ನಟ ಶಿವಕಾರ್ತಿಕೇಯನ್ 
ದೇಶ

ತಮಿಳು ನಟ ಶಿವಕಾರ್ತಿಕೇಯನ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಮತ್ತೊಂದು ಕಾರು; ತಪ್ಪಿದ ಅನಾಹುತ | Sivakarthikeyan

ಚೆನ್ನೈ: ತಮಿಳು ಜನಪ್ರಿಯ ನಟ ಶಿವಕಾರ್ತಿಕೇಯನ್(Sivakarthikeyan) ಅವರ ಕಾರು ಅಪಘಾತಕ್ಕೀಡಾಗಿದ್ದು, ಅವರ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಕಾರಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಚೆನ್ನೈ ಸೆಂಟ್ರಲ್​ನ ಕೈಲಾಶ್ ನಗರದಲ್ಲಿ ಘಟನೆ ನಡೆದಿದೆ. ಟ್ರಾಫಿಕ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಶಿವಕಾರ್ತಿಕೇಯನ್ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಹತ್ತಿರದ ಸಂಚಾರ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದು, ಶಿವಕಾರ್ತಿಕೇಯನ್ ಮತ್ತು ಅವರ ಕುಟುಂಬ ಸದಸ್ಯರು ಕಾರಿನಲ್ಲಿದ್ದರು, ಸುರಕ್ಷಿತರಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ (ಏಜೆನ್ಸೀಸ್).