Teen keeps Nagpur girl under 'digital arrest' for 3 months before assault 
ದೇಶ

ಇನ್​ಸ್ಟಾ ಪ್ರೀತಿಯ ವಂಚನೆ ಜಾಲ; 3 ತಿಂಗಳು ಡಿಜಿಟಲ್ ಅರೆಸ್ಟ್​ ಮಾಡಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಯುವಕನ ರಾಕ್ಷಸ ಕೃತ್ಯ ಬಯಲು..Nagpur Girl

 ನಾಗ್ಪುರ:  ಇನ್​ಸ್ಟಾಗ್ರಾಮ್​ ಮೂಲಕ ಪರಿಚಯಸ್ಥನಾದ 19 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲು ಯತ್ನಿಸಿದ ಘಟನೆಗೆ ರೋಚಕ ತಿರುವುಗಳು ಸಿಕ್ಕಿದೆ. ಫ್ಲ್ಯಾಟ್​ವೊಂದರಲ್ಲಿ ಆಕೆಯನ್ನು ಮೂರು ತಿಂಗಳ ಕಾಲ ಡಿಜಿಟಲ್​(

 Nagpur girl under 'digital arrest

) ಅರೆಸ್ಟ್​ಗೊಳಪಡಿಸಿ, ಲೆದರ್​ ಬೆಲ್ಟ್​ನಿಂದ ಹೊಡೆದು, ಅತ್ಯಾಚಾರ ಮಾಡಿ ಚಿತ್ರಹಿಂಸೆ ಕೊಟ್ಟಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿಗೆ  ಆನ್​ಲೈನ್​ ಮೂಲಕ ಯುವಕ ಪರಿಚಯವಾಗಿದ್ದ.  ಮಾಲ್​ಗೆ ತೆರಳುತ್ತೇನೆ ಎಂದು ಮನೆಯಿಂದ ಹೊರಟಿದ್ದ ಆಕೆ, ಸಂಜೆಯಾದರು ಕುಟುಂಬಸ್ಥರ ಕಾಲ್​ ರಿಸೀವ್​ ಮಾಡಿರಲಿಲ್ಲ. ಇದರಿಂದ ಭಯಭೀತರಾದ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. 

ಯುವಕ ಜೈಲಿನಲ್ಲಿ ಸೆರೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿದರು. ಆನ್​ಲೈನ್​ ಫುಡ್​ ಆರ್ಡರ್​ ಮೂಲಕ ಆರೋಪಿ ಯುವತಿಯನ್ನು ಎಲ್ಲಿ ಬಚ್ಚಿಟ್ಟಿದ್ದಾನೆ ಎಂದು ಕಂಡುಕೊಂಡರು. ಆ.3 ರಂದು ನಾಗ್ಪುರದ ದಿಘೋರಿ ಪ್ರದೇಶದ ಫ್ಲಾಟ್‌ನಿಂದ ಆಕೆಯನ್ನು ರಕ್ಷಿಸಲಾಯಿತು. ಆಕೆಯ ದೇಹದ ತುಂಬಾ ಗಾಯಗಳಾಗಿದ್ದವು. ಯುವಕನನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು  ನಾಗ್ಪುರದ ಜೈಲಿನಗಟ್ಟಿದ್ದಾರೆ.

ತನಿಖೆಯಿಂದ ಬಯಲಾಗಿದ್ದಿಷ್ಟು

16 ವರ್ಷದ ಯುವತಿಯನ್ನು ಮೂರು ತಿಂಗಳ ಕಾಲ ಡಿಜಿಟಲ್ ಅರೆಸ್ಟ್​ನಲ್ಲಿರಿಸಿದ್ದ. ವಿಡಿಯೋ ಕಾಲ್, ನಾರ್ಮಲ್​ ಕರೆಗಳು ಹಾಗೂ ಬೆದರಿಕೆ ಹಾಕುವ ಮೂಲಕ ಆಕೆಯನ್ನು ಫ್ಲ್ಯಾಟ್​ನಲ್ಲಿ ಇರಿಸಿದ್ದ. ಆಕೆ ಮೇಲೆ ಪದೇ ಪದೆ ಅತ್ಯಾಚಾರ ನಡೆಸಿದ್ದ. ನಾಯಿ ಬೆಲ್ಟ್‌ನಿಂದ ಹೊಡೆದು ಚಿತ್ರಹಿಂಸೆ ಕೊಟ್ಟಿದ್ದ. ದೇಹದ 20 ಭಾಗದಲ್ಲಿ ಚಾಕುವಿನಿಂದ ಗಾಯಗೊಳಿಸಿದ್ದಾನೆ ಎನ್ನಲಾಗಿದೆ.

ನಾಯಿ ಬೆಲ್ಟ್​ನಿಂದ ಹಲ್ಲೆ

ಲೈಂಗಿಕವಾಗಿ ನಿತ್ಯ ಹಿಂಸೆ ನೀಡುತ್ತಿದ. ಆಕೆ ಹಿಂಜರಿದಾಗ, ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಕುಟುಂಬದ ಸದಸ್ಯರಿಗೆ ಸಮಸ್ಯೆಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. 
ಯುವತಿ ಮೇಲೆ ಹಲ್ಲೆ ನಡೆಸಲು ಬಳಲಾದ ಬೆಲ್ಟ್​ ಅನ್ನು ಪೆಟ್​ ಫೀಡಿಂಗ್​ ಮಳಿಗೆಗಳಲ್ಲಿ ಖರೀದಿ ಮಾಡಿದ್ದಾನೆ ಎನ್ನುವುದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಗೆ ಬೆಲ್ಟ್​ ಹಾಗೂ ಕತ್ತಿನ ಪಟ್ಟಿ ಕೊಟ್ಟ ಬಗ್ಗೆ ಸಿಬ್ಬಂದಿಯನ್ನು ಮತ್ತು ಅಂಗಡಿ ಮಾಲೀಕರ ಬಳಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, (ಏಜೆನ್ಸೀಸ್).