ಸಂಗ್ರಹ ಚಿತ್ರ 
ದೇಶ

ತಟ್ಟಂಚಾವಡಿ Bypoll Result: AINRC ಅಭ್ಯರ್ಥಿ ಅಶೋಕ್ ಆನಂದ್‌ಗೆ ಜಯ, 8,482 ಮತಗಳಿಂದ ಸೋತ ಕಾಂಗ್ರೆಸ್‌

  • ಪುದುಚೇರಿಯ ಪ್ರಮುಖ ತಟ್ಟಂಚಾವಡಿ ವಿಧಾನಸಭಾ ಉಪಚುನಾವಣೆ.

  • ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ (AINRC) ಅಭ್ಯರ್ಥಿ ಅಶೋಕ್ ಆನಂದ್ ಭರ್ಜರಿ ಗೆಲುವು.

  • 8,482 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಇ. ವಿನಾಯಕಮ್ ಅವರಿಗೆ ಸೋಲು.

Thattanchavady Bypoll Result: ಪುದುಚೇರಿಯ ಪ್ರಮುಖ ತಟ್ಟಂಚಾವಡಿ ವಿಧಾನಸಭಾ ಉಪಚುನಾವಣೆಯಲ್ಲಿ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ (AINRC) ಅಭ್ಯರ್ಥಿ ಅಶೋಕ್ ಆನಂದ್ ಭರ್ಜರಿ ಗೆಲುವು ಸಾಧಿಸಿದ್ದಾರೆ

ಮೂರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 5 ವಿಧಾನಸಭಾ ಮತ್ತು 1 ಲೋಕಸಭಾ ಸೇರಿ 6 ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು (ಅ.9) ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿತ್ತು. ಮಾಹಿತಿಯ ಪ್ರಕಾರ AINRC ಅಭ್ಯರ್ಥಿ ಅಶೋಕ್ ಆನಂದ್ ಅವರು ಕಾಂಗ್ರೆಸ್ ಅಭ್ಯರ್ಥಿ ಇ. ವಿನಾಯಕಮ್ ಅವರನ್ನು 8,482 ಮತಗಳಿಂದ ಸೋಲಿಸಿದ್ದಾರೆ ಎನ್ನಲಾಗಿದೆ.

ಮತ ಪಡೆದ ವಿವರ

ಪುದುಚೇರಿಯ ಪ್ರಮುಖ ತಟ್ಟಂಚಾವಡಿ ವಿಧಾನಸಭಾ ಉಪಚುನಾವಣೆಗೆ 21,756 ಮತಗಳು ಚಲಾವಣೆಯಾಗಿದ್ದು, ಅಶೋಕ್​ ಆನಂದ್​ ಅವರು 13,358 ಮತಗಳನ್ನು ಅಂದರೆ, ಶೇ. 61.4ರಷ್ಟು ಮತದಾನ ಪಡೆದುಕೊಂಡು ಭರ್ಜರಿ ಜಯ ಕಂಡಿದ್ದಾರೆ. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ವಿನಾಯಕಮ್ ಅವರು 4,876 ಮತಗಳನ್ನು ಪಡೆದುಕೊಂಡು ಹೀನಾಯ ಸೋಲುಂಡಿದ್ದಾರೆ. ಇನ್ನು ಡಿಎಂಕೆ ಅಭ್ಯರ್ಥಿ ಕೆ. ಸೇತು 2,664 ಮತ ಪಡೆದುಕೊಂಡಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಮೊಹನಮ್ಮದ್ ಸಲೀಮ್ ಎ ಸೇರಿದಂತೆ ನಾಮ್ ತಮಿಳರ್ ಕಚ್ಚಿ ಅಭ್ಯರ್ಥಿ ಕಾರ್ತಿಕುಮಾರಿ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಉಪಚುನಾವಣ ಅಖಾಡಕ್ಕಿಳಿದು ಸೋಲು ಕಂಡಿದ್ದಾರೆ.

ಪಟಾಕಿ ಹಚ್ಚಿ ಸಂಭ್ರಮ

ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಅಶೋಕ್​ ಆನಂದ್​ ಅವರು ಭರ್ಜರಿ ಜಯ ಕಾಣುತ್ತಲೇ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಪಟಾಕಿ ಹೊಡೆದು, ಸಿಹಿ ಹಂಚಿ ಸಂಭ್ರಮಿಸಿದ ವಿಡಿಯೋಗಳು ವೈರಲ್ ಆಗಿದೆ.

ಸಿಎಂ ರಂಗಸ್ವಾಮಿ ಗೆದ್ದಿದ್ದ ಕ್ಷೇತ್ರ

ಪುದುಚೇರಿ ಸಿಎಂ ಅವರು ತಟ್ಟಂಚಾವಡಿ ಹಾಗೂ ಮಂಗಳಂ ಕ್ಷೇತ್ರದಲ್ಲಿ ನಿಂತು ಗೆದ್ದುಕೊಂಡಿದ್ದರು. ಮಂಗಳಂ' ಕ್ಷೇತ್ರವನ್ನು ಉಳಿಸಿಕೊಂಡು, ತಟ್ಟಂಚಾವಡಿ ಕ್ಷೇತ್ರವನ್ನು ತೆರವುಗೊಳಿಸಿದ್ದರಿಂದ ಈ ಉಪಚುನಾವಣೆ ಅನಿವಾರ್ಯವಾಗಿತ್ತು.

ಏಪ್ರಿಲ್ 2026ರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ರಂಗಸ್ವಾಮಿ ಅವರು 10,024 ಮತಗಳನ್ನು ಪಡೆದುಕೊಂಡು, ಆಗ 'ನೆಯಂ ಮಕ್ಕಳ್ ಕಳಗಂ' ಪಕ್ಷದಿಂದ ಸ್ಪರ್ಧಿಸಿದ್ದ ವಿನಾಯಕಮ್ ಅವರನ್ನು 4,441 ಮತಗಳಿಂದ ಸೋಲಿಸಿದ್ದರು. ಅವರ ಆ ದಾಖಲೆಯನ್ನು ಮೀರಿಸಿ ಅಶೋಕ್​ ಆನಂದ್​ ಅವರು ಎರಡು ಪಟ್ಟು ಅಂದರೆ, ನಾಲ್ಕು ಸಾವಿರದ ನಲವತ್ತೊಂದು ಮತವನ್ನು ಪಡೆದು ಗೆದ್ದಿದ್ದಾರೆ.

ಕಡಿಮೆ ಮತದಾನ

ತಟ್ಟಂಚಾವಡಿ ಕ್ಷೇತ್ರದಲ್ಲಿ ಅಕ್ಟೋಬರ್ 6ರ ಮಂಗಳವಾರದಂದು ಒಟ್ಟು 31 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಈ ಉಪಚುನಾವಣೆಯಲ್ಲಿ ಶೇ. 80.81ರಷ್ಟು ಮತದಾನ ದಾಖಲಾಗಿದೆ. ಇದು ಹಿಂದಿನ ವಿಧಾನಸಭಾ ಚುನಾವಣೆಯಲ್ಲಿದ್ದ ಶೇ. 87.10ರಷ್ಟು ಮತದಾನಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.