ದೆಹಲಿ: ಯುವಕ ಹುಚ್ಚಾಟಕ್ಕೋ ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವ(Social Media) ಉದ್ದೇಶಕ್ಕೋ ಜೇಬಿನಲ್ಲಿದ್ದ ಗನ್ ತೆಗೆದು ನಗುತ್ತಾ ಎದೆಗೆ ಗುಂಡಿಟ್ಟುಕೊಂಡು ಮೃತಪಟ್ಟ ಘಟನೆ ದೆಹಲಿಯ ನ್ಯೂ ಅಶೋಕ್ ನಗರದಲ್ಲಿ ಮಂಳವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಪ್ರವೀಣ್ ಎಂದು ಗುರುತಿಸಲಾಗಿದೆ. ಈತ ದೆಹಲಿಯ ದಲ್ಲೂಪುರ ನಿವಾಸಿ.ಈತ ಶೂಟ್ ಮಾಡಿಕೊಂಡ ವಿಡಿಯೋವನ್ನು ಡೆಡ್ಲಿ ಕಲ್ಲೇಶ್ ಎಂಬುವವರ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಆರು ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ಪ್ರವೀಣ್ ಕೇಸರಿ ಟಿ-ಶರ್ಟ್ ಧರಿಸಿದ್ದು, ಲೈಸೆನ್ಸ್ ಹೊಂದಿದ್ದ ಗನ್ನ ರೀಫಿಲ್ ಮಾಡಿ ತನ್ನ ಎದೆಯ ಎಡಭಾಗಕ್ಕೆ ಇಟ್ಟುಕೊಳ್ಳುತ್ತಾನೆ, ಕ್ಷಣಾರ್ಥದಲ್ಲಿ ಗುಂಡು ತಗುಲಿ ನೆಲಕ್ಕೆ ಬಿದಿದ್ದಿದ್ದಾನೆ. ಇನ್ನು ಗನ್ ಮಾಲೀಕ ವಿಡಿಯೋ ಮಾಡುತ್ತಿದ್ದ ಜೊತೆಗೆ ಅದರ ಬಳಕೆಯನ್ನು ಪ್ರವೀಣ್ಗೆ ಗೈಡ್ ಮಾಡುತ್ತಿದ್ದ ಎನ್ನಲಾಗಿದೆ.
ಈ ಮಧ್ಯೆ ಟ್ರಿಗರ್ ಪಾಯಿಂಟ್ನ್ನು ಸಣ್ಣದಾಗಿ ಪ್ರವೀಣ್ ಮುಟ್ಟುತ್ತಾರೆ. ಆಗಲೇ ಆತ ಬೇಡ ಭಾಯ್ ಎಂದು ಕಿರುಚುತ್ತಾನೆ. ಯಾವುದಕ್ಕೂ ಕಿವಿಗೊಡದೆ ನಗುತ್ತಾ ಗನ್ನನ್ನು ಎದೆ ಬಳಿಯೇ ಇಟ್ಟುಕೊಳ್ಳುತ್ತಾರೆ. ಗುಂಡು ಎದೆಗೆ ನಾಟಿ ಧಡಾರನೆ ನೆಲಕ್ಕೆ ಬೀಳುತ್ತಾರೆ. ನೀವು ಏನೂ ಮಾಡಿಕೊಂಡಿರಿ ಎಂದು ವಿಡಿಯೋ ಮಾಡ್ತಿದ್ದ ವ್ಯಕ್ತಿ ಅರಚುವ ಸಂಭಾಷಣೆ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ರಕ್ತದ ಮಡುವಲ್ಲಿ ಬಿದ್ದಿದ್ದ ಪ್ರವೀಣ್ರನ್ನು ಕೂಡಲೇ ಆತನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಫಲಕಾರಿಯಾಗದೆ ಆತ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಪೊಲೀಸರು ಹೇಳಿದ್ದೇನು..?
ಮೃತಪಟ್ಟ ಯುವಕನು ಕೂಡ ಗನ್ ಲೈಸೆನ್ಸ್ ಹೊಂದಿದ್ದ. ಆದರೆ, ಗನ್ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಗೆ ಸೇರಿದ್ದಾಗಿದೆ. ಪಿಸ್ತೂಲ್ಗೆ ರೀಫಿಲ್ ಮಾಡುವುದು ಮತ್ತು ಅದನ್ನು ಬಳಕೆ ಮಾಡುವ ಬಗ್ಗೆ ವಿಡಿಯೋ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಿಸ್ತೂಲ್ ಲಾಕ್ ಆಗಿದೆ ಎಂದು ಪವನ್ ಭಾವಿಸಿದ್ದರು. ಆದರೆ, ಅವರ ನಿರ್ಲಕ್ಷ್ಯಕ್ಕೆ ಅನಾಹುತವೇ ನಡೆದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (ಏಜನ್ಸೀಸ್).