​Secunderabad Spa Murder Case 
ದೇಶ

25 ವರ್ಷದ ಬ್ಯೂಟಿಷಿಯನ್ ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ; ಡಿವೋರ್ಸ್​​​​​ಗೆ ಅರ್ಜಿ ಸಲ್ಲಿಸಿದ್ದೇ ಕಾರಣ?..Telangana

ಪ್ರಮುಖ ಮುಖ್ಯಾಂಶಗಳು

  • ತೆಲಂಗಾಣದ ಸಿಕಂದರಾಬಾದ್‌ನ ಕವಾಡಿಗುಡ ಪ್ರದೇಶದ ಸ್ಪಾ ಸೆಂಟರ್​ನಲ್ಲಿ ಯುವತಿ ಕೊಲೆ
  • 25 ವರ್ಷದ ಬ್ಯೂಟಿಷಿಯನ್ ಬಂಗಿ ಡೆಬೊರಾಳನ್ನು ಬರ್ಬರವಾಗಿ ಹತ್ಯೆಗೈದ ಪತಿ
  • ಆಕೆ ಅಪ್ರಾಪ್ತೆಯಾಗಿದ್ದಾಗ ಕಿಡ್ನ್ಯಾಪ್​ ಮಾಡಿ ಮದುವೆ ಮಾಡಿಕೊಂಡಿದ್ದ ಆರೋಪ
​Secunderabad Spa Murder Case: ಬ್ಯೂಟಿಪಾರ್ಲರ್​ನಲ್ಲಿದ್ದ 25 ವರ್ಷದ ಯುವತಿಯನ್ನು ಆಕೆಯ ಪತಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತೆಲಂಗಾಣದ ಸಿಕಂದರಬಾದ್​ ಬಳಿಯ ಕವಾಡಿಗುಡ ಪ್ರದೇಶದಲ್ಲಿ ನಡೆದಿದೆ.
​ಹೈದರಾಬಾದ್‌ನ ಬಹದ್ದೂರ್‌ಪುರ ನಿವಾಸಿಯಾದ ಬಂಗಿ ಡೆಬೊರಾ (25) ಕೊಲೆಯಾದ ದುರ್ದೈವಿ. ಆಟೋ ಚಾಲಕ 30 ವರ್ಷದ ರಾಜು ಎಂದು ಗುರುತಿಸಲಾಗಿದೆ. ಬಂಗಿ ಡೆಬೊರಾ ಸ್ಪಾ ಸೆಂಟರ್‌ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಈ ಕೊಲೆ ನಡೆದಿದೆ. ಆರೋಪಿಯನ್ನು ಆಟೋ ಚಾಲಕನಾಗಿರುವ 30 ವರ್ಷದ ರಾಜು ಎಂದು ಗುರುತಿಸಲಾಗಿದೆ.
ದಂಪತಿ ನಡುವೆ ಕಳೆದ ಎರಡು ವರ್ಷದಿಂದ ವಿರಸ ಮೂಡಿತ್ತು ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಡಿವೋರ್ಸ್​​ ಪ್ರಕರಣವು ಇನ್ನು ಕೋರ್ಟ್​ನಲ್ಲಿ ಬಾಕಿ ಇತ್ತು. ಈ ಮಧ್ಯೆ ಈ ಘೋರ ಘಟನೆ ನಡೆದಿದೆ ಎಂದು ಪೊಲೀಡರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಸ್ಪಾಗೆ ಬಂದ ರಾಜು ಕೈಯಲ್ಲಿ ಚಾಕು ಹಿಡಿದಿದ್ದ. ಆಕೆ ಕೆಲಸದಲ್ಲಿ ತಲ್ಲೀನಳಾಗಿದ್ದಳು. ಅಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಪಾ ಸಿಬ್ಬಂದಿಗಳ ಕಣ್ಣೆದುರೇ ರಾಜು ಆಕೆಗೆ ಚಾಕುವಿನಿಂದ ತೀವ್ರವಾಗಿ ಇರಿದಿದ್ದಾನೆ.ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೃತ್ಯ ಎಸಗಿದ ತಕ್ಷಣ ಆರೋಪಿ ರಾಜು ಅಲ್ಲಿಂದ ಪರಾರಿಯಾಗಿದ್ದಾನೆ. ಆತ ಸ್ಕೂಟರ್‌ನಲ್ಲಿ ಓಡಿಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ.

ಅಪಹರಿಸಿ ಮದುವೆಯಾಗಿದ್ದ ಆರೋಪ

ಇಬ್ಬರ ನಡುವೆ ದೀರ್ಘಕಾಲದ ವೈವಾಹಿಕ ಸಮಸ್ಯೆಗಳು ಹಾಗೂ ಪತ್ನಿಯ ಮೇಲಿನ ಅನುಮಾನವೇ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಇನ್ನು ವಿಶೇಷವೆಂದರೆ, 2016ರಲ್ಲಿ ಡೆಬೊರಾ ಅಪ್ರಾಪ್ತ ವಯಸ್ಕಳಾಗಿದ್ದಾಗ ಆಕೆಯನ್ನು ಅಪಹರಿಸಿದ ಆರೋಪದ ಮೇಲೆ ರಾಜು ವಿರುದ್ಧ ಕಿಡ್ನ್ಯಾಪ್ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
​ಪ್ರಸ್ತುತ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಪಾ ಸೆಂಟರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ, (ಏಜೆನ್ಸೀಸ್).