tamil nadu karnataka cauvery dispute
- ಜೂನ್ ಹಾಗೂ ಜುಲೈ ತಿಂಗಳಿಗೆ ನಿಗದಿಯಾಗಿದ್ದ ನೀರು ಬಿಡದ ಹಿನ್ನೆಲೆ
- ಕಾವೇರಿ ವಿಚಾರವಾಗಿ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು
- ನಿಗದಿಯಾಗಿರುವ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶಸುವಂತೆ ತಮಿಳುನಾಡು ಮನವಿ
ನವದೆಹಲಿ: ಕಾವೇರಿ ನೀರು ಹರಿಸೋದು ಬೇಡ ಎಂದು ಹೋರಾಟ ನಡೆಸುತ್ತಿರುವ ಹೊತ್ತಲ್ಲೇ, ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ( CWMA ), ಕಾವೇರಿ ನೀರು ನಿಯಂತ್ರಣ ಸಮಿತಿ ಕೊಟ್ಟಿರುವ ಆದೇಶವನ್ನು ಪಾಲಿಸಲು ಕರ್ನಾಟಕ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದೆ.
ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಹರಿಸುವಂತೆ CWRC ಶಿಫಾರಸ್ಸು ಮಾಡಿತ್ತು. ಆ ಬೆನ್ನಲ್ಲೇ ಮಂಡ್ಯ, ಶ್ರೀರಂಗಪಟ್ಟಣ್ಣ ಸೇರಿದಂತೆ ನಾನಾ ಭಾಗದ ರೈತರು ಪ್ರತಿಭಟನೆ ನಡೆಸಿದ್ದರು. ಬಿಜೆಪಿ ನಾಯಕರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸುಪ್ರೀಂ ಕದ ತಟ್ಟಿದ ತಮಿಳುನಾಡು
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ್ದ ಸಿಎಂ ಡಿಕೆ ಶಿವಕುಮಾರ್, ಕಾವೇರಿ ನೀರಾವರಿ ವಿಚಾರದಲ್ಲಿ ನಿನ್ನೆ ನೀರು ಬಿಡಬೇಕು ಅಂತ ಹೇಳಿದ್ದಾರೆ. ಆದರೆ ನಮಗೆ ಇನ್ನೂ ವರುಣ ಕೃಪೆ ಇಲ್ಲ. ನಾವು ಈ ಆರ್ಡರ್ ಅನ್ನು ಅಪೀಲು ಮಾಡೋಕೆ ನಿರ್ಧಾರ ಮಾಡಿದ್ದೀವಿ ಎಂದು ಹೇಳಿದ್ದರು. ಆದರೆ, ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ CWMA, ಕಾವೇರಿ ನೀರು ನಿಯಂತ್ರಣ ಸಮಿತಿ ಆರ್ಡರ್ ಕಂಟಿನ್ಯೂ ಮಾಡಲು ಗುರುವಾರ ಆದೇಶ ನೀಡಿತ್ತು.
ನೀರು ಬಿಡುವಂತೆ ನಿರ್ದೇಶಿಸಿ
ಜೂನ್ ಹಾಗೂ ಜುಲೈ ತಿಂಗಳಿಗೆ ನಿಗದಿಯಾಗಿದ್ದ ನೀರು ಬಿಡದ ಹಿನ್ನೆಲೆ. ತಮಿಳುನಾಡು ಸಿಎಂ ಸಿ ಜೋಸೆಫ್ ವಿಜಯ್ ಅವರ ನಿರ್ದೇಶನದ ಮೇರೆಗೆ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.. ನಿಗದಿಯಾಗಿರುವ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶಸುವಂತೆ ತಮಿಳುನಾಡು ಮನವಿ ಮಾಡಿದೆ ಎನ್ನಲಾಗಿದೆ.
ಜುಲೈ 28ರ 139ನೇ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲವಿಜ್ಞಾನ ಮತ್ತು ಹವಾಮಾನ ಪರಿಸ್ಥಿತಿ ಪರಿಶೀಲನೆ ನಡೆಸಿದ ನಂತರ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿತ್ತು. ಜುಲೈ 29ರಿಂದ ಆಗಸ್ಟ್ 12ರವರೆಗೆ 3500 ಕ್ಯೂಸೆಕ್ ಕಾವೇರಿ ನೀರು ತಮಿಳುನಾಡಿಗೆ ಹರಿಸಬೇಕು ಎನ್ನಲಾಗಿತ್ತು.
ತಮಿಳುನಾಡಿಸ ಸರ್ಕಾರದ ವರದಿ ಪ್ರಕಾರ, ಕರ್ನಾಟಕದಲ್ಲಿ ಜಲಾಶಯಲ್ಲಿ ನೀರಿದೆ. ಆಗಸ್ಟ್ 3ರಹೊತ್ತಿಗೆ , ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾದರೆ, ಇನ್ನು 23.078 ಟಿಎಂಸಿ, ಕಬಿನಿ 18.610 ಟಿಎಂಸಿ, ಹಾರಂಗಿ 7.827 ಟಿಎಂಸಿ ಮತ್ತು ಹೇಮಾವತಿ 28.022 ಟಿಎಂಸಿ ತುಂಬಿಕೊಳ್ಳುತ್ತದೆ ಎನ್ನಲಾಗಿದೆ. ನಾಲ್ಕು ಜಲಾಶಯಗಳಲ್ಲಿ ಒಟ್ಟು ಸಂಗ್ರಹವು 77.537 ಟಿಎಂಸಿ ಆಗಿದ್ದು, ಇದರಲ್ಲಿ 67.517 ಟಿಎಂಸಿ ಬಳಸಬಹುದಾದ ನೀರು ಸೇರಿದೆ ಎಂದು ವಾದಿಸಿದೆ ಎನ್ನಲಾಗಿದೆ.
ಆಗಸ್ಟ್ ಮೂರರ ಹೊತ್ತಿಗೆ ಕರ್ನಾಟಕದ ಕೆಆರ್ಎಸ್ ಡ್ಯಾಂ, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯದಲ್ಲಿ ಒಟ್ಟು 77.537 ಟಿಎಂಸಿ ನೀರು ತುಂಬಲಿದೆ. CWRC ನಿರ್ದೇಶನದಂತೆ ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕಕ್ಕೆ ಯಾವುದೇ ತೊಂದರೆಯಾಗೋದಿಲ್ಲ ಎಂದು ಉಲ್ಲೇಖಿಸಿದ್ದಾರೆ,