ನವದೆಹಲಿ: ಕೇಂದ್ರ ಸಚಿವರು ಸಾಮಾಜಿಕ ಜಾಲತಾಣ ಗಳಲ್ಲಿ ಸಕ್ರಿಯರಾಗಿರುವ ಪ್ರಮಾಣದ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಸಚಿವರು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ವಿಶೇಷವಾಗಿ ಯುವಜನತೆಯನ್ನು ತಲುಪುವ ಪ್ರಯತ್ನ ವನ್ನು ತೀವ್ರಗೊಳಿಸಬೇಕು ಎಂದು ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಯಾಬಿನೆಟ್ ಸಚಿವರ ಸಾಮಾಜಿಕ ಜಾಲತಾಣ ಖಾತೆಗಳ ಕಾರ್ಯಕ್ಷಮತೆಯ ಅಂಕಿ-ಅಂಶಗಳನ್ನು ಹಂಚಿಕೊಳ್ಳಲಾಗಿದೆ. ಈ ವೇಳೆ ಸಚಿವರ ಪೋಸ್ಟ್ಗಳು ಜನರನ್ನು ತಲುಪುತ್ತಿರುವ ವ್ಯಾಪ್ತಿ ಬಗ್ಗೆ ರ್ಚಚಿಸಿ, ಯುವಜನರನ್ನು ತಲುಪಲು ಪೋಸ್ಟ್ಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಹೆಚ್ಚಿನ ಒತ್ತು ನೀಡುವಂತೆ ತಿಳಿಸಲಾಗಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದ ಬಳಿಕ ಪ್ರಧಾನಿ ಮೋದಿ ರೀಲ್ಸ್ಗಳನ್ನು ಪೋಸ್ಟ್ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸಂರ್ಪಸಿದ್ದರು.
ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 13,041 ಕೋಟಿ ರೂ. ವೆಚ್ಚದ ಐದು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 9,450 ಕೋಟಿ ರೂ. ವೆಚ್ಚದ ನಾಲ್ಕು ರೈಲ್ವೆ ಮಲ್ಟಿಟ್ರ್ಯಾಕಿಂಗ್ ಯೋಜನೆಗಳು ಹಾಗೂ ಬಿಹಾರದಲ್ಲಿ 3,590.73 ಕೋಟಿ ರೂ. ವೆಚ್ಚದ ಎನ್ಎಚ್-22 ಹೆದ್ದಾರಿಯ 82.6 ಕಿ.ಮೀ ಚತುಷ್ಟಥ ರಸ್ತೆ ಕಾಮಗಾರಿ ಸೇರಿವೆ. ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹರಡಿರುವ ರೈಲ್ವೆ ಯೋಜನೆಗಳು ಹಾಲಿ ಜಾಲಕ್ಕೆ ಸುಮಾರು 410 ಕಿ.ಮೀ. ಹೆಚ್ಚುವರಿ ಮಾರ್ಗ ಸೇರಿಸಲಿದೆ.