ಕ್ಲಾಸ್ ರೂಮ್‌ನಲ್ಲೇ ಸಹಾಯಕ ಶಿಕ್ಷಕ ಹಾಗೂ ಶಿಕ್ಷಕಿಯ ರಾಸಲೀಲೆ! 
ದೇಶ

ಕ್ಲಾಸ್‌ ರೂಮ್‌ನಲ್ಲೇ ಶಿಕ್ಷಕ-ಶಿಕ್ಷಕಿಯ ರಾಸಲೀಲೆ: ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​; ಅಮಾನತು ಮಾಡಿದ ಶಿಕ್ಷಣ ಇಲಾಖೆ! Teachers Classroom Romance

ಪ್ರಮುಖ ಮುಖ್ಯಾಂಶಗಳು

  • ಕ್ಲಾಸ್ ರೂಮ್‌ನಲ್ಲೇ ಸಹಾಯಕ ಶಿಕ್ಷಕ ಹಾಗೂ ಶಿಕ್ಷಕಿಯ ರಾಸಲೀಲೆ!
  • ! ಗಂಡನ ಮೇಲೆ ಅನುಮಾನ ಬಂದು ಪತ್ನಿ ಇಟ್ಟ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಯ್ತು ಚುಂಬನದ ದೃಶ್ಯ
  • ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ ಇಬ್ಬರೂ ಅಮಾನತು
  • ಉತ್ತರ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದ ವೇಳೆ ಶಿಕ್ಷಕ-ಶಿಕ್ಷಕಿಯ ಲಜ್ಜೆಗೆಟ್ಟ ವರ್ತನೆ!
ವೈರಲ್​: ಮನೆಯಲ್ಲಿ ತಂದೆ-ತಾಯಿ ಮಾರ್ಗದರ್ಶಕರಾದರೆ, ಶಾಲೆಗಳಲ್ಲಿ ಶಿಕ್ಷಕ, ಶಿಕ್ಷಕಿಯರು ಮಕ್ಕಳು ಸಮಾಜದಲ್ಲಿ ಒಳ್ಳೆಯ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂದು ಕಲಿಸುವ ಜವಾಬ್ದಾರಿ ಹೊತ್ತಿರುತ್ತಾರೆ.
ಆದರೆ ಈ ಜವಾಬ್ದಾರಿ ಹೊಂದಿರುವ ಗುರಗಳೇ ಶಾಲೆಯಲ್ಲಿ ಅನುಚಿತ, ಲಜ್ಜೆಗೆಟ್ಟ ಕೆಲಸಕ್ಕೆ (Teachers Classroom Romance) ಕೈ ಹಾಕಿದರೆ, ಇವರಿಂದ ಕಲಿತ ಮಕ್ಕಳು ಯಾವ ಶಿಕ್ಷಣ ಪಡೆದಾರೋ? ಎಂಬ ಅನುಮಾವ ವ್ಯಕ್ತವಾಗುತ್ತದೆ. ಸದ್ಯ ಉತ್ತರ ಪ್ರದೇಶದ ಸರ್ಕಾರ ಶಾಲೆಯೊಂದರಲ್ಲಿ ಶಿಕ್ಷಕ ಹಾಗೂ ಶಿಕ್ಷಕಿ ಪರಸ್ಪರ ಚುಂಬಿಸುತ್ತಾ, ಮೈ ಬಿಸಿ ತೀರಿಸಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗಿದೆ. 

ವಿಡಿಯೋನಲ್ಲೇನಿದೆ? 

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಉತ್ತರ ಪ್ರದೇಶ ರಾಜ್ಯದ ಕನೌಜ್​ ಜಿಲ್ಲೆಯ ಬಾಜೆಡಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸೆರೆ ಹಿಡಿಯಲಾದ ದೃಶ್ಯ ಎಂದು ಹೇಳಲಾಗುತ್ತಿದೆ.
ತರಗತಿಯಲ್ಲಿ ಮಕ್ಕಳು ಇಲ್ಲದ ಸಮಯದಲ್ಲಿ ಸಹಾಯಕ ಶಿಕ್ಷಕ ಹಾಗೂ ಸಹಾಯಕ ಶಿಕ್ಷಕಿ ಇಬ್ಬರು ಪರಸ್ಪರ ಚುಂಬಿಸಿಕೊಳ್ಳುತ್ತಿರುವ ವಿಡಿಯೋ ಸೆರೆಯಾಗಿದೆ. ಮಾಹಿತಿ ಪ್ರಕಾರ, ವಿಡಿಯೋನಲ್ಲಿರುವ ಪುರಷ ಶಿಕ್ಷಕನ ಹೆಂಡತಿಗೆ ಗಂಡನ ಮೇಲೆ ಅನುಮಾನವಿದ್ದ ಹಿನ್ನಲೆ, ಗೌಪ್ಯವಾಗಿ ಕ್ಯಾಮರಾವನ್ನು ಇಟ್ಟಿದ್ದು, ಇದರಲ್ಲಿ ಗಂಡನ ರಾಸಲೀಲೆ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ಪಾಲಕರು ಗರಂ; ಶಿಕ್ಷಣ ಇಲಾಖೆ ಕ್ರಮ!
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಈ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದ ಪಾಲಕರು ಸಿಟ್ಟಿಗೆದ್ದಿದ್ದಾರೆ. ಶಾಲೆಗೆ ಮಕ್ಕಳು ಮೌಲ್ಯಯುತ ಶಿಕ್ಷಣ ಪಡೆದು, ಉತ್ತಮ ಪ್ರಜೆಗಳಾಗಲು ಶಾಲೆಗೆ ಬರುತ್ತಾರೆ. ಆದರೆ ಅಲ್ಲಿರುವ ಶಿಕ್ಷಕರ ವರ್ತನೆಯೇ ಲಜ್ಜೆಗೆಟ್ಟಿದ್ದರೆ ಮಕ್ಕಳು ಇವರಿಂದ ಇನ್ನೇನು ಕಲಿಯುತ್ತಾರೆ? ಎಂದು ಅಕ್ರೋಶ ಹೊರಹಾಕಿದ್ದಾರೆ. 
ಈ ವಿಡಿಯೋ ದೇಶದೆಲ್ಲಡೆ ಹರಿದಾಡುತ್ತಾ, ಪಾಲಕರ ಕೋಪದ ಬಿಸಿ ತಾಳಲಾರದ ಶಿಕ್ಷಣ ಇಲಾಖೆ ವಿಡಿಯೋನಲ್ಲಿದ್ದ ಇಬ್ಬರು ಶಿಕ್ಷಕರನ್ನು ಕೆಲಸದಿಂದ ಅಮಾನತು ಗೊಳಿಸಿ ಆದೇಶ ಹೊರಡಿಸಿದೆ. ತನಿಖೆ ಇನ್ನು ನಡೆಯುತ್ತಿದ್ದು, ಈ ಇಬ್ಬರುನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).