ಹಾಯಾಗಿ ಐಸ್​ಕ್ರೀಮ್​ ಸವಿದಿದಿದ್ದಾರೆ.
ತನ್ನ ಬಳಿ ಐಸ್​ಕ್ರೀಮ್​ ಖರೀದಿಸಿದ ಯುವಕರ ಬಳಿ ಅಂಗಡಿಯವನು ಐಸ್​ಕ್ರೀಮ್​ ಹೇಗಿದೆ ಎಂದು ಅಭಿಪ್ರಾಯ ಕೇಳಲು ವಿಡಿಯೋ ಮಾಡಿದ್ದನೆ.
ಐಸ್​ಕ್ರೀಮ್​ ಹೇಗಿತ್ತು ಎಂದು ಕೇಳಿದಾಗ, ಐಸ್​ಕ್ರೀಮ್​ ಬಹಳ ರುಚಿಕರವಾಗಿದೆ, ಇಲ್ಲಿವರೆಗೆ ಇಂತಹ ಐಸ್​ಕ್ರೀಮ್​ ನಾವು ತಿಂದಿಲ್ಲ ಎಂದಿದ್ದಾರೆ. ಇನ್ನೊಬ್ಬ ಯುವಕ ತನ್ನ ಬಳಿಯಿದ್ದ ಪಿಸ್ತೂಲ್​ನ್ನು ತೆಗೆದು ಈ ಗನ್​ ತಕೊ ನನ್ನನ್ನು ಗುಂಡಿಟ್ಟು ಕೊಂದು ಬಿಡು ಎಂದು ಅಂಗಡಿಯವನಿಗೆ ಹೇಳಿದ್ದಾನೆ.

ಕಾನೂನಿನ ಉಲ್ಲಂಘನೆ!

ಅವರ ಹಾವಭಾವ ಮತ್ತು ವರ್ತನೆ ನೋಡಿದಾಗ ಮದ್ಯ ಅಥವಾ ಇನ್ನಾವುದೋ ವ್ಯಸನ ಮಾಡಿದ ರೀತಿಯಲ್ಲಿಯೇ ಕಾಣುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಬಂದೂಕಿನ ಪ್ರದರ್ಶನ ಇದು ಶಸ್ತ್ರಾಸ್ತ್ರ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ಈ ಕುರಿತು ಉತ್ತರಪ್ರದೇಶ ಪೊಲೀಸರು ಸಹ ಟ್ವಿಟ್​ ಮಾಡಿದ್ದು, ಈ ಆರೋಪಿಗಳನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಹಾಗೆಯೇ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ, (ಏಜನ್ಸೀಸ್​).