Telangana Couple Suicide 
ದೇಶ

ಮಕ್ಕಳನ್ನು ಬೈಬೇಡಿ...; ಸಾಲ ಬಾಧೆ, ಆರೋಗ್ಯ ಸಮಸ್ಯೆಗೆ ಬೇಸತ್ತ ದಂಪತಿ, ಡೆತ್​ನೋಟ್​ ಬರೆದಿಟ್ಟು ಸೂಸೈಡ್​..Telangana

ಪ್ರಮುಖ ಮುಖ್ಯಾಂಶಗಳು

  • ಮಕ್ಕಳನ್ನು ಚಿಕ್ಕಮ್ಮನ ಮನೆಯಲ್ಲಿ ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ದಂಪತಿ.
  • ಮಕ್ಕಳನ್ನು ಬೈಬೇಡಿ, ದೂಷಿಸಬೇಡಿ ಚೆನ್ನಾಗಿ ನೋಡಿಕೊಳ್ಳಿ ಎಂದು ಡೆತ್​ನೋಟ್​ನಲ್ಲಿ ಮನವಿ.
  • ಸಾಲ ಬಾಧೆ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ.

ಯಾವುದೇ ವಿಚಾರಕ್ಕೆ ಮಕ್ಕಳನ್ನು ಬೈಬೇಡಿ, ಚೆನ್ನಾಗಿ ನೋಡಿಕೊಳ್ಳಿ ಪ್ಲೀಸ್​ ಎಂದು ಡೆತ್​ನೋಟ್​ ಬರೆದಿಟ್ಟು ತೆಲಂಗಾಣದ ನಿಜಾಮಾಬಾದ್​ ನಗರದಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಮ್ಮ ಮಕ್ಕಳನ್ನು ಚಿಕ್ಕಮ್ಮನ ಮನೆಯಲ್ಲಿ ಬಿಟ್ಟಿದ್ದರು ಎನ್ನಲಾಗಿದೆ.

ವಿನಾಯಕ ನಗರದ ನಿವಾಸಿಯಾದ

ಶೇಷಲಾ ನರೇಶ್​(35) ಹಾಗೂ

ಶೇಷಲಾ ಮೇಘನಾ(30)

ಮೃತರು ಗುರುತಿಸಲಾಗಿದೆ.

ತೀವ್ರ ಸಾಲಬಾಧೆ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.

ದಂಪತಿ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದರು ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ವಿದ್ಯುತ್​ ಇಲಾಖೆಯಲ್ಲಿ ಕೆಲಸ

ನರೇಶ್​ ಅವರು ವಿದ್ಯುತ್​ ಇಲಾಖೆಯಲ್ಲಿ ಐದು ವರ್ಷದಿಂದ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಆರು ತಿಂಗಳ ಹಿಂದೆ ಅವರನ್ನು ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಬಡ್ತಿ ನೀಡಲಾಯಿತು. ನಿಜಾಮಾಬಾದ್​​ನ ಗ್ರಾಮೀಣ ಕಂದಾಯ ಕಚೇರಿಯಲ್ಲಿ ನೇಮಕಗೊಂಡಿದ್ದರು ಎನ್ನಲಾಗಿದೆ.

ಸಾಲ ಬಾಧೆ, ಆರೋಗ್ಯ ಸಮಸ್ಯೆ

ನರೇಶ್​ ಅವರು ಕಳೆದ ವರ್ಷ 90 ಲಕ್ಷ ಕೊಟ್ಟು ಮನೆ ಕೊಂಡುಕೊಂಡಿದ್ದರು. ಸಾಲಕ್ಕಾಗಿ ಹಲವಾರು ಕಡೆ ಹುಡುಕಾಡಿದ್ದರು. ಆದರೆ ಎಲ್ಲಿಯೂ ಸಿಗದಿದ್ದ ಕಾರಣ ತಮ್ಮ ಆಸ್ತಿಯ ಒಂದು ಭಾಗವನ್ನು ಮಾರಾಟ ಮಾಡಲು ನಿರ್ಧರಿಸಿದರು. ಹೀಗಿದ್ದರೂ ಸಾಲ ಮಾಡುವ ಪರಿಸ್ಥಿತಿ ಇತ್ತು. ಅದನ್ನು ಕಳೆದ ಕೆಲವು ತಿಂಗಳಿಂದ ಪಾವತಿ ಮಾಡುತ್ತಾ ಬಂದಿದ್ದರು. ಇದರಿಂದ ಉಂಟಾದ ಒತ್ತಡ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಬೇಸತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.

ಮಂಗಳವಾರ ಮಧ್ಯಾಹ್ನ ಮಕ್ಕಳನ್ನು ಚಿಕ್ಕಮ್ಮನ ಮನೆಯಲ್ಲಿ ಬಿಟ್ಟು ಬಂದ ನರೇಶ್​, ಒಂದು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಮತ್ತೊಂದು ಕೋಣೆಯಲ್ಲಿ ಮೇಘನಾ ಮೃತದೇಹ ಹಾಗೂ ವಿಷದ ಬಾಟಲಿ ಪತ್ತೆಯಾಗಿದೆ ಎನ್ನಲಾಗಿದೆ.

ಡೆತ್​ನೋಟ್​ ಪತ್ತೆ

ಇನ್ನೂ ನರೇಶ್ ಸಾಯುವ ಮುನ್ನ ಡೆತ್​ನೋಟ್​ ಬರೆದಿದ್ದು, ಅದರಲ್ಲಿ ಮಕ್ಕಳನ್ನು ನಿಂದಿಸಬೇಡಿ. ಅವರ ಮೇಲೆ ಕೋಪಗೊಳ್ಳಬೇಡಿ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಉಲ್ಲೇಖಿಸಿದ್ದಾರೆ. ಸದ್ಯ ಡೆತ್​ನೋಟ್​ ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿ ಎಂದು ಹೇಳಿದ್ದಾರೆ.

ಇಬ್ಬರ ಮಧ್ಯೆ ಜಗಳವಿರಲಿಲ್ಲ

ನರೇಶ್ ಹಾಗೂ ಮೇಘನಾ ಸಂಬಂಧಿಕರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಇಬ್ಬರ ಮಧ್ಯೆ ಯಾವುದೇ ಕಲಹವಿರಲಿಲ್ಲ. ಇಬ್ಬರು ಯಾವುದೇ ವಿವಾಹೇತರ ಸಂಬಂಧವನ್ನು ಇಟ್ಟುಕೊಂಡಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).