ಎಲಾನ್ ಮಸ್ಕ್ರ ಹಾರುವ ಟೆಸ್ಲಾ ರೋಡ್ಸ್ಟರ್ ಅನಾವರಣಗೊಳ್ಳುತ್ತಿದ್ದಂತೆ ಎಕ್ಸ್ನಲ್ಲಿ ತಮಾಷೆಯ ಮೀಮ್ಗಳು ವೈರಲ್ ಆಗುತ್ತಿದೆ.
ಭಾರತದಲ್ಲಿ ಟೋಲ್ ಬೂತ್ಗಳನ್ನು ದಾಟಲು ಈ ಹಾರುವ ಕಾರನ್ನು ಬಳಸಬಹುದು ಎಂದು ಎಐ ವಿಡಿಯೋ ಕ್ರಿಯೇಟ್ ಮಾಡಿದ ಮೀಮ್ಸ್ ಕ್ರಿಯೇಟರ್ಸ್.
ಭಾರತದಲ್ಲಿ ಕೇಬಲ್ಗಳ ಮಧ್ಯೆ ಟೆಸ್ಲಾ ಕಾರು ಸಿಲುಕುವ ತಮಾಷೆಯ ವಿಡಿಯೋ ವೈರಲ್.
Tesla Flying Car Memes: ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಹಾರುವ ರೋಡ್ಸ್ಟರ್ ಕಾರನ್ನು ಅನಾವರಣಗೊಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾರತದಲ್ಲಿ ಈ ಕಾರು ಬಳಕೆಗೆ ಬಂದರೆ ಕೇಬಲ್ಗಳ ಮಧ್ಯೆ ಸಿಲುಕಿಕೊಳ್ಳುತ್ತದೆ, ಟೋಲ್ಬೂತ್ಗಳನ್ನು ದಾಟಲು ಸಹಾಯ ಮಾಡುತ್ತದೆ, ಪಾರ್ಕಿಂಗ್ ಸಮಸ್ಯೆ ಇರಲ್ಲ ಎಂದು ಟ್ರೋಲಿಗರು, ಮೀಮ್ ಕ್ರಿಯೇಟರ್ಸ್ ತಮಾಷೆಯ ವಿಡಿಯೋಗಳನ್ನು ಮಾಡಿದ್ದು, ಸಖತ್ ವೈರಲ್ ಆಗುತ್ತಿವೆ.
ಟೆಕ್ಸಾಸ್ನ ಮ್ಯಾಗ್ರಗೊರ್ನಲ್ಲಿರುವ ಸ್ಪೇಸ್ಎಕ್ಸ್ನ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ರೋಡ್ಸ್ಟರ್ ತಲೆಕೆಳಗಾದ ಕ್ಯಾಂಪ್ ಮೇಲೆ ಚಲಿಸಿದ ಮೇಲೆ ವೈಮಾನಿಕ ಕಸರತ್ತನ್ನು ನಡೆಸಿತು. ಕಾರು ಇತರ ಕಾರುಗಳ ಮೇಲೆ ಜಿಗಿದು ಹೋಗುವುದನ್ನು ಕೂಡ ಪ್ರದರ್ಶಿಸಲಾಯಿತು.
ಎಲಾನ್ ಮಸ್ಕ್ ಅವರು ತಮ್ಮ ಎಕ್ಸ್ನಲ್ಲಿ ಈ ವಿಡಿಯೋ ಹಂಚಿಕೊಳ್ಳುತ್ತಲೇ ಟ್ರೋಲರ್ಸ್ ಮತ್ತು ಮೀಮ್ಸ್ ಕ್ರಿಯೇಟರ್ಸ್ಗಳು ತಮಾಷೆ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಮನು ಅರೋರಾ ಎಂಬ ಎಕ್ಸ್ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದು, 'ಮಹೀಂದ್ರಾ ಥಾರ್ ರೋಡ್ಸ್ಟರ್ ಅನ್ನು ಪರಿಚಯಿಸುತ್ತಿದ್ದೇವೆ. ಟೋಲ್ ಬೂತ್ಗಳನ್ನು ಸುಲಭ, ಸುಗಮವಾಗಿ ದಾಟಲು ಇದನ್ನು ನಿರ್ಮಿಸಲಾಗಿದೆ' ಎಂದು ಟೆಸ್ಲಾ ಹಾರುವ ಕಾರು ಕಿಲೋ ಮೀಟರ್ಗಟ್ಟಲೇ ನಿಂತ ಕಾರುಗಳನ್ನು ದಾಟಿ ಗಮ್ಯ ಸ್ಥಾನ ತಲುಪುವುದು ವಿಡಿಯೋದಲ್ಲಿದೆ.
ಕೇಬಲ್ ಮಧ್ಯೆ ಟೆಸ್ಲಾ ಕಾರು
ಭಾರತದ ಯಾವುದೇ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಇದ್ದೇ ಇದೆ. ಹೀಗಾಗಿ ಕಚೇರಿಗಳಿಗೆ ಬೇಗನೆ ತಲುಪಲು ಅಕಸ್ಮಾತ್ ಟೆಸ್ಲಾ ಕಾರನ್ನು ಬಳಕೆ ಮಾಡುವುದರಿಂದ ಏನಾಗುತ್ತದೆ ಎಂದು ವಿಡಿಯೋ ಕ್ರಿಯೇಟ್ ಮಾಡಲಾಗಿದೆ. ಅದರಲ್ಲಿ ಮೇಲೆ ಹಾರುವ ಟೆಸ್ಲಾ ಕಾರು ಕೊಂಚ ದೂರ ಸಾಗಿ ಕೇಬಲ್ ಮಧ್ಯೆ ಸಿಲುಕುವುದು ಇದೆ.
ಬ್ರಿಡ್ಜ್ ಕುಸಿಯುವಾಗ ಎಸ್ಕೇಪ್
ಬ್ರಿಡ್ಜ್ ಕುಸಿದು ಬೀಳುವ ಸಂದರ್ಭಧಲ್ಲಿ ಟೆಸ್ಲಾ ಕಾರು ಬಳಕೆ ಮಾಡಿಕೊಂಡರೆ ಸಾವು- ನೋವು ಸಂಭವಿಸದಂತೆ ಕಾಪಾಡಿಕೊಳ್ಳಬಹುದು ಎನ್ನುವ ಮೀಮ್ ಅನಾವರಣಗೊಳಿಸಲಾಗಿದೆ.
ಬೆಳೆಯುತ್ತಿರುವ ನಗರ, ಜನಸಂಖ್ಯೆ ಹೆಚ್ಚಳದಷ್ಟೇ ವೇಗವಾಗಿ ಖಾಸಗಿ ವಾಹನಗಳ ಖರೀದಿ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಗಾಡಿ ಪಾರ್ಕ್ ಮಾಡಲು ಸ್ಥಳವು ಸಿಕ್ಕಂದಂತಾಗುತ್ತಿದೆ. ಯಾವುದೇ ಪ್ರದೇಶಕ್ಕೆ ಪ್ರಯಾಣಿಸಬೇಕಾದಾಗ ಗಾಡಿ ಪಾರ್ಕ್ ಮಾಡುವುದು ಒಂದು ಸಮಸ್ಯೆ. ಅಕಸ್ಮಾತ್ ಈ ಟೆಸ್ಲಾ ಕಾರಿದ್ದರೆ ಬೇಗನೇ ಸಲಿಸಾಗಿ ಪಾರ್ಕ್ ಮಾಡಬಹುದು ಯಾವುದೇ ಹೆಣಗಾಟ ಇರೋದಿಲ್ಲ ಎನ್ನುವುದನ್ನು ಎಂಆರ್ಇ ಎನ್ನುವ ಎಕ್ಸ್ ಬಳಕೆದಾರ ತಿಳಿಸಿದ್ದಾರೆ.
'ನಾನು ಡೌನ್ಟೌನ್ನ ಭಾರೀ ಟ್ರಾಫಿಕ್ ಜಾಮ್ನೊಂದಿಗೆ ಈ ದೃಶ್ಯವನ್ನು ರಚಿಸಿದ್ದೇನೆ. ಕಾರುಗಳು ಒಂದರ ಹಿಂದೆ ಮತ್ತೊಂದು ಸಾಲಿನಲ್ಲಿ ಸಿಲುಕಿಕೊಂಡಿವೆ. ಟ್ಯಾಕ್ಸಿ ಎಲ್ಲಿಗೂ ಕದಲುತ್ತಿಲ್ಲ. ಕಾಲ್ನಡಿಗೆಯ ಪಾದಚಾರಿ ಮಾರ್ಗದಲ್ಲಿರುವ ಒಬ್ಬ ವ್ಯಕ್ತಿ ರಸ್ತೆಯ ಕೆಳಗೆ ನೋಡುತ್ತಿದ್ದಾನೆ. ಮತ್ತು ರಸ್ತೆಯ ಮೇಲಿಂದ ಕಾರು ಹಾರುತ್ತದೆ. ಇಷ್ಟು ದಿನ ಜನರು ಧೂಳು, ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಇನ್ಮುಂದೆ ಮಂಜಿನಲ್ಲಿ ಸಿಲುಕಿಕೊಳ್ಳಲಿದ್ದಾರೆ' ಎಂದು Lumitrix ಎಂಬುವವರು ವಿಡಿಯೋ ಹಂಚಿಕೊಂಡಿದ್ದಾರೆ
ಇಷ್ಟೇ ಅಲ್ಲದೇ ಸಾರ್ವಜನಿಕ ರಸ್ತೆಗಳಲ್ಲಿ ಕಾರು ಟ್ರಾಫಿಕ್ನಲ್ಲಿ ನಿಂತಾಗ ಟೆಸ್ಲಾ ಕಾರು ಬ್ರಿಡ್ಜ್ ದಾಟಿ, ಟ್ರಾಫಿಕ್ ದಾಟಿ ಕಚೇರಿಯತ್ತ ತೆರಳುವುದು, ವೀಕೆಂಡ್ ರಜೆ ಮುಗಿಸುತ್ತಲೇ ಸೋಮವಾರ ಬಳಕೆಯಾಗುವ ಟೆಸ್ಲಾ ಕಾರು ತಂದಿಡುವ ಫಜೀತಿ ಬಗ್ಗೆ, ಕೇಬಲ್ಗಳಿಂದ ಟ್ರಾಫಿಕ್ನಿಂದ ತಪ್ಪಿಸಿಕೊಂಡರು ರಸ್ತೆಗುಂಡಿಗೆ ಕಾರು ಬೀಳುವ ಬಗ್ಗೆ ಸೊಗಸಾಗಿ ವಿಡಿಯೋ ಕ್ರಿಯೇಟ್ ಮಾಡಲಾಗಿದೆ.
ಟೆಸ್ಲಾ ರೋಡ್ಸ್ಟರ್ ಇಲೆಕ್ಟಿಕ್ ಸ್ಪೋರ್ಟ್ಸ್ ಕಾರು ಅಲ್ಪಾವಧಿಗೆ ಗಾಳಿಯಲ್ಲಿದ್ದು ನಂತರ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸುವುದರೊಂದಿಗೆ ಟೆಸ್ಲಾ ಹಾರುವ ಕಾರಿನ ತನ್ನ ಕನಸಿಗೆ ರೆಕ್ಕೆ ಮೂಡಿಸಿಕೊಂಡಿದೆ. ರಾಕೆಟ್ ಮಾದರಿಯ ಡ್ರಸ್ಟರ್ಗಳನ್ನು ಬಳಸಿ ಕಾರು ಸುರಕ್ಷಿತವಾಗಿ ನೆಲಕ್ಕೆ ಇಳಿಯಿತು. ಆದರೆ ವೈಯಕ್ತಿಕ ಸಾರಿಗೆಯಲ್ಲಿ ಹಾರುವ ಕಾರಿನ ಬಳಕೆ ವಿಚಾರದಲ್ಲಿ ಅನೇಕ ಪ್ರಶ್ನೆಗಳು ಎದ್ದಿವೆ. ಅಲ್ಲದೆ ಕಾರಿನ ಹಾರುವ ಸಾಮರ್ಥ್ಯ, ಲೈಸೆನ್ಸ್ಗೆ ಅಂತಿಮ ಬೆಲೆ ಮತ್ತು ಮಾಲಿಕರು ಅನುಸರಿಸಬೇಕಾದ ಭದ್ರತಾ ಅಗತ್ಯಗಳು ಮುಂತಾದ ಅನೇಕ ಪ್ರಮುಖ ವಿವರಗಳ ಬಗ್ಗೆ ಟೆಸ್ಲಾ ಇನ್ನೂ ಉತ್ತರ ನೀಡಿಲ್ಲ.