TVK Manifesto | ಟಿವಿಕೆ ಮುಖ್ಯಸ್ಥ ವಿಜಯ್
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದು, ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ (ಏಪ್ರಿಲ್ 16) ತಮ್ಮ ಪಕ್ಷದ ಚೊಚ್ಚಲ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಭ್ರಷ್ಟಾಚಾರ ಮತ್ತು ಸುಳ್ಳು ಭರವಸೆಗಳ ವಿರುದ್ಧ ವಾಗ್ದಾಳಿ ನಡೆಸಿದ ವಿಜಯ್, ತಮ್ಮ ಪಕ್ಷವು ಪ್ರಾಮಾಣಿಕ ಆಡಳಿತದ ಭರವಸೆಯನ್ನು ನೀಡುತ್ತಿದೆ ಎಂದು ಘೋಷಿಸಿದರು.
- 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ಆರ್ಥಿಕ ನೆರವು.
- ಬಡ ಕುಟುಂಬಗಳ ವಧುಗಳಿಗೆ ಮದುವೆಗಾಗಿ 8 ಗ್ರಾಂ ಚಿನ್ನ (ಒಂದು ಸವರನ್) ಮತ್ತು ಗುಣಮಟ್ಟದ ರೇಷ್ಮೆ ಸೀರೆ.
- ಅನ್ನಪೂರ್ಣ ಸೂಪರ್ ಸಿಕ್ಸ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 6 ಉಚಿತ ಎಲ್‌ಪಿಜಿ ಸಿಲಿಂಡರ್.ಉಚಿತ ಪ್ರಯಾಣ: ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ.
ಶಿಕ್ಷಣ ಮತ್ತು ಉದ್ಯೋಗದ ಹೊಸ ಕ್ರಾಂತಿ
- ತಮಿಳುನಾಡಿನಲ್ಲಿ ಪ್ರತ್ಯೇಕ ಎಐ (ಕೃತಕ ಬುದ್ಧಿಮತ್ತೆ) ಸಚಿವಾಲಯ, ಎಐ ವಿಶ್ವವಿದ್ಯಾಲಯ ಮತ್ತು ಎಐ ನಗರವನ್ನು ಸ್ಥಾಪಿಸುವ ಗುರಿ.
- ಶಿಕ್ಷಣ ಸಾಲ: ಪದವಿಪೂರ್ವದಿಂದ ಡಾಕ್ಟರೇಟ್‌ವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವರೆಗೆ ಸಾಲ ಸೌಲಭ್ಯ.
- ನಿರುದ್ಯೋಗ ಭತ್ಯೆ: ಉದ್ಯೋಗ ಕಚೇರಿಯಲ್ಲಿ ನೋಂದಾಯಿತ ಪದವೀಧರ ಯುವಕರಿಗೆ ತಿಂಗಳಿಗೆ 5,000 ರೂ. ಮತ್ತು ಪದವೀಧರರಿಗೆ 10,000 ರೂ. ವರೆಗೆ ಮಾಸಿಕ ಭತ್ಯೆ.
- ಇಂಟರ್ನ್‌ಶಿಪ್: ವಾರ್ಷಿಕವಾಗಿ 5 ಲಕ್ಷ ಯುವಕರಿಗೆ ಐಟಿಐ ಮತ್ತು ಡಿಪ್ಲೊಮಾ ಪದವೀಧರರಿಗೆ 8,000 ರಿಂದ 10,000 ರೂ. ಸ್ಟೈಫಂಡ್‌ನೊಂದಿಗೆ ತರಬೇತಿ.
- ಪಿಂಚಣಿ ಏರಿಕೆ: ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಿಕ ಪಿಂಚಣಿಯನ್ನು 3,000 ರೂ. ಗೆ ಹೆಚ್ಚಳ.
ಪ್ರಣಾಳಿಕೆ ಬಿಡುಗಡೆ ವೇಳೆ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಕಟುವಾಗಿ ಟೀಕಿಸಿದ ವಿಜಯ್, ಅವರು ಕೇವಲ ಬಣ್ಣ ಮತ್ತು ಹೆಸರು ಬದಲಿಸಿ ಒಂದೇ ರೀತಿಯ ಜನವಿರೋಧಿ ಪ್ರಣಾಳಿಕೆ ನೀಡುತ್ತಿದ್ದಾರೆ. ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಬಂದಿದ್ದೇವೆ ಎಂದರು. ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23, 2026 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ(ಏಜೆನ್ಸೀಸ್).