Tejashwi Yadav  
ದೇಶ

ವೀಲ್ ಚೇರ್​​​ನಲ್ಲಿ ವಿಧಾನಸಭೆಗೆ ಬಂದ ತೇಜಸ್ವಿ ಯಾದವ್! ವಿಡಿಯೋ ವೈರಲ್...Tejashwi Yadav

ನವದೆಹಲಿ: ( Tejashwi Yadav ) ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು, ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರನ್ನು ವೀಲ್‌ಚೇರ್‌ನಲ್ಲಿ ವಿಧಾನಸಭೆಯ ಸೆಂಟ್ರಲ್ ಹಾಲ್‌ಗೆ ಕರೆದೊಯ್ಯಲಾಯಿತು. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ಅವರಿಗೆ ಏನಾಗಿದೆ? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ರಾಷ್ಟ್ರೀಯ ಜನತಾ ದಳವು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. "ಜನವರಿ 25 ರಂದು ತೇಜಸ್ವಿ ಯಾದವ್ ಎಡವಿ ಬಿದ್ದ ನಂತರ ಅವರ ಕಾಲ್ಬೆರಳಿನ ಒಂದು ಉಗುರು ಕಿತ್ತು ಹೋಗಿದೆ. ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆರ್‌ಜೆಡಿ ತನ್ನ ಅಧಿಕೃತ ಫೇಸ್‌ಬುಕ್​ ಖಾತೆಯಲ್ಲಿ ತಿಳಿಸಿದೆ.
ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನ ಇಂದು ಫೆಬ್ರವರಿ 2 ರಂದು ಆರಂಭವಾಗುತ್ತದೆ. ಅಧಿವೇಶನದ ಮೊದಲ ದಿನದಂದು, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ವಿಧಾನಸಭೆಯ ವಿಸ್ತೃತ ಕಟ್ಟಡದ  ಸೆಂಟ್ರಲ್ ಹಾಲ್‌ನಲ್ಲಿ ಉಭಯ ಸದನಗಳ ಸದಸ್ಯರನ್ನು ಜಂಟಿಯಾಗಿ ಉದ್ದೇಶಿಸಿ ಮಾತನಾಡಲಿದ್ದಾರೆ. 
ನಾಳೆ, ಫೆಬ್ರವರಿ 3 ರಂದು, ಹಣಕಾಸು ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಅವರು 2026-27 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ವಿಧಾನಸಭೆಯ ಈ ಅಧಿವೇಶನವು ಫೆಬ್ರವರಿ 27 ರವರೆಗೆ ಮುಂದುವರಿಯಲಿದೆ.