ಚೆನ್ನೈ: 2026ರ ತಮಿಳುನಾಡು ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಅಚ್ಚರಿ ಫಲಿತಾಂಶದಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ಟಿವಿಕೆ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಂತೆ, ಶೇರು ಮಾರುಕಟ್ಟೆಯಲ್ಲಿ ಆಡಳಿತರೂಢ ಡಿಎಂಕೆ ಕುಟುಂಬ ಒಡೆತನದ ಸನ್ ಟಿವಿ ನೆಟ್ವರ್ಕ್ ಶೇರುಗಳು ಶೇ. 09ರಷ್ಟು ಕುಸಿದಿವೆ.
ಚೆನ್ನೈ ಮೂಲದ ಸನ್ ಟವಿ ನೆಟ್ವರ್ಕ್ ಸಂಸ್ಥೆ ಡಿಎಂಕೆ ಕುಟುಂಬದ ಕಲಾನಿಧಿ ಮಾರನ್ ಒಡೆತನದಲ್ಲಿದೆ. ಎಕ್ಸಿಟ್ ಪೋಲ್‌ಗಳಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವರದಿಯಿಂದ ಸನ್ ಟಿವಿಯ ಷೇರುಗಳು ಏರಿಕೆಯಾಗಿದ್ದವು. ಆದರೆ, ಫಲಿತಾಂಶದ ದಿನ ಮತಎಣಿಕೆಯಲ್ಲಿ ಡಿಎಂಕೆ ಮೂರನೇ ಸ್ಥಾನಕ್ಕೆ ಕುಸಿಯುತ್ತಿದ್ದಂತೆ ಷೇರುಗಳು ಶೇಕಡಾ 9.5 ರಷ್ಟು ಕುಸಿದಿವೆ.
ಬೆಳಿಗ್ಗೆ 12.40ರ ಹೊತ್ತಿಗೆ ತಮಿಳುನಾಡಿನ 234 ವಿಧಾನಸಭಾ ಸ್ಥಾನಗಳಲ್ಲಿ 112 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಐಎಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಹಾಲಿ ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಕೇವಲ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ (ಏಜೆನ್ಸೀಸ್).