ಟಿಸಿಎಸ್​ ನಾಶಿಕ್​ ಕಚೇರಿಯಲ್ಲಿ ನಡೆದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಪ್ರಕರಣ 
ದೇಶ

ನನ್ನ ಪುಣ್ಯ ಬದುಕುಳಿದೆ! ಬೆಚ್ಚಿ ಬೀಳಿಸುತ್ತೆ ಟಿಸಿಎಸ್​ ನಾಶಿಕ್​ ಮಹಿಳಾ ಉದ್ಯೋಗಿ ಬಿಚ್ಚಿಟ್ಟ ಕರಾಳ ಸತ್ಯಗಳು

ಪ್ರಮುಖ ಮುಖ್ಯಾಂಶಗಳು

  • ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ಪ್ರಕರಣ
  • 8 ಆರೋಪಿಗಳ ಪೈಕಿ 7 ಮಂದಿಯನ್ನು ಬಂಧಿಸಿದ ಪೊಲೀಸರು
  • ನಾಶಿಕ್​ ಟಿಸಿಎಸ್​ನ ಕರಾಳ ಸತ್ಯಗಳನ್ನು ಬಿಚ್ಚಿಟ್ಟ ಮಹಿಳಾ ಉದ್ಯೋಗಿ
TCS Nashik Harassment Case: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ದೈತ್ಯ ಟೆಕ್​ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಿದ ಪ್ರಕರಣ ಇದೀಗ ದೇಶದ ಜನತೆಯನ್ನು ಅಕ್ಷರಶಃ ಆತಂಕಕ್ಕೆ ದೂಡಿದೆ. ಪ್ರಸ್ತುತ, ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಪೊಲೀಸರು, ಏಳು ಆರೋಪಿಗಳನ್ನು ಬಂಧಿಸಿದ್ದಾರೆ.   
ಓರ್ವ ಮಹಿಳೆ ತಲೆಮರಿಸಿಕೊಂಡಿದ್ದು, ಕಂಪನಿಯ ಎಚ್​ಆರ್​ ಹೆಡ್​ ನಿದಾ ಖಾನ್, ಬಂಧನ ಭೀತಿ ಎದುರಾದ ಬೆನ್ನಲ್ಲೇ ತಾನು ಗರ್ಭಿಣಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆಂದು ವರದಿಯಾಗಿದೆ. ಎನ್​ಡಿ​ಟಿವಿ ವರದಿ ಪ್ರಕಾರ, ಟಿಸಿಎಸ್​ ನಾಶಿಕ್​ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ಮಾತನಾಡಿ, ವರ್ಕಿಂಗ್ ವೇಳೆಯಲ್ಲಿ ನಡೆಯುತ್ತಿದ್ದ ಕರಾಳತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.  
ಕಳೆದ ಆರು ವರ್ಷಗಳಿಂದ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿ, ಕೆಲವು ತಿಂಗಳ ಹಿಂದೆಯಷ್ಟೇ ನಾಶಿಕ್​ ಟಿಸಿಎಸ್​ಗೆ ವರ್ಗಾವಣೆ ಆದರು. ಇಲ್ಲಿ ಆಕೆಯನ್ನು ಕಂಪನಿ ಬಿಲ್ಡಿಂಗ್​ ಟೆರೇಸ್​ ಮೇಲೆ ಏಕಾಂಗಿಯಾಗಿ ಕೆಲಸ ಮಾಡುವಂತೆ ತಿಳಿಸಲಾಗಿತ್ತು. ನನ್ನ ಫೋನ್ ಮತ್ತು ಬ್ಯಾಗ್ ಅನ್ನು ಅವರೇ ಕಿತ್ತುಕೊಟ್ಟುಕೊಳ್ಳುತ್ತಿದ್ದರು. ಶೌಚಾಲಯಕ್ಕೆ ಅಥವಾ ಇನ್ನಿತರ ಉದ್ದೇಶಗಳಿಗಾಗಿ ಫ್ಲೋರ್​ಗೆ ಬಂದಾಗ, ಭದ್ರತೆಯ ನೆಪದಲ್ಲಿ ನನ್ನ ಮೊಬೈಲ್ ಫೋನ್, ಬ್ಯಾಗ್ ಮತ್ತು ಎಲ್ಲಾ ವೈಯಕ್ತಿಕ ವಸ್ತುಗಳನ್ನು ಕಸಿದುಕೊಳ್ಳುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. 
"ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಯುವ ಉದ್ಯೋಗಿಗಳೇ ಇವರ ಟಾರ್ಗೆಟ್​. ಅವರನ್ನು ಶೋಷಣೆಗೆ ಒಳಪಡಿಸುವ ದೃಶ್ಯಗಳನ್ನು ನಾನು ಕಣ್ಣಾರೆ ನೋಡಿದ್ದೇವೆ. ಕೆಲವರಿಗಂತು ಬ್ರೇನ್​ವಾಶ ಮಾಡುತ್ತಿದ್ದರು. 20ರಿಂದ 25 ವರ್ಷ ವಯಸ್ಸಿನ ಯುವತಿಯರೇ ಸಾಫ್ಟ್​ ಟಾರ್ಗೆಟ್​. ಈ ವಯಸ್ಸಿನವರನ್ನು ತಮ್ಮ ಬಲೆಗೆ ಬೀಳಿಸುವುದು ಬಹಳ ಸುಲಭ ಎಂಬುದು ಇವರಿಗೆ ಗೊತ್ತಿತ್ತು. ನಿಮ್ಮಲ್ಲಿ ದೂರುಗಳಿದ್ದರೆ, ನೀವು ನಿಮ್ಮ ಎಚ್‌ಆರ್‌ ಬಳಿ ಹೋಗ್ತೀರಾ. ಆದರೆ ಇಲ್ಲಿ, ಎಚ್‌ಆರ್ ಕೂಡ ಭಯದಲ್ಲೇ ಇರುತ್ತಿದ್ದರು ಎಂದಿದ್ದಾರೆ. 
"ಹಿಂದೂ ಹುಡುಗಿಯರನ್ನು ನಿಮ್ಮ ಗೆಳತಿಯರನ್ನಾಗಿ ಮಾಡಿಕೊಳ್ಳಿ, ಅವರನ್ನು ನೀವು ಮದುವೆಯಾಗಿ ಎನ್ನುತ್ತಿದ್ದರು. ನೀವೆಲ್ಲರೂ ಮತಾಂತರಗೊಳ್ಳಿ ಎಂದು ಧರ್ಮದ ಬಗ್ಗೆ ಮಾತನಾಡುತ್ತಿದ್ದರು. ಇದಕ್ಕೆಲ್ಲ ಹಣ ಕೂಡ ನೀಡಲಾಗುತ್ತಿತ್ತು. ನನ್ನ ಪುಣ್ಯ, ದೇವರೇ ನಾನು ಬದುಕುಳಿದೆ ಎಂದು ಹೇಳಿಕೊಂಡಿದ್ದಾರೆ. ಟಿಸಿಎಸ್ ಶಾಖೆಗೆ ಸಂಬಂಧಿಸಿದ ಮಾನಸಿಕ ಮತ್ತು ಲೈಂಗಿಕ ಕಿರುಕುಳದ ಒಂಬತ್ತು ದೂರುಗಳನ್ನು ಸದ್ಯ ನಾಸಿಕ್‌ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಂಪನಿಯ ಎಂಟು ಮಹಿಳಾ ಉದ್ಯೋಗಿಗಳು ದೂರುಗಳನ್ನು ಸಲ್ಲಿಸಿದ್ದು, ಇದು ಫೆಬ್ರವರಿ 2022ರಿಂದ ಮಾರ್ಚ್ 2026ರ ಅವಧಿಯನ್ನು ಒಳಗೊಂಡಿದೆ. ಕಳೆದ ವಾರ ವಿಶೇಷ ತನಿಖಾ ತಂಡವನ್ನು ರಚಿಸಿದ ಬೆನ್ನಲ್ಲೇ ಸಂಸ್ಥೆಯ ಏಳು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಡ್ಯಾನಿಶ್ ಶೇಖ್, ತೌಸಿಫ್ ಅತ್ತರ್, ರಜಾ ಮೆಮನ್, ಶಾರುಖ್ ಖುರೇಷಿ, ಶಫಿ ಶೇಖ್, ಆಸಿಫ್ ಅಫ್ತಾಬ್ ಅನ್ಸಾರಿ ಮತ್ತು ಎಚ್​ಆರ್​ ನಿದಾ ಖಾನ್ ಎಂದು ಗುರುತಿಸಲಾಗಿದೆ,(ಏಜೆನ್ಸೀಸ್).