Telangana CM Revanth Reddy makes pooris for grandson 
ದೇಶ

'ತಾತಾ ನೀವು ಮಾಡಿದ ಪೂರಿಯನ್ನಷ್ಟೇ ತಿನ್ತೇನೆ'; ಮೊಮ್ಮಗನಿಗಾಗಿ ಅಡುಗೆ ಭಟ್ಟರಾದ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ..Revanth Reddy

ಪ್ರಮುಖ ಮುಖ್ಯಾಂಶಗಳು

  • ರಾಜಕೀಯ ಒತ್ತಡದ ನಡುವೆಯೂ ಮುದ್ದು ಮೊಮ್ಮಗನಿಗಾಗಿ ಪೂರಿ ಮಾಡಿಕೊಟ್ಟ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ
  • ಅಜ್ಜ ನೀನೇ ಪೂರಿ ಮಾಡಿಕೊಡಬೇಕು ಎಂದು ಹಠ ಹಿಡಿದ ಮೂರು ವರ್ಷದ ಮೊಮ್ಮಗ ರಿಯಾಂಶ್
  • ನನಗಷ್ಟೇ ಅಲ್ಲ, ಅಜ್ಜಿಗೂ ಪೂರಿ ಮಾಡುವಂತೆ ಅಜ್ಜನಿಗೆ ಆಜ್ಞೆ ಮಾಡಿದ ಪುಟ್ಟ ಮಗು ಕ್ಯೂಟ್ ವಿಡಿಯೋ ವೈರಲ್
Telangana CM Revanth Reddy makes pooris for grandson: ತೆಲಂಗಾಣದ ಸಿಎಂ ರೇವಂತ್​ ರೆಡ್ಡಿಯವರು ತಮ್ಮ  ಬಿಜಿ ಶೆಡ್ಯೂಲ್​ ಮಧ್ಯೆಯೂ ಮೂರು ವರ್ಷದ ಮೊಮ್ಮಗ ರಿಯಾಂಶ್​​ಗಾಗಿ ಸಮಯ ಕೊಟ್ಟು, ಆತನ  ಮುದ್ದುಮುದ್ದಾದ  ತೊದಲು ನುಡಿಗಳನ್ನು ಕೇಳುತ್ತಾ, ಆತನಿಗಾಗಿ ಪೂರಿ ಮಾಡುತ್ತಾ ಕಾಲ ಕಳೆದ ಸಿಹಿ ಕ್ಷಣದ ಬಗ್ಗೆ ಎಕ್ಸ್​​ನಲ್ಲಿ ಭಾವುಕ ಪೋಸ್ಟ್ ಹಂಚಿಕಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ತಮ್ಮ  ನಿವಾಸದ ಕಿಚನ್​​ನಲ್ಲಿ  ಸಿಎಂ ರೇವಂತ್​​ ರೆಡ್ಡಿಯವರು ಬಾಂಡ್ಲಿಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಟ್ಟಿದ್ದಾರೆ. ಇತ್ತ ಪೂರಿಗೆ ಲಟ್ಟಿಸುತ್ತಾ ಮೊಮ್ಮಗನ ಬಳಿ ಮಾತನಾಡುತ್ತಾರೆ. ಸಾಕೆನೋ ಎಂದು ಹೇಳುತ್ತಾರೆ. ಅಲ್ಲೇ ಹತ್ತಿರದ ಕಟ್ಟೆ ಮೇಲೆ ಕುಳಿತ ಮೊಮ್ಮಗ, ನನಗೆ,ಅಜ್ಜಿಗೆ ಇನ್ನೂ ಬೇಕು ಎನ್ನುತ್ತಾನೆ. ನಿನಗೆ ಇಲ್ಲಿದ್ಯಲ್ಲ, ಮಾಡಿದ್ದೀನಲ್ಲ ಎನ್ನುತ್ತಾರೆ. ಆಗ ಮುದ್ದಾಗಿ ಮಾತನಾಡಿದ ಆತ ಮತ್ತೆ ಅಜ್ಜಿಗೆ ಬೇಡ್ವಾ, ಅಪ್ಪನಿಗೆ ಬೇಡ್ವಾ ಎನ್ನುತ್ತಾನೆ. ಸಿಎಂ ಪೂರಿ ಬಗ್ಗೆ ಕಾಮೆಂಟ್ ಮಾಡಿದ ಮೊಮ್ಮಗ ಎಷ್ಟು ದೊಡ್ಡದಿದೆ ಇದು ಪೂರಿ. ಓವಲ್​ ಶೇಪ್​(ಅಂಡಾಕಾರ)ದಲ್ಲಿದೆ ಎಂದು ಹೇಳುತ್ತಾರೆ. ಅವನ ಆ ಕ್ಯೂಟ್ ಮಾತಿಗೆ ನಕ್ಕ ಅವರು ಹೌದ ಎನ್ನುತ್ತಾರೆ.  ಹಾಗಿದ್ರೆ ರೌಂಡ್​ ಆಗಿ ಮಾಡಿಕೊಡುತ್ತೇನೆ ಎನ್ನುತ್ತಾರೆ. ತಾತ ಕರಿಯುತ್ತಿರುವ ಪೂರಿ ಬಗ್ಗೆ ಎಕ್ಸಪ್ಲೇನ್ ಮಾಡಿದ ಆತ ನೀವು ಪೂರಿ ತಿರುಗಿಸುತ್ತಿದ್ದರೆ ಅದು ಫ್ಲೋಟ್ ಆಗ್ತಿದೆ ಎಂದು ದ್ದು ನಿಲ್ಲುತ್ತಾನೆ. ಆಗ ರೇವಂತ್​ ರೆಡ್ಡಿಯವರು ಕೂತ್ಕೋ ಚಿನ್ನಯ್ಯ ಎಂದು ಹೇಳಿರುವುದು ವಿಡಿಯೋದಲ್ಲಿ ಇದೆ. 

ಎಕ್ಸ್​​ನಲ್ಲಿ ರೇವಂತ್​ರೆಡ್ಡಿ ಹಂಚಿಕೊಂಡಿದ್ದೇನು?

ಮೊಮ್ಮಗ ಕೇಳಿದ ಪೂರಿ ಬಗ್ಗೆ ಅವರು ಹಂಚಿಕೊಂಡ ಎಕ್ಸ್​ ಪೋಸ್ಟ್​ನಲ್ಲಿ ಹೀಗಿದೆ, ಅಪ್ಪಾ.. ನೀನು ಪೂರಿ ಮಾಡಿಕೊಟ್ಟರೆ ಮಾತ್ರ ನಾನು ಊಟ ಮಾಡೋದು ಎಂದು ಮೊಮ್ಮಗ ಹೀಗೆ ಕೇಳಿದರೆ ತಪ್ಪೇನಿದೆ. ಸಾರ್ವಜನಿಕ ಜೀವನದ ಬ್ಯುಸಿ ಹಸ್ಲ್-ಬಸ್ಲ್ ಹಾಗೂ ಅಧಿಕೃತ ಜವಾಬ್ದಾರಿಗಳ ಒತ್ತಡದ ನಡುವೆ, ಮೊಮ್ಮಗನ ಕೈಯಲ್ಲಿ ಹಿಟ್ಟಿನ ಉಂಡೆ, ಮುಖದಲ್ಲಿ ಮೂಡಿದ ಮುಗುಳ್ನಗೆ ಮತ್ತು ಪೂರ್ತಿಯಾಗಿ ದುಂಡಗಿರದ ಆ ಒಂದು ಡಜನ್ ಪೂರಿಗಳೊಂದಿಗೆ ಕಳೆದ ಈ ಅಪೂರ್ವ ಕ್ಷಣ.. ಎಂದು ಸಿಎಂ ರೇವಂತ್​ ರೆಡ್ಡಿ ಬರೆದುಕೊಂಡಿದ್ದಾರೆ.