ಬಿಸಿಯೂಟದಲ್ಲಿ ಉಪ್ಪೆಂದು ಭಾವಿಸಿ ಸೋಪಿನ ಪುಡಿ ಬೆರೆಸಿದ ಶಿಕ್ಷಕಿ 
ದೇಶ

ಉಪ್ಪೆಂದು ತಿಳಿದು ಸೋಪಿನ ಪುಡಿ ಬೆರೆಸಿದ ಶಿಕ್ಷಕಿ: ಬಿಸಿಯೂಟ ಸೇವಿಸಿದ 40 ವಿದ್ಯಾರ್ಥಿಗಳು ಅಸ್ವಸ್ಥ! Detergent Powder in Midday Meal

ಪ್ರಮುಖ ಮುಖ್ಯಾಂಶಗಳು

  • ಬಿಸಿಯೂಟದಲ್ಲಿ ಉಪ್ಪೆಂದು ಭಾವಿಸಿ ಸೋಪಿನ ಪುಡಿ ಬೆರೆಸಿದ ಶಿಕ್ಷಕಿ
  • ಊಟ ಸೇವಿಸಿ ಅಸ್ವಸ್ಥಗೊಂಡ 40 ವಿದ್ಯಾರ್ಥಿಗಳು
  • ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ; ಪ್ರಾಣಭಯವಿಲ್ಲ ಎಂದ ವೈದ್ಯಾಧಿಕಾರಿ
ನಲಂದಾ: ಶಾಲೆಯೊಂದರ ಬಿಸಿಯೂಟಕ್ಕೆ ಉಪ್ಪಿನ ಬದಲು ಡಿಟರ್ಜೆಂಟ್ ಪೌಡರ್ (ಸೋಪಿನ ಪುಡಿ) [Detergent Powder in Midday Meal] ಬಳಸಿದ ಹಿನ್ನಲೆ ಸುಮಾರು 40 ವಿದ್ಯಾರ್ಥಿಗಳು ಆಸ್ಪತ್ರೆ ಸೇರಿರುವ ಘಟನೆ ಬಿಹಾರದ ನಲಂದಾದಲ್ಲಿ ವರದಿಯಾಗಿದೆ.
ನಲಂದಾದ ಪಾರಸಿ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಧ್ಯಾಹ್ನದ ಬಿಸಿಯೂಟ ಸವಿದ ಮಕ್ಕಳು ತೀವ್ರ ವಾಂತಿ ಹಾಗೂ ಬೇಧಿಗೆ ತುತ್ತಾದ ಹಿನ್ನಲೆ ಈ ಘಟನೆ ಬೆಳಕಿಗೆ ಬಂದಿದೆ.

ಸೋಪಿನ ಪುಡಿಯನ್ನು ಉಪ್ಪೆಂದು ತಿಳಿದರು!

ಘಟನೆ ನಡೆದಿರುವ ಶಾಲೆಯ ಶಿಕ್ಷಕಿ ನೀಡಿರು ಮಾಹಿತಿ ಪ್ರಕಾರ, ಈ ಶಾಲೆಗೆ ಬೇರೊಂದು ಶಾಲೆಯಿಂದ ಬಿಸಿಯೂಟ ಸರಬರಾಜಾಗಿದೆ. ಆ ಶಾಲೆಯಿಂದ ಬಂದಿದ್ದ ಸೋಯಾಬಿನ್​ ಸಾರಿನಲ್ಲಿ ಉಪ್ಪು ಸ್ವಲ್ಪ ಕಡಿಮೆಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಉಪ್ಪನ್ನು ತೆಗೆದುಕೊಂಡು ಬರಲು ಹೇಳಲಾಗಿದೆ.

ಆದರೆ, ಆ ವಿದ್ಯಾರ್ಥಿಗಳು ಸೋಪಿನ ಪುಡಿಯನ್ನು ಉಪ್ಪೆಂದು ತಪ್ಪಾಗಿ ಭಾವಿಸಿದ್ದಾರೆ. ಅದನ್ನು ಪಡೆದ ಶಿಕ್ಷಕಿ ಸಹ ಒಮ್ಮೆ ಪರೀಕ್ಷಿಸಿದೆ ಅದನ್ನು ಸಾರಿನಲ್ಲಿ ಬೆರೆಸಿದ್ದಾರೆ. ಊಟ ಮಾಡಿದ ನಂತರ ಒಮ್ಮೆಲೇ ಮಕ್ಕಳಿಗೆ ಹೊಟ್ಟೆ ನೋವು, ವಾಂತಿ, ಬೇಧಿ ಶುರುವಾಗಿದೆ.

ಕೂಡಲೇ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಇದರ ಬಗ್ಗೆ ವಿಚಾರಣೆ ನಡೆಸಿದಾಗ ಊಟಕ್ಕೆ ಉಪ್ಪಿನ ಬದಲು ಸೋಪಿನ ಪುಡಿಯನ್ನು ಬಳಕೆ ಮಾಡಿರುವುದು ತಿಳಿದು ಬಂದಿದೆ.


ಮುಂದುವರಿದ ಚಿಕಿತ್ಸೆ

ಅನಾರೋಗ್ಯಕ್ಕೆ ತುತ್ತಾದ ಮಕ್ಕಳನ್ನು ಬಿಹಾರದ ಶರೀಫ್​ ಮಾದರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಆಸ್ಪತ್ರೆ ಸರ್ಜನ್​ ಡಾ. ಜೈಪ್ರಕಾಶ್ ಸಿಂಗ್​, ಫುಡ್​ ಪಯಿಸನಿಂಗ್​​ನಿಂದ ಮಕ್ಕಳ ಆರೋಗ್ಯ ಕೆಟ್ಟಿದೆ ಎಂದು ತಿಳಿದು ಬಂದಿದೆ.

ಸದ್ಯ 40 ಮಕ್ಕಳಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಯಾರಿಗೂ ಯಾವುದೇ ಪ್ರಾಣಭೀತಿಯಿಲ್ಲ, ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆಂದು ಸಿಂಗ್​ ಮಾಹಿತಿ ಹಂಚಿಕೊಂಡಿದ್ದಾರೆ, (ಏಜನ್ಸೀಸ್).