ಟಿಸಿಎಸ್​ ಮಾಜಿ ಉದ್ಯೋಗಿ ನಿದಾ ಖಾನ್​​ 
ದೇಶ

ವಿಡಿಯೋಗಳ ಮೂಲಕ ಬ್ರೇನ್​ವಾಶ್​ ಮಾಡುತ್ತಿದ್ದ ನಿದಾ ಖಾನ್​: TCS ಮತಾಂತರ ಪ್ರಕರಣಕ್ಕೆ ಹೊಸಾ ಟ್ವಿಸ್ಟ್​! TCS Nida Khan

ಪ್ರಮುಖ ಮುಖ್ಯಾಂಶಗಳು

  • ಟಿಸಿಎಸ್​ ಬಲವಂತದ ಮತಾಂತರ ಪ್ರಕರಣ
  • ಪ್ರಮುಖ ಆರೋಪಿ ನಿದಾ ಖಾನ್​ಳನ್ನು ವಿಚಾರಣೆ ನಡೆಸುತ್ತಿರುವ ತಿನಿಖಾ ದಳ
  • ವಿಡಿಯೋಗು ಹಾಗೂ ಧಾರ್ಮಿಕ ಕ್ರಿಯೆಗಳ ಮೂಲಕ ಮತಾಂತರ ಮಾಡುತ್ತಿದ್ದಾಗಿ ಮಾಹಿತಿ
ನಾಸಿಕ್​: ಮಹಾರಾಷ್ಟ್ರದ ನಾಸಿಕ್​ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಂಪನಿಯಲ್ಲಿ ಬಲವಂತದ ಮತಾಂತರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಹಾಗೂ ಶಾಕಿಂಗ್​ ಮಾಹಿತಿಗಳು ಹೊರಬೀಳುತ್ತಿವೆ.

ಕಿಂಗ್​ಪಿನ್​ ನಿದಾ ಖಾನ್​!

ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ದ ಇಲ್ಲಿವರಿಗಿನ ವಿಚಾರಣೆಯಲ್ಲಿ ಟಿಸಿಎಸ್​ನಲ್ಲಿ ಕೆಲಸ ಮಾಡುತ್ತಿದ್ದ ನಿದಾ ಖಾನ್ (TCS Nida Khan)​, ಇಕೆ ಬಲಿಪಶುಗಳ ಮನೆಯಲ್ಲಿ ಬಲವಂತವಾಗಿ ಧಾರ್ಮಿಕ ಕ್ರಿಯೆ-ಕರ್ಮಗಳನ್ನು ಮಾಡುತ್ತಿದ್ದಳು ಹಾಗೂ ಅವರಿಗೂ ಭಾಗವಹಿಸುವಂತೆ ಒತ್ತಾಯ ಮಾಡುತ್ತಿದ್ದಳೆಂದು ತಿಳಿದು ಬಂದಿದೆ.
ತಾನು ಗುರುತು ಮಾಡಿಕೊಂಡ ಯುವತಿಯರಿ ಮೊಬೈಲ್​ಗೆ ಧಾರ್ಮಿಕ ಪ್ರವಚನಗಳ ವಿಡಿಯೋಗಳು, ಪೂಜಾ ವಿಧಾನಗಳು ಹಾಗೂ ತನ್ನ ಧರ್ಮಕ್ಕೆ ಸೇರಿದ ವಿವಿಧ ವಿಡಿಯೋಗಳಿಗೆ ಸಂಬಂಧಿಸಿದಂತೆ ಸುಮಾರು 171 ಕ್ಕೂ ಹೆಚ್ಚಿನ ವಿಡಿಯೋ ಲಿಂಕ್​ಗಳನ್ನು ಈ ನಿದಾ ಖಾನ್​ ಬಲಿಪಶುಗಳಿಗೆ ಶೇರ್​ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.
ಹೀಗೆ ನಿರಂತರ ವಿಡಿಯೋ ಲಿಂಕ್​ಗಳನ್ನು ಕಳಿಸಿ, ಅವನ್ನು ನೋಡುವಂತೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತಪ್ಪದೆ ಭಾಗವಹಿಸುವಂತೆ ಮಾಡಿ ನಂತರ ಮತಾಂತರ ಮಾಡುತ್ತಿದ್ದಳು ಎಂದು ಎಸ್​ಐಟಿ ತನಿಖೆ ಹೇಳುತ್ತಿದೆ. ಈ ಪ್ರಕರಣ ಈಗ ವಿಚಾರಣಾ ಹಂತದಲ್ಲಿದ್ದು, ನಂತರದ ದಿನಗಳಲ್ಲಿ ಸಂಪೂರ್ಣ ಸತ್ಯಾಸತ್ಯತೆ ಹೊರಬೀಳಬೇಕಿದೆ.

ಜಾಮೀನು ನಿರಾಕರಿಸಿದ ನ್ಯಾಯಾಲಯ!

ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿದಾ ಖಾನ್​ ತಾನು ಗರ್ಭವತಿಯಾಗಿದ್ದೆನೆ, ಹಾಗೂ ನಾನು ಆ ಕಂಪನಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬಹಳ ಸಮಯವಾಗಿದೆ. ಆದ್ದರಿಂದ ತನಗೆ ಜಾಮೀನನ್ನು ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಆದರೆ ನ್ಯಾಯಾಲಯ ಈ ಜಾಮೀನು ಅರ್ಜಿಯನ್ನು ವಜಾಮಾಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ಪ್ರಕರಣದ ಹಿನ್ನಲೆ

ಮಹಾರಾಷ್ಟ್ರದ ನಾಸಿಕ್​ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಚೇರಿಯಲ್ಲಿ 2022ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ನಡೆದ ಕಿರುಕುಳ ಬಗ್ಗೆ ಅಲ್ಲಿನ ಉದ್ಯೋಗಿಗಳು ಆರೋಪಿಸಿದ್ದಾರೆ. 
ತಮ್ಮ ಸೀನಿಯರ್ ಸಹೋದ್ಯೋಗಿಗಳು ಮತ್ತು ಎಚ್‌ಆರ್ ಮ್ಯಾನೇಜರ್‌ಗಳಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಬ್ಲ್ಯಾಕ್‌ಮೇಲ್, ಧಾರ್ಮಿಕ ಮತಾಂತರಕ್ಕೆ ಒತ್ತಾಯ ಮತ್ತು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂಟು ಮಹಿಳಾ ಉದ್ಯೋಗಿಗಳು ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ,(ಏಜನ್ಸೀಸ್​).