ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ತಾತ್ಕಾಲಿಕ ನಿಷೇಧ
- ಜೂನ್ 21ರ ನೀಟ್ ಯುಜಿ (NEET UG) ಮರುಪರೀಕ್ಷೆ
- ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ತಾತ್ಕಾಲಿಕ ನಿಷೇಧ
- ಸರ್ಕಾರದ ನಿರ್ಧಾರದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್
- ಲಯನ್ಸ್ ಮತ್ತು ಮೆಟಾ ಸಂಸ್ಥೆಗಳ ವಿರುದ್ಧ ಗಂಭೀರ ಆರೋಪ
ನವದೆಹಲಿ: ಜೂನ್ 21 ರಂದು ನೀಟ್ ಯುಜಿ ಪರೀಕ್ಷೆ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರವು ಮೆಸೇಜಿಂಗ್ ವೇದಿಕೆ ಟೆಲಿಗ್ರಾಮ್ನ್ನು (Telegram Ban) ಜೂನ್ 22 ರ ವೆರೆಗೆ ತಾತ್ಕಾಲಿಕ ನಿಷೇಧ ಹೇರಿದೆ.
ಈಗ ಈ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಮ್ ದೆಹಲಿ ಹೈಕೋರ್ಟ್ ಮೆಟ್ಟಿಲನ್ನೇರಿದೆ. ಈ ಪ್ರಕರಣವನ್ನು ರಜಾ ಕಾಲದ ಪೀಠದ ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ನ್ಯಾಯಪೀಠ ಬುಧವಾರ (ಜೂ.17) ತುರ್ತಾಗಿ ವಿಚಾರಣೆ ನಡೆಸಲಿದೆ.
ಮೊದಲ ಬಾರಿಗೆ ನೀಟ್ ಪ್ರಶ್ನೆ ಪತ್ರಿಕೆಗಳು ಟೆಲಿಗ್ರಾಮ್ ಮೂಲಕವೇ ಅತ್ಯಧಿಕವಾಗಿ ಸೋರಿಕೆಯಾಗಿ, ಹಂಚಿಕೆಯಾದ ಕಾರಣ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಉನ್ನತ ಶಿಕ್ಷಣ ಇಲಾಖೆ ಸರ್ಕಾರ ಈ ಮೆಸೇಜಿಂಗ್ ವೇದಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
ಸರ್ಕಾರದ ನಿರ್ಧಾರಕ್ಕೆ ಟೆಲಿಗ್ರಾಮ್ ಬೇಸರ!
ಭಾರತದ ಸರ್ಕಾರದ ಈ ತಾತ್ಕಾಲಿಕ ನಿಷೇಧಕ್ಕೆ ಬೇಸರ ವ್ಯಕ್ತ ಪಡಿಸಿರುವ ಟೆಲಿಗ್ರಾಮ್ ಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ (Pavel Durov) ಸರ್ಕಾರದ ಈ ನಿರ್ಧಾರದಿಂದ ಕಂಪನಿಯ ಬಳಕೆದಾರರಿಗೆ ತೊಂದರೆಯಾಗಲಿದೆ ಎಂದಿದ್ದಾರೆ.
ಈ ಹಿಂದೆ ಭಾರತದಲ್ಲಿ ಪೇಪರ್ ಲೀಕ್ ಸೇರಿದಂತೆ ಇತರೆ ವಂಚನೆಗೆ ಟೆಲಿಗ್ರಾಮ್ನ್ನು ಬಳಸಿದ ಖಾತೆಗಳನ್ನು ನಾವು ವೇದಿಕೆಯಿಂದ ಹೊರಹಾಕಿದ್ದೆವೆ. ಹಾಗೆಯೇ ಕೇವಲ ಟೆಲಿಗ್ರಾಮ್ ಮೂಲಕ ಪೇಪರ್ ಲೀಕ್ ಆಗಿಲ್ಲ ಎಂದು ಹೇಳಿದ್ದಾರೆ.
ರಿಲಾಯನ್ಸ್ ಮೇಲೆ ಗರಂ ಆದ ಟೆಲಿಗ್ರಾಮ್ ಸ್ಥಾಪಕ
ಭಾರತದಲ್ಲಿ ತಮ್ಮ ಮೆಸೇಜಿಂಗ್ ವೇದಿಕೆ ತಾತ್ಕಾಲಿಕ ನಿಷೇಧವಾಗುವುದರಲ್ಲಿ ರಿಲಯನ್ಸ್ ಗ್ರೂಪ್ ಮತ್ತು ವಾಟ್ಸಾಪ್ ಭಾಗಿಯಾಗಿದೆ ಎಂದು ಪಾವೆಲ್ ಡುರೊವ್ ಆರೋಪಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಪಾವೆಲ್ ಡುರೊವ್, ಭಾರತೀಯ ಟೆಲಿಕಾಂ ಕಂಪನಿ ರಿಲಯನ್ಸ್, ಬಿಜಿಪಿ ಹೈಜಾಕಿಂಗ್ ಎಂಬ ವಿಧಾನದ ಮೂಲಕ ಭಾರತದ ಹೊರಗಿನ ಯುಎಇ ಸೇರಿದಂತೆ ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವಾಟ್ಸಾಪ್‌ನ ಮಾಲೀಕ ಕಂಪನಿಯಾದ ಮೆಟಾ, ರಿಲಾಯನ್ಸ್ನ ಭಾಗಶಃ ಒಡೆತನ ಹೊಂದಿರುವ ಕಾರಣ ಟೆಲಿಗ್ರಾಮ್ ಭಾರತದಲ್ಲಿ ಬೆಳವಣಿಗೆ ಹೊಂದದಂತೆ ತಡೆಯುತ್ತಿದೆ ಎಂದು ಹೇಳಿದ್ದಾರೆ.
ಜೂನ್ 21 ಕ್ಕೆ ಜೀಟ್ ಮರು ಪರೀಕ್ಷೆ
ಮೇ 3, 2026 ರಂದು ನಡೆದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ, ಈ ಪರೀಕ್ಷೆಯನ್ನು ಜೂನ್ 21 ಕ್ಕೆ ಮತ್ತೊಂದು ಬಾರಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಂದಾಗಿದೆ. ಮೇ 3 ರಂದು ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಹಲವು ಅಧಿಕಾರಿಗಳು ಮತ್ತು ಶಿಕ್ಷಕರನ್ನು ವಶಕ್ಕೆ ಪಡೆದುಕೊಂಡಿದೆ, (ಏಜನ್ಸೀಸ್).