ದಳಪತಿ ವಿಜಯ್ (Thalapathy Vijay)
ತಮಿಳನಾಡು: ಇಂದು (ಮೇ.4) ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ಬೆಳಿಗ್ಗೆ ತಮಿಳುನಾಡಿನಲ್ಲಿ ಮತ ಎಣಿಕೆ ಪ್ರಾರಂಭವಾದಾಗ ನಟ-ರಾಜಕಾರಣಿ ದಳಪತಿ ವಿಜಯ್ (Thalapathy Vijay) ಅವರ ಟಿವಿಕೆ ಪಕ್ಷಕ್ಕೆ ಮುನ್ನಡೆ ದೊರೆತಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಕತ್ತನ್ನು ಸಿಳಿಕೊಂಡ ಘಟನೆ ಕೃಷ್ಣಗಿರಿಯಲ್ಲಿ ವರದಿಯಾಗಿದೆ.
28 ವರ್ಷದ ಈ ಯುವಕನನ್ನು ಕೆ.ಮಹೇಂದ್ರನ್ ಎಂದು ಗುರುತಿಸಲಾಗಿದೆ. ಇವನು ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಬೆಂಬಲಿಗನಾಗಿದ್ದು, ಎಲ್ಲಿ ತಾನು ಬೆಂಬಲಿಸುವ ಪಕ್ಷ ಸೋತು ಹೋಗುತ್ತದೆಯೋ? ಎಂದು ಭಾವಿಸಿ ಈ ಕೆಲಸ ಮಾಡಿಕೊಂಡಿದ್ದಾನೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಮಹೇಂದ್ರನ್ ದಳಪತಿ ವಿಜಯ್ನ ಕಟ್ಟಾ ಅಭಿಮಾನಿಯಾಗಿದ್ದು, ಸೋಲುವ ಭಯಕ್ಕೆ ಹೆದರಿ ಕತ್ತನ್ನು ಕುಯ್ದುಕೊಂಡಿದ್ದಾನೆ. ಈ ಘಟನೆಯನ್ನು ನೋಡಿದ ಸ್ಥಳೀಯರು ಮಹೇಂದ್ರನ್ನನ್ನು ಹತ್ತಿರದ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯಕ್ಕೆ ಮಹೇಂದ್ರನ್ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಂತರ ನೀಡಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ವಿಜಯ್ ಮೋಡಿ
ಮದ್ಯಾಹ್ನ 3.30 ರ ಹೊತ್ತಿಗೆ ತಮಿಳುನಾಡಿನ 234 ವಿಧಾನಸಭಾ ಸ್ಥಾನಗಳಲ್ಲಿ 107 ಸ್ಥಾನಗಳಲ್ಲಿ ಟಿವಿಕೆ ಮುನ್ನಡೆ ಸಾಧಿಸಿದ್ದರೆ, ಎಐಎಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಹಾಲಿ ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ 73 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, (ಏಜನ್ಸೀಸ್).