Kajal Aggarwal Wishes to Vijay 
ದೇಶ

'ನಿಮ್ಮ ಪರಿಶ್ರಮ, ದೂರದೃಷ್ಟಿಗೆ ಜನರಿಂದ ಸಿಕ್ಕ ತೀರ್ಪು ಇದು'; ಟಿವಿಕೆ ನಾಯಕ ವಿಜಯ್​ಗೆ ಹಾರೈಸಿದ Kajal Aggarwal

ಪ್ರಮುಖ ಮುಖ್ಯಾಂಶಗಳು

  • ತಮಿಳು ನಾಡಿನ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆಗೆ ಮುನ್ನಡೆ
  • ನಟ ವಿಜಯ್​ಗೆ ಎಕ್ಸ್​ನಲ್ಲಿ ಅಭಿನಂದನೆ ಸಲ್ಲಿಸಿದ ನಟಿ ಕಾಜಲ್​ ಅಗರ್ವಾಲ್​
  • ನಿಮ್ಮ ಸ್ಪೂರ್ತಿದಾಯಕ ಹಾದಿಗೆ ಮತ್ತಷ್ಟು ಶಕ್ತಿ ಸಿಗಲಿ ಎಂದ ಕಾಜಲ್
Kajal Aggarwal Wishes to Vijay: ಜನನಾಯಗನ್​ ನನ್ನ ಕೊನೆಯ ಸಿನಿಮಾ ನಾನಿನ್ನು ಸಿನಿಮಾ ಬಿಟ್ಟು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ದಳಪತಿ ವಿಜಯ್​​ ರಾಜಕೀಯಕ್ಕೆ ಕಾಲಿಟ್ಟರು. ತಮಿಳಿಗ ವೆಟ್ರಿ ಕಳಗಂನ ಸಂಸ್ಥಾಪಕರಾದನ ವಿಜಯ್​ ಅವರು ಮೊದಲ ಚುನಾವಣೆಯನ್ನು ಎದುರಿಸಿ, ಭರ್ಜರಿ ಜಯ ಸಾಧಿಸುವತ್ತ ಸಾಗಿದ್ದಾರೆ. ಡಿಎಂಕೆ ಭದ್ರಕೋಟೆಯನ್ನು ಬೇಧಿಸಿ, ಅಧಿಕಾರಿಯ ಚುಕ್ಕಾಣಿ ಹಿಡಿಯಲು ಟಿವಿಕೆ ಸಜ್ಜಾಗಲಿದೆ.
ಈ ಮಧ್ಯೆ ಬಹುಭಾಷಾ ನಟಿ ಕಾಜಲ್​ ಅಗರ್ವಾಲ್​ ಅವರು ನಟ ಮತ್ತು ಟವಿಕೆ ಸಂಸ್ಥಾಪಕ ವಿಜಯ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮ ಪರಿಶ್ರಮಕ್ಕೆ ಜನರು ತಕ್ಕುದಾದ ಉತ್ತರ ಕೊಟ್ಟಿದ್ದಾರೆ. ಮುಂದಿನ ನಿಮ್ಮ ಸಾಹಸಮ ಹಾದಿಗೆ ಅಗತ್ಯವಾದ ಶಕ್ತಿಯನ್ನು ದೇವರು ನೀಡಲಿ ಎಂದು ಅಭಿನಂದಿಸಿದ್ದಾರೆ.
ಏಪ್ರಿಲ್​ 23ರಂದು ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಶೇ.85.1 ರಷ್ಟು ಮತದಾನವಾಗಿತ್ತು. ಮೇ.4ರ ಮತ ಎಣಿಕೆಯಲ್ಲಿ ಟಿವಿಕೆ 109 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಡಿಎಂಕೆ 72 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 52 ಕ್ಷೇತ್ರಗಳಲ್ಲಿ ಎಐಎಡಿಎಂಕೆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ಕಾಜಲ್​ ಅ​ ಟ್ವೀಟ್​ನಲ್ಲಿ ಏನಿದೆ?

'ನಾನು ಒಂದು ಸಲ ಹೇಳೋದು, ನೂರು ಬಾರಿ ಹೇಳಿದ ಹಾಗೆ' ಈ ವಾಕ್ಯವನ್ನು ಜನರು ದೃಢವಾಗಿ ನಂಬಿ ವಿಜಯ್​​ ಅವರನ್ನು ಪ್ರತಿನಿಧಿಸಿದ್ದಾರೆ. ಈ ಅದ್ಭುತ ವಿಜಯಕ್ಕಾಗಿ ಟಿವಿಕೆ ಸಂಸ್ಥಾಪಕ ಮತ್ತು ನಟ ವಿಜಯ್​ ಅವರಿಗೆ ಹೃತ್ಪೂರ್ವಕ ಅಭಿನಂದನೆ ಎಂದು ಕಾಜಲ್​ ಅಗರ್ವಾಲ್​ ಅವರು ಎಕ್ಸ್​ನಲ್ಲಿ ಹಾರೈಸಿದ್ದಾರೆ.
ಜನರಿಂದ ಸ್ಪಷ್ಟ ತೀರ್ಪು ಸಿಕ್ಕಿದೆ
ನಿಮ್ಮ ರಾಜಕೀಯ ದೃಷ್ಟಿ ಕೋನ ಮತ್ತು ಪರಿಶ್ರಮಕ್ಕೆ ಜನರು ನಿಮ್ಮ ಮೇಲೆ ನಂಬಿಕೆಯು ಈ ಕ್ಷಣಕ್ಕೆ ಸಾಕ್ಷಿಯಾಗಿದೆ. ತಮಿಳು ನಾಡಿನ ಜನರು ಇಂದು ಜೋರಾಗಿ, ಸ್ಪಷ್ಟವಾಗಿ ಅವರ ತೀರ್ಪನ್ನು ಕೊಟ್ಟಿದ್ದಾರೆ. ಇದು ಕೇವಲ ಗೆಲುವಲ್ಲ ನಿಮ್ಮ ಮತ್ತು ಅವರ ಮಧ್ಯೆ ಬೆಸೆದುಕೊಂಡಿರುವ ಆಳವಾದ ಶಕ್ತಿಯುತವಾದ ಸಂಬಂಧವಾಗಿದೆ.
ಈ ಸ್ಪೂರ್ತಿದಾಯಕ ಹೊಸ ಹೆಜ್ಜೆಗೆ ದೇವರು ಮತ್ತಷ್ಟು ಶಕ್ತಿ ಮತ್ತು ಸ್ಥೈರ್ಯವನ್ನು ನೀಡಲಿ ಎಂದು ನಾನು ಹಾರೈಸುತ್ತೇನೆ. ತಮಿಳು ನಾಡಿನ ಜನರು ಆಶಿಸುವ ಬದಲಾವಣೆಯನ್ನು ನೀವು ತನ್ನಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಮೊದಲ ಬಾರಿ ರಾಜಕೀಯಕ್ಕೆ ಎಂಟ್ರಿಕೊಟ್ಟು ಈ ಅಭೂತ ಪೂರ್ವ ಸಾಧನೆಗೈದ ನಿಮಗೆ ಮತ್ತೊಮ್ಮೆ ಅಭಿನಂದನೆ ಎಂದು ನಟಿ ಕಾಜೊಲ್​ ಅಗರವಾಲ್​ ಅವರು ಎಕ್ಸ್​ನಲ್ಲಿ ಟ್ವೀಟ್ ಮಾಡಿ ಪೋಸ್ಟ್​ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್​).