ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ವಿಜಯ್ ನಾಮಪತ್ರ ಸಲ್ಲಿಸಿರುವುದು.  
ದೇಶ

ತಮಿಳುನಾಡು ಚುನಾವಣೆ: ಕೊಳತ್ತೂರಿನಿಂದ ನಾಮಪತ್ರ ಸಲ್ಲಿಸಿದ ಸಿಎಂ ಎಂ.ಕೆ.ಸ್ಟಾಲಿನ್; ನಟ ವಿಜಯ್ ಸಹ ಚುನವಣಾ ಪ್ರವೇಶ | Tamil Nadu elections

ಚೆನ್ನೈ: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಇಂದು(ಮಾ. 30) ಸಿಎಂ ಎಂ.ಕೆ.ಸ್ಟಾಲಿನ್ ಮತ್ತೆ ಕೊಳತ್ತೂರು ಕ್ಷೇತ್ರದಿಂದ ನಾಲ್ಕನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಚೊಚ್ಚಲ ಚುನಾವಣಾ ಪ್ರವೇಶ ಮಾಡಿರುವ ನಟ ದಳಪತಿ ವಿಜಯ್ ಸಹ ಇಂದೇ ಪೆರಂಬೂರ್​ನಿಂದ ನಾಮಪತ್ರ ಸಲ್ಲಿಸಿದ್ದಾರೆ.
2011, 2016 ಹಾಗೂ 2021ರಲ್ಲಿ ಕೊಳತ್ತೂರು ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿರುವ ಸಿಎಂ ಸ್ಟಾಲಿನ್, ನಾಲ್ಕನೇ ಬಾರಿ ಅದೇ ಅಲ್ಲಿಂದಲೇ ಸದನ ಪ್ರವೇಶ ಪ್ರವೇಶಿಸುವ ವಿಶ್ವಾಸವ್ಯಕ್ತಪಡಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ತೆರೆದ ಜೀಪಿನಲ್ಲಿ ರೋಡ್ ಶೋ ನಡೆಸಿ, ಕೊಳತ್ತೂರು ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆಗಳ ಪುಸ್ತಕವನ್ನು ಬಿಡುಗಡೆ ಮಾಡಿದರು.
ಈ ವೇಳೆ ಎಎನ್​ಐ ಜೊತೆ ಮಾತನಾಡಿರುವ ಸಿಎಂ ಸ್ಟಾಲಿನ್, ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ತಮಗೆ ಬಲವಾದ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ಮೂರು ಬಾರಿ ಹೋಲಿಸಿದರೆ, ಈ ಬಾರಿ ನನಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ಗೆಲುವು ತುಂಬಾ ಉಜ್ವಲವಾಗಿರುತ್ತದ ಎಂದು ಹೇಳಿದ್ದಾರೆ.
ಮುಂದುವರೆದು ಈ ಚುನಾವಣೆ ತಮಿಳುನಾಡು ಮತ್ತು ದೆಹಲಿ ನಡುವಿನ ಯುದ್ಧ ಎಂದು ಬಣ್ಣಿಸಿದರು. ಈ ಬಾರಿ ಗೆಲುವು ತುಂಬಾ ದೊಡ್ಡದಾಗಿರುತ್ತದೆ. ನಮ್ಮ ಇಂಡಿಯಾ ಮೈತ್ರಕೂಟ ಏಕತೆಯಿಂದ ಗಟ್ಟಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ನಟ ವಿಜಯ್ ಚೊಚ್ಚಲ ಚುನಾವಣಾ ಪ್ರವೇಶ

ತಮಿಳಗ ವೆಟ್ರಿ ಕಳಗಂ ಪಕ್ಷ ಕಟ್ಟಿ ಈ ಬಾರಿ ಚುನಾವಣಾ ಕಣಕ್ಕೆ ಧುಮುಕಿರಿವ ನಟ ದಳಪತಿ ವಿಜಯ್, ಇದೇ ಮೊದಲ ಬಾರಿ ಚುನಾವಣಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚೆನ್ನೈನ ಪೆರಂಬೂರು ಮತ್ತು ತಿರುಚಿ ಪೂರ್ವದ ಎರಡು ನಗರ ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ಇಂದು ಪೆರಂಬೂರ್ ಕ್ಷೇತ್ರದಿಂದ ಸ್ಪರ್ಧಿಸಲು ನಟ ವಿಜಯ್, ವ್ಯಾಸರ್ಪಾಡಿಯ ಡಾ. ಅಂಬೇಡ್ಕರ್ ಸರ್ಕಾರಿ ಕಲಾ ಕಾಲೇಜಿನಲ್ಲಿ ಚುನಾವಣಾಧಿಕಾರಿಯ ಮುಂದೆ ತಮ್ಮ ನಾಮಪತ್ರ ಸಲ್ಲಿಸಿದರು. ವಿಜಯ್​ಗೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ಆರ್. ನಿರ್ಮಲ್ ಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಾಥ್ ನೀಡಿದರು. ಕಚೇರಿ ಹೊರಗಡೆ ವಿಜಯ್ ನೋಡಲು ಸಾವಿರಾರು ಜನ ಆಗಮಿಸಿದ್ದರು (ಏಜೆನ್ಸೀಸ್).