Thalapathy Vijay 
ದೇಶ

ಸಿನಿಮಾ ರಂಗಕ್ಕೆ 'ದಳಪತಿ ವಿಜಯ್' ಗುಡ್‌ಬೈ! ರಾಜಕೀಯಕ್ಕಾಗಿ ನಟನೆಯಿಂದ ನಿವೃತ್ತಿ ಘೋಷಿಸಿದ ನಟ..Thalapathy Vijay

ನವದೆಹಲಿ: ( Thalapathy Vijay ) ತಮಿಳು ಚಿತ್ರರಂಗದ, ಸೂಪರ್‌ಸ್ಟಾರ್ ದೈತ್ಯ ಪ್ರತಿಭೆ ದಳಪತಿ ವಿಜಯ್ ನಟನೆಯಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದು, ಅವರ 33 ವರ್ಷಗಳ ಸ್ಮರಣೀಯ ಸಿನಿಮಾ ಪಯಣಕ್ಕೆ ತೆರೆ ಬಿದ್ದಿದೆ.
ಮಲೇಷ್ಯಾದಲ್ಲಿ ಶನಿವಾರ ನಡೆದ ಜನ್ ನಾಯಗನ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ವಿಜಯ್ ಈ ಭಾವನಾತ್ಮಕ ಘೋಷಣೆ ಮಾಡಿದರು. ಕಳೆದ ಮೂರು ದಶಕಗಳಿಂದ ತಮಿಳು ಚಿತ್ರರಂಗವನ್ನು ಆಳಿದ್ದ ಇವರು, ಈಗ ಜನರ ಕಷ್ಟಗಳಿಗೆ ಸ್ಪಂದಿಸಲು ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ದಾರೆ.
ವೇದಿಕೆಯಿಂದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ದಳಪತಿ ವಿಜಯ್​, ಸಿನಿಮಾದಿಂದ ದೂರ ಸರಿದು ಸಾರ್ವಜನಿಕ ಸೇವೆಯತ್ತ ಗಮನಹರಿಸುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರು.
ನಾನು ಸಿನಿಮಾ ರಂಗಕ್ಕೆ ಬಂದಾಗ, ಇಲ್ಲಿ ಒಂದು ಸಣ್ಣ ಮರಳಿನ ಮನೆ ಕಟ್ಟುತ್ತಿದ್ದೇನೆ ಎಂದು ಭಾವಿಸಿದ್ದೆ. ಆದರೆ ನೀವೆಲ್ಲರೂ ನನಗಾಗಿ ಒಂದು ಅರಮನೆಯನ್ನು ಕಟ್ಟಿದ್ದೀರಿ. ಅಭಿಮಾನಿಗಳು ನನಗೆ ಕೋಟೆ ಕಟ್ಟಲು ಸಹಾಯ ಮಾಡಿದರು.. ಅದಕ್ಕಾಗಿಯೇ ನಾನು ಅವರ ಪರವಾಗಿ ನಿಲ್ಲಲು ನಿರ್ಧರಿಸಿದೆ.. ನನಗಾಗಿ ಎಲ್ಲವನ್ನೂ ತ್ಯಜಿಸಿದ ಅಭಿಮಾನಿಗಳಿಗೆ, ನಾನು ಸಿನಿಮಾವನ್ನು ತ್ಯಜಿಸುತ್ತಿದ್ದೇನೆ, ಜೀವನದಲ್ಲಿ ಯಶಸ್ವಿಯಾಗಲು, ನಿಮಗೆ ಸ್ನೇಹಿತರು ಅಗತ್ಯವಿಲ್ಲದಿರಬಹುದು, ಆದರೆ ನಿಮಗೆ ಬಲವಾದ ಶತ್ರು ಬೇಕು. ನಿಮಗೆ ಬಲವಾದ ಶತ್ರು ಇದ್ದಾಗ ಮಾತ್ರ ನೀವು ಬಲಶಾಲಿಯಾಗುತ್ತೀರಿ. ಆದ್ದರಿಂದ, 2026 ರಲ್ಲಿ, ಇತಿಹಾಸವು ಪುನರಾವರ್ತನೆಯಾಗುತ್ತದೆ. ಜನರಿಗಾಗಿ ಅದನ್ನು ಸ್ವಾಗತಿಸಲು ನಾವು ಸಿದ್ಧರಾಗೋಣ.ʼ ಎಂದು ಹೇಳಿದರು.
ಸದ್ಯಕ್ಕೆ ವಿಜಯ್ ಅವರು ತಮ್ಮ 69ನೇ ಚಿತ್ರದಲ್ಲಿ (Thalapathy 69) ನಟಿಸುತ್ತಿದ್ದಾರೆ.ಈ ಚಿತ್ರವನ್ನು ಎಚ್. ವಿನೋತ್ ನಿರ್ದೇಶಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ.ಇದು ಅವರ ವೃತ್ತಿಜೀವನದ ಅಂತಿಮ ಚಿತ್ರ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮುನ್ನ ತೆರೆಕಂಡ 'The GOAT' (The Greatest of All Time) ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು.