ಉಗ್ರ ಸಾಜಿದ್ ಅಕ್ರಮ್ ಮತ್ತು ಅವನ ಪುತ್ರ ನವೀದ್
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾನುವಾರ(ಡಿ. 14) ಯಹೂದಿಗಳ ಹನುಕ್ಕಾ ಹಬ್ಬದಲ್ಲಿ ನಡೆದ ಭಯೋತ್ಪಾದಕ ಗುಂಡಿನ ದಾಳಿಯಲ್ಲಿ(Terrorist attack) 15 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಗಾಯಗೊಂಡಿದ ಪ್ರಕರಣದ ಉಗ್ರರಾದ ಸಾಜಿದ್ ಅಕ್ರಮ್ (50) ಹೈದರಾಬಾದ್ ಮೂಲದವನು ಎನ್ನಲಾಗಿದೆ. ದಾಳಿ ವೇಳೆ ಪೊಲೀಸರ ಗುಂಡಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವನ ಮಗ ನವೀದ್ ಅಕ್ರಮ್ (24) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
1998ಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಮೃತ ಭಯೋತ್ಪಾದಕ ಸಾಜಿದ್ ಅಕ್ರಮ್ ಹೈದರಾಬಾದ್ನಿಂದ ಆಸ್ಟ್ರೇಲಿಯಾಗೆ ತೆರಳಿ, ಅಲ್ಲಿಯೇ ವಾಸವಾಗಿದ್ದನು ಎನ್ನಲಾಗಿದೆ. ಬಳಿಕ ಅಲ್ಲಿಯೇ
ಯುರೋಪಿಯನ್ ಮೂಲದ ಮಹಿಳೆಯನ್ನು ಮದುವೆಯಾಗಿದ್ದಾನೆ. ಪುತ್ರ ನವೀದ್ ಆಸ್ಟ್ರೇಲಿಯಾದಲ್ಲಿ ಜನಿಸಿದ್ದರಿಂದ ಅಲ್ಲಿಯ ನಾಗರಿಕನಾಗಿದ್ದಾನೆ. ಆಸ್ಟ್ರೇಲಿಯಾ ಮತ್ತು ಫಿಲಿಪೈನ್ಸ್ ಅಧಿಕಾರಿಗಳು ಸಾಜಿದ್ ಅವರ ಭಾರತೀಯ ಪಾಸ್‌ಪೋರ್ಟ್ ಅನ್ನು ಪತ್ತೆಹಚ್ಚಿದ್ದಾರೆ.
ದಾಳಿಯ ಮೊದಲು ತಂದೆ ಮತ್ತು ಮಗ ನವೆಂಬರ್‌ನಲ್ಲಿ ಫಿಲಿಪೈನ್ಸ್‌ಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಐಸಿಸ್‌ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ತರಬೇತಿ ಪಡೆದಿರುವ ಬಗ್ಗೆ ಶಂಕಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಗುಪ್ತಚರ ಸಂಸ್ಥೆಗಳು ಸಾಜಿದ್ ಅವರ ಕುಟುಂಬ ಸದಸ್ಯರ ವಿವರಗಳನ್ನು ಸಂಗ್ರಹಿಸುತ್ತಿವೆ. ಘಟನೆ ಬಗ್ಗೆ ತನಿಖೆ ನಡೆಸಿವೆ.
ಇನ್ನೂ ಭಯೋತ್ಪಾದಕರ ವಾಹನದಲ್ಲಿ ಸುಧಾರಿತ ಸ್ಫೋಟಕ ಸಾಧನಗಳು, ಮನೆಯಲ್ಲಿ ತಯಾರಿಸಿದ ಐಸಿಸ್ ಧ್ವಜಗಳು ಕಂಡುಬಂದಿವೆ. ಈ ದಾಳಿಯು ಐಸಿಸ್ ಸಿದ್ಧಾಂತದಿಂದ ಪ್ರೇರಿತವಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.
ಸಾಜಿದ್ ಮತ್ತು ಅವನ ಪುತ್ರನ ಭಯೋತ್ಪಾದಕ ದಾಳಿ ಮಾತನಾಡಿರುವ ಹೈದರಾಬಾದ್ ಪೊಲೀಸರು, ಉಗ್ರ ದಾಳಿ ಬಗ್ಗೆ ಹೈದರಾಬಾದ್‌ನಲ್ಲಿರುವ ಅವರ ಸಂಬಂಧಿಕರು ಘಟನೆಯ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದಾರೆ. ಅವನು ಆಸ್ಟ್ರೇಲಿಯಾಕ್ಕೆ ಹೋದ ಬಳಿಕ ಕೇವಲ ಆರು ಬಾರಿ ವಾಪಸ್ ಭಾರತಕ್ಕೆ ಬಂದಿದ್ದಾನೆ. ಆಸ್ತಿ ವಿಷಯಗಳಿಗೆ ಹೆಚ್ಚುವರಿಯಾಗಿ, ಸಾಜಿದ್ ಅಕ್ರಮ್ ತನ್ನ ಹೆತ್ತವರನ್ನು ನೋಡಲು ಬಂದಿದ್ದಾನೆ. ತಂದೆ ಮೃತಪಟ್ಟಾಗಲೂ ಅವನು ಬಂದಿರಲಿಲ್ಲ ಎಂದು ಹೇಳಿದ್ದಾರೆ.
ಸಾಜಿದ್ ಅಕ್ರಮ್ ಮತ್ತು ಅವರ ಮಗ ನವೀದ್ ಭಯೋತ್ಪಾದನೆಯತ್ತ ತಿರುಗಲು ಯಾವುದೇ ಸ್ಥಳೀಯ ಪ್ರಭಾವವನ್ನು ಹೊಂದಿಲ್ಲ ಎಂದು ಕಂಡುಬಂದಿದೆ. 1998ರ ಅವಧಿಯಲ್ಲಿ ಭಾರತದಲ್ಲಿ ಸಾಜಿದ್ ಅಕ್ರಮ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).