ಬೀದಿಬದಿ ಪಾನಿಪುರಿ ಸೇವಿಸಿ 20 ಮಕ್ಕಳು ಫುಡ್ ಪಾಯಿಸನಿಂಗ್‌ಗೆ ತುತ್ತು
- ಬೀದಿಬದಿ ಪಾನಿಪುರಿ ಸೇವಿಸಿ 20 ಮಕ್ಕಳು ಫುಡ್ ಪಾಯಿಸನಿಂಗ್‌ಗೆ ತುತ್ತು
- ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದಿರುವ ಘಟನೆ
- ವಾಂತಿ, ಭೇದಿಯಿಂದ ಬಳಲುತ್ತಿರುವ ಮಕ್ಕಳು ಆಸ್ಪತ್ರೆಗೆ ದಾಖಲು
ತೆಲಂಗಾಣ: ಬೀದಿಬದಿಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪುರಿಯನ್ನು ಸೇವಿಸಿ 20 ಮಕ್ಕಳು ಫುಡ್ ಪೊಯಿಸಾನಿಂಗ್ಗೆ ತುತ್ತಾಗಿರುವ ಘಟನೆ ತೆಲಂಗಾಣ (Telangana Pani Puri) ದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ವರದಿಯಾಗಿದೆ.
ಮಾಹಿತಿ ಪ್ರಕಾರ, ಈ ಘಟನೆ ಸೋಮವಾರ (ಜೂ.15) ಸಂಜೆ ಮಕ್ಕಳು ಪಾನಿಪುರಿಯನ್ನು ಸೇವಿಸಿದ್ದಾರೆ. ರಾತ್ರಿ ಪಾನಿಪುರಿ ತಿಂದ ಮಕ್ಕಳಿಗೆ ಹೊಟ್ಟೆ ನೋವು, ಭೇದಿ, ವಾಂತಿ ಸಮಸ್ಯೆ ಎದುರಾಗಿವೆ.
ಇದರಿಂದ ಗಾಬರಿಗೊಳಗಾದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಭರ್ತಿ ಮಾಡಿದ್ದಾರೆ. ಮಂಗಳವಾರ (ಜೂ.16) ಸಂಜೆ ಹೊತ್ತಿಗೆ ಸುಮಾರು 20 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಾನಿಪುರಿ ಇಂದಲೇ ಹೀಗಾಗಿದ್ದು!
ತಮ್ಮ ಮಕ್ಕಳ ಆರೋಗ್ಯ ಹದಗೆಡಲು ಹಿಂದಿನ ದಿನ ಸಂಜೆ ತಿಂದಿರುವ ಪಾನಿಪುರಿಯೇ ಕಾರಣ ಎನ್ನುವುದು ಹೆತ್ತವರ ಆರೋಪವಾಗಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ವೈದ್ಯರಾಗಲಿ, ಅಧಿಕಾರಿಗಳಾಗಲಿ ಸ್ಪಷ್ಟನೆ ನೀಡಿಲ್ಲ.
ಆದರೆ ಮಕ್ಕಳಿಗೆ ಫುಡ್ ಪಾಯಿಸಾನಿಂಗ್ ಆಗಿರುವುದು ದೃಢವಾಗಿದ್ದು, ಇದಕ್ಕೆ ಯಾವ ಆಹಾರ ಕಾರಣವೆಂದು ವೈದ್ಯರು ಹಾಗೂ ಆಹಾರ ಸುರಕ್ಷಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ.
ತನಿಖೆ ನಡೆಯುತ್ತಿದೆ!
ತೆಲಂಗಾಣದಲ್ಲಿ ನಡೆದಿರುವ ಈ ಪಾನಿಪುರಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷತಾ ಅಧಿಕಾರಿಗಳು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ, ಆದರೆ ನಾನು ಸ್ವಯಂ ತನಿಖೆ ನಡೆಸುತ್ತಿದ್ದೆವೆ. ಪಾಲಕರ ಪ್ರಕಾರ ಪಾನಿಪುರಿ ಸೇವನೆಯಿಂದಲೇ ಈ ಘಟನೆ ನಡೆದಿದೆ ಎಂದು ಹೇಳುತ್ತಿದ್ದು, ಈ ಕುರಿತು ಇಲಾಖೆ ತನ್ನದೇ ರೀತಿಯಲ್ಲಿ ತನಿಖೆ ನಡೆಸುತ್ತಿದೆ.
ಅದೇ ರಿತಿ ವೈದ್ಯರು ಸಹ ಫುಡ್ ಪಾಯಿಸನಿಂಗ್‌ಗೆ ನಿಖರವಾಗಿ ಯಾವ ಆಹಾರ ಕಾರಣವೆಂದು ಪತ್ತೆ ಹಚ್ಚುತ್ತಿದ್ದು, ವೈದ್ಯಕೀಯ ವರದಿ ದೊರೆತ ನಂತರ ನಮ್ಮ ತನಿಖೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ, (ಏಜನ್ಸೀಸ್).