31 ಲಕ್ಷ ರೂ.ವರದಕ್ಷಿಣೆ ನಿರಾಕರಿಸಿದ ವರ ಅವಧೇಶ್ ರಾಣಾ 
ದೇಶ

31 ಲಕ್ಷ ರೂ.ವರದಕ್ಷಿಣೆ ನಿರಾಕರಿಸಿದ ವರ, ಸಮಾಜಕ್ಕೆ ಮಾದರಿಯಾದ ಯುವಕನ ವಿಡಿಯೋ ವೈರಲ್​..

ಉತ್ತರ ಪ್ರದೇಶ: ವರದಕ್ಷಿಣೆ ಸಂಬಂಧಿತ ಹಿಂಸೆ ಮತ್ತು ಕಿರುಕುಳಂತಹ ಪ್ರಕರಣಗಳ ಮಧ್ಯೆ ವರನೊಬ್ಬ ಭಾರೀ ಮೊತ್ತದ ವರದಕ್ಷಿಣೆಯನ್ನು ನಿರಾಕರಿಸುವ ಮೂಲಕ ಜನರ ಮನಸ್ಸು ಗೆದ್ದಿರುವ ಘಟನೆ ಉತ್ತರಪ್ರದೇಶದ ಮುಜಫರ್​ನಗರದ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಾಗ್ವಾ ಗ್ರಾಮದ ನಿವಾಸಿ ಅವಧೇಶ್ ರಾಣಾ, ಗೋರಾ ತಿಲಕ್(ತಂಬೂಲ ಕಾರ್ಯಕ್ರಮ) ಸಮಾರಂಭದ ಸಮಯದಲ್ಲಿ ವಧುವಿನ ಕುಟುಂಬ ತಂದಿದ್ದ 31 ಲಕ್ಷ ರೂ.ಗಳ ಪಡೆಯಲು ನಿರಾಕರಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರತಿಯೊಬ್ಬ ಅತಿಥಿಯಿಂದ ಬಾರೀ ಚಪ್ಪಾಳೆ ಗಿಟ್ಟಿಸಿಕೊಂಡರು. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
"ಹಣವನ್ನು ಸ್ವೀಕರಿಸದಿರುವ ನನ್ನ ನಿರ್ಧಾರವನ್ನು ನನ್ನ ಕುಟುಂಬ ಬೆಂಬಲಿಸಿದೆ. ನಾವು ವರದಕ್ಷಿಣೆಯನ್ನು ವಿರೋಧಿಸುತ್ತೇವೆ ಮತ್ತು ನನ್ನ ಹೆಂಡತಿಯ ಕುಟುಂಬದ ಮೇಲೆ ಯಾವುದೇ ಆರ್ಥಿಕ ಹೊರೆ ಹೇರಲು ಬಯಸುವುದಿಲ್ಲ" ಎಂದು ಅವದೇಶ್ ಸುದ್ದಿಗಾರರಿಗೆ ತಿಳಿಸಿದರು.
ಯಾವುದೇ ತಂದೆ ತನ್ನ ಮಗಳ ಮದುವೆಗಾಗಿ ಜೀವನಪರ್ಯಂತ ಕಷ್ಟಪಡಬೇಕಾಗಿಲ್ಲ ಅಥವಾ ಸಾಲ ಪಡೆಯಬೇಕಾಗಿಲ್ಲ. ನಮ್ಮ ಸಂಬಂಧ ಮೌಲ್ಯವಾದದ್ದು, ಅದಕ್ಕೆ ಬೆಲೆ ಕಟ್ಟಬಾರದು ಎಂದು ವರ ಅವದೇಶ ಹೇಳುವ ಮೂಲಕ ಜನರ ಪ್ರೀತಿ ಗಳಿಸಿದ್ದಾನೆ.
ಅವದೇಶ್​ ಕುಟುಂಬವು ಅದಿತಿ(ವಧು)ಯ ಕುಟುಂಬಕ್ಕೆ ಈಗಾಗಲೇ 'ಶಗುನ್' ಎಂದು ಸಾಂಕೇತಿಕ 1 ರೂಪಾಯಿಯನ್ನು ಹೊರತುಪಡಿಸಿ ಬೇರೇನನ್ನೂ ಸ್ವೀಕರಿಸುವುದಿಲ್ಲ ಎಂದು ಅವದೇಶ್ ಅವರ ಸಂಬಂಧಿ ಠಾಕೂರ್ ನರೇಂದ್ರ ಸಿಂಗ್ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ದೇಶದ್ಯಾಂತ ಅನೇಕ ವರದಕ್ಷಿಣೆ ಸಾವುಗಳು ಮತ್ತು ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಅವದೇಶ್​ ಇಷ್ಟೊಂದು ದೊಡ್ಡ ಮೊತ್ತವನ್ನು ನಿರಾಕರಣೆ ಮಾಡಿರುವುದು ಸ್ಫೂರ್ತಿದಾಯಕವಾಗಿದೆ,(ಏಜೆನ್ಸೀಸ್​).