ಅಮ್ಮಂದಿರ ದಿನಕ್ಕೆ ಇದಕ್ಕಿಂತ ದೊಡ್ಡ ಗಿಫ್ಟ್​ ಇನ್ನೇನಿದೆ? ಹೆಮ್ಮೆಯಿಂದ ಪುತ್ರನ ಪ್ರಮಾಣ ವಚನ ಕಣ್ತುಂಬಿಕೊಂಡ ತಾಯಿ! Vijay Oath Taking 
ದೇಶ

ಅಮ್ಮಂದಿರ ದಿನಕ್ಕೆ ಇದಕ್ಕಿಂತ ದೊಡ್ಡ ಗಿಫ್ಟ್​ ಇನ್ನೇನಿದೆ? ಹೆಮ್ಮೆಯಿಂದ ಪುತ್ರನ ಪ್ರಮಾಣ ವಚನ ಕಣ್ತುಂಬಿಕೊಂಡ ತಾಯಿ! Vijay Oath Taking

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಇತಿಹಾಸ ಬರೆದ ನಟ ವಿಜಯ್
  • ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಇಳಯ ದಳಪತಿ ವಿಜಯ್​
  • ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ವಿಜಯ್​ ಪ್ರಮಾಣವಚನ ಸ್ವೀಕಾರ
  • ತಾಯಂದಿರ ದಿನದಂದೇ ತಮ್ಮ ತಾಯಿಗೆ ಭರ್ಜರಿ ಉಡುಗೊರೆ ನೀಡಿದ ವಿಜಯ್​
Vijay Oath Taking : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಇತಿಹಾಸ ಬರೆದಿದ್ದು, ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದ ಅವರ ಪಕ್ಷ ತಮಿಳಿಗ ವೆಟ್ರಿ ಕಳಗಂ ( ಟಿವಿಕೆ ) ಅಧಿಕಾರಕ್ಕೆ ಬರಲು 118 ಶಾಸಕರ ಬೆಂಬಲ ಅಗತ್ಯವಿತ್ತು. ಇದಕ್ಕಾಗಿ ಕಾಂಗ್ರೆಸ್, ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಮುಸ್ಲಿಂ ಲೀಗ್ ಪಕ್ಷಗಳ ಬೆಂಬಲವನ್ನು ಪಡೆಯಿತು. ಇಂದು (ಮೇ 10) ಬೆಳಗ್ಗೆ 10.30ಕ್ಕೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಆರಂಭಿಸಿದರು.
ಈ ತಿಂಗಳ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗ, ಟಿವಿಕೆ ಮೊದಲ ಸ್ಪರ್ಧೆಯಲ್ಲಿಯೇ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಎಲ್ಲರಿಗೂ ಆಘಾತ ನೀಡಿತು. ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡನ್ನೂ ಗೆದ್ದರು. ಇದಾದ ಬಳಿಕ ವಿಜಯ್ ಅವರು ಹಲವಾರು ಪಕ್ಷಗಳೊಂದಿಗೆ ಮಾತುಕತೆ ನಡೆಸಿದರು. ಡಿಎಂಕೆ ಪಕ್ಷ ಮೈತ್ರಿಯಿಂದ ಹಿಂದೆ ಸರಿದ ನಂತರ ಐದು ಕಾಂಗ್ರೆಸ್ ಶಾಸಕರು ಟಿವಿಕೆಯನ್ನು ಬೆಂಬಲಿಸಿದರು.
ಅಂತಿಮವಾಗಿ ವಿಜಯ್ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರ ಅಭಿಮಾನಿಗಳು ಅವರಿಗಾಗಿ ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ. ವಿಡಿಯೋಗಳೆಲ್ಲ ಕೆಲವೇ ನಿಮಿಷಗಳಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ವಿಜಯ್​ಗೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್​ ಆಗುತ್ತಿವೆ. ಅಂತಹ ವಿಡಿಯೋಗಳಲ್ಲಿ ಒಂದು ವಿಡಿಯೋ ವಿಜಯ್ ಅವರ ತಾಯಿ ಶೋಭಾ ಅವರಿಗೆ ಸಂಬಂಧಿಸಿದ್ದಾಗಿದೆ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಶೋಭಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಇಂದು ನನಗೆ ತುಂಬಾ ಸಂತೋಷವಾಗಿದೆ. ಇಂದು ತಾಯಂದಿರ ದಿನ. ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಈಗಾಗಲೇ ತಡವಾಗಿದೆ. ನಾವು ಮತ್ತೆ ಸಿಗೋಣ ಎಂದು ಶೋಭಾ ಮಾಧ್ಯಮಗಳಿಗೆ ತಿಳಿಸಿದರು. ತಮ್ಮ ಮಗ ರಾಜ್ಯದ ಮುಖ್ಯಮಂತ್ರಿಯಾದ ಸಂತೋಷ ಅವರ ಮುಖದಲ್ಲಿ ಗೋಚರಿಸುತ್ತಿತ್ತು. ತಾಯಂದಿರ ದಿನದಂದು ಅವರ ಮಗ ತನ್ನ ತಾಯಿಗೆ ನೀಡಿದ ಶ್ರೇಷ್ಠ ಉಡುಗೊರೆ ಇದು ಎಂದು ಅನೇಕ ಮಂದಿ ಶೋಭಾ ಅವರ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಐತಿಹಾಸಿಕ ಸಾಧನೆ ಮಾಡಿದೆ. ದಶಕಗಳಿಂದ ರಾಜ್ಯ ರಾಜಕಾರಣವನ್ನು ಆಳುತ್ತಿದ್ದ ಡಿಎಂಕೆ (59 ಸ್ಥಾನ) ಮತ್ತು ಎಐಎಡಿಎಂಕೆ (47 ಸ್ಥಾನ) ಪಕ್ಷಗಳ ಪ್ರಾಬಲ್ಯವನ್ನು ಮುರಿದು ವಿಜಯ್ ಅವರು ಹೊಸ ರಾಜಕೀಯ ಶಕೆಗೆ ನಾಂದಿ ಹಾಡಿದ್ದಾರೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್, ವಿಸಿಕೆ ಮತ್ತು ಐಯುಎಂಎಲ್ ಸೇರಿದಂತೆ ಇತರ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಅವರು ಒಟ್ಟು 120 ಶಾಸಕರ ಬೆಂಬಲ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು (ಮೇ 10, 2026) ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು, (ಏಜೆನ್ಸೀಸ್​).