Telangana man kills girlfriend rapist 
ದೇಶ

ಪ್ರೇಯಸಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನ ಕೊಂದ ಪ್ರೇಮಿ; ಕೊಲೆ ಮಾಡೋದು ಹೇಗೆ ಎಂದು ಯೂಟ್ಯೂಬ್​​ ನೋಡಿದ್ದ ಭೂಪ..Telangana

ಪ್ರಮುಖ ಮುಖ್ಯಾಂಶಗಳು

  • ಯೂಟ್ಯೂಬ್​ ನೋಡಿ ಪ್ರೇಯಸಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದವನನ್ನು ಕೊಂದ ಆರೋಪಿ
  • ಪೈತಾರಿ ಮೊಗಿಲಿ (52) ಎಂಬಾತನನ್ನು ಕೊಂದ ಬಂಗಾರಪು ಮಹೇಶ್ (40).
  • ಬಂಗಾರಪು ಮಹೇಶ್ ಹಾಗೂ ಮಹಿಳೆ ಮಧ್ಯೆ ಸಂಬಂಧ ಇದೆ ಎಂದು ವದಂತಿ ಎಬ್ಬಿಸಿದ್ದಕ್ಕೆ ಸಿಟ್ಟು
ಹೈದರಾಬಾದ್:  ಯೂಟ್ಯೂಬ್​​ ವಿಡಿಯೋಗಳನ್ನು ನೋಡಿ, ಪ್ರೇಯಸಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ 24 ಗಂಟೆಯೊಳಗೆ ಮಹೇಶ್ (40)  ಎಂಬಾತನನ್ನು ತೆಲಂಗಾಣದ ಕರೀಂನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. 
ಕೃಷಿಕನಾದ ಪೈತಾರಿ ಮೊಗಿಲಿ (52) ಎಂಬಾತನನ್ನು ಬಂಗಾರಪು ಮಹೇಶ್ (40) ಕೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ  ಕಸ್ಟಡಿಯಲ್ಲಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎನ್ನಲಾಗಿದೆ.

ಕೊಲೆಗೆ ಕಾರಣ ಏನು?

ಪೈತಾರಿ ಮೊಗಿಲಿ ಇತ್ತೀಚೆಗೆ ಮಹೇಶ್​​ನ ಗೆಳತಿ ಹಾಗೂವಿವಾಹಿತ ಮಹಿಳೆ ಮೇಲೆ  ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ  ಜೈಲುಪಾಲಾಗಿದ್ದ.  ಬಿಡುಗಡೆಯಾದ ನಂತರವೂ ಬದಲಾಗದ ಅವನು, ಪುನಃ ಅಮಹಿಳೆಗೆ ಕಿರುಕುಳ ನೀಡುತ್ತಲೇ ಇದ್ದನು. ಇಷ್ಟೇ ಇಲ್ಲದೇ ಆ  ಮಹಿಳೆ ಬಗ್ಗೆ ಅಪಪ್ರಚಾರ ಮಾಡಿದ್ದ ಮಹೇಶ್ ಹಾಗೂ ಆಕೆ  ಅಕ್ರಮ ಸಂಬಂಧ ಹೊಂದಿದ್ದ ಎನ್ನುವ ವದಂತಿ ಎಬ್ಬಿಸಿದ್ದ. ಇದು ಎರಡು ಕುಟುಂಬಗಳ ನಡುವೆ ವಿವಾದಗಳಿಗೆ ಕಾರಣವಾಯಿತು.

ಕೊಂದಿದ್ದು ಹೀಗೆ

ಇದರಿಂದ ಬೇಸತ್ತ ಮಹಿಳೆ ಹಾಗೂ ಮಹೇಶ್​ ಏನೂ ಮಾಡಲಾರದೆ ಸುಮ್ಮನಾದರು.ಆದರೆ ಮಹೇಶ್​ಗೆ ಮಾತ್ರ ಇದು ಸಹಿಸಲು ಸಾಧ್ಯವಾಗಲಿಲ್ಲ.  ಹೀಗಾಗಿ ಆತನನ್ನು ಕೊಲೆ ಮಾಡಲು ನಿರ್ಧರಿಸಿದ.  ಹೇಗೆ ಕೊಲೆ ಮಾಡುವುದು ಹಾಗೂ ಶಸ್ತ್ರಾಸ್ತ್ರ ಬಳಕೆ ಮಾಡುವುದು ಹೇಗೆ ಎಂದು ಯೂಟ್ಯೂಬ್‌ನಲ್ಲಿ ಹುಡುಕಿ ವಿಡಿಯೋ ನೋಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ, ಮಡಿಪಲ್ಲಿ ಗ್ರಾಮದಲ್ಲಿ ನಡೆದ  ಮೊಹರಂ ಉತ್ಸವದಲ್ಲಿ ಭಾಗವಹಿಸಿದ ನಂತರ, ಮೊಗಿಲಿ ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ. ಮಹೇಶ್ ಕಲ್ವರ್ಟ್ ಬಳಿ ಕಾಯುತ್ತಾ ನಿಂತು ಹಿಂದಿನಿಂದ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ. ಪದೇ ಪದೇ ತಲೆಗೆ ಹೊಡೆದ ನಂತರ, ಮೊಗಿಲಿ ಮೃತಪಟ್ಟಿದ್ದಾನೆ, ರಕ್ತಸಿಕ್ತ ಬಟ್ಟೆಗಳನ್ನು ಬದಲಾಯಿಸಿ ಪರಾರಿಯಾಗಿದ್ದಾರೆ" ಎಂದು ಹುಜೂರಾಬಾದ್ ಎಸಿಪಿ ಮಾಧವಿ ಹೇಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ವಿಚಾರಣೆ ನಡೆಸಿದಾಗ, ಮಹೇಶ್ ಕೊಲೆಗೆ ಒಪ್ಪಿಕೊಂಡಿದ್ದಾನೆ. ಅಪರಾಧಕ್ಕೆ ಬಳಸಲಾದ ಕಬ್ಬಿಣದ ರಾಡ್, ಯೂಟ್ಯೂಬ್ ಹುಡುಕಾಟ ಇತಿಹಾಸವನ್ನು ಹೊಂದಿರುವ ಆತನ ಮೊಬೈಲ್ ಫೋನ್, ಆತನ ದ್ವಿಚಕ್ರ ವಾಹನ ಮತ್ತು ಅಪರಾಧದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, (ಏಜೆನ್ಸೀಸ್).