Lucknow Father Toilet Seat Protest (AI Image) 
ದೇಶ

ಪ್ರತ್ಯೇಕ ಶೌಚಾಲಯ​ ಇಲ್ಲ ಎಂದು 67 ವರ್ಷದಿಂದ ಹೆಣ್ಮಕ್ಕಳಿಗೆ ಸೀಟ್​ ಕೊಡದ ಕಾಲೇಜು: ಅನ್ಯಾಯ ತಡೆಯಲು ತಂದೆಯೊಬ್ಬ ಮಾಡಿದ್ದೇನು ಗೊತ್ತಾ?..Lucknow

ಪ್ರಮುಖ ಮುಖ್ಯಾಂಶಗಳು

  • ಲಖನೌನ ಕಾಲೇಜೊಂದರಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶಾತಿ ನಿಷೇಧ
  • ಶೌಚಾಲಯ ಇಲ್ಲ ಎಂದು ಪ್ರವೇಶ ಕೊಡದ ಕಾಲೇಜು ಆಡಳಿತ ಮಂಡಳಿ
  • ಟಾಯ್ಲೆಟ್​ ಸೀಟು ತಂದು ಮಗಳಿಗೆ ಪ್ರವೇಶ ಕೊಡಿ ಎಂದು ತಂದೆಯಿಂದ ಪ್ರತಿಭಟನೆ
  • ಶೌಚಾಲಯ ಇಲ್ಲ ಅನ್ನೋದು ಒಂದು ನೆಪ, ಇಂತಹ ಕಾಲಘಟ್ಟದಲ್ಲು ಲಿಂಗ ತಾರತಮ್ಯ ಇದ್ರೆ ಹೇಗೆ ಎಂದ ಸ್ಥಳೀಯರು
ಲಖನೌ: ಇದು 21ನೇ ಶತಮಾನ...ಹಿಂದಿನ ಸಂಸ್ಕಾರದಂತೆ ಹೆಣ್ಣು ಮನೆಯಲ್ಲೇ ಕೂತಿಲ್ಲ...ಶಿಕ್ಷಣ..‌ರೈಲ್ವೆ..ವಾಯು..ಸೇನೆ ಹೀಗೆ ಎಲ್ಲೆಲ್ಲಿಯೂ ಇದ್ದಾಳೆ. ಮನೆ ನಿಭಾಯಿಸಲೂ ಸೈ..ವೃತ್ತಿಗೂ ಸೈ ಇಂತಹ ಕಾಲಘಟ್ಟದಲ್ಲಿ ಲಖನೌನ ಕಾಲೇಜೊಂದು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ(No Toilets) ಇಲ್ಲ ಎನ್ನುವ ಕಾರಣಕ್ಕೆ 67 ವರ್ಷಗಳಿಂದ ಪ್ರವೇಶ ನಿಷೇಧಿಸಿರುವ ಘಟನೆಯೊಂದು ತಂದೆಯೊಬ್ಬರ ಮೂಲಕ ಬೆಳಕಿಗೆ ಬಂದಿದೆ.
ಮಗಳ ಕಣ್ಣಲ್ಲಿ ಅಕ್ಷರಗಳ ಲೋಕವನ್ನು ಕಾಣಬೇಕು..ಆಕೆ ದಿಟ್ಟ ಅಧಿಕಾರಿಯೋ ಶಿಕ್ಷಕಿಯೋ ಆಗಬೇಕು ಎನ್ನುವ ತಂದೆಯ ಆಸೆಗೆ, ಉತ್ತರ ಪ್ರದೇಶದ ರಾಜಧಾನಿ ಲಖನೌದ ಕಾಲೇಜಿನ 67 ವರ್ಷಗಳ ಹಳೆಯ ನಿಯಮವೊಂದು ಅಡ್ಡಿಯಾಗಿತ್ತು. ಮಗಳಿಗಾಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು. ಅದೇ ಸಂಸ್ಥೆಯಲ್ಲಿ ಶಿಕ್ಷಣ ಕೊಡಿಸಲು ವ್ಯಕ್ತಿಯೊಬ್ಬರು ಕೈಯಲ್ಲಿ 'ಟಾಯ್ಲೆಟ್ ಸೀಟ್' ಹಿಡಿದು ಕಾಲೇಜು ಮುಂದೆ ಪ್ರತಿಭಟನೆ ನಡೆಸಿರುವುದು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹೆಣ್ಣು ಮಕ್ಕಳಿಗೆ ಕೊಡುತ್ತಿರುವ ಸಮಾನತೆ ಬಗ್ಗೆ ಹೊಸ ಚರ್ಚೆ ಎದ್ದಿದೆ.

ಏನಿದು ಘಟನೆ?

ಲಖನೌದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ' ಜಿಂಕು ಲಾಲ್ ತ್ರಿವೇಣಿ ರಾಮ್ ಚೌಧರಿ ಇಂಟರ್ ಸಹ ಒಂದು ಇದು 67 ವರ್ಷಗಳಿಂದ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡುವುದನ್ನು ನಿಷೇಧಿಸಿದೆ. ಈ ಅನ್ಯಾಯವನ್ನು ಪ್ರಶ್ನಿಸಿ, ಮಗಳಿಗಾಗಿ ಸೀಟ್​ ಕೇಳಿಕೊಂಡು ಕಾಲೇಜಿನ ಮೆಟ್ಟಿಲೇರಿ ಆಡಳಿತ ಮಂಡಳಿಯನ್ನು ಈ ಬಗ್ಗೆ ಪ್ರಶ್ನಿಸಿದ. ಸೀಟ್​ ಕೊಡಿ ಎಂದು ಮನವಿ ಮಾಡಿಕೊಂಡ. ಆದರೆ, ಕಾಲೇಜು ಆಡಳಿತ ಮಂಡಳಿ ಮಾತ್ರ ವಿನಂತಿಗೆ ಕ್ಯಾರೆ ಎನ್ನದೆ, ತನ್ನ ಹಳೆಯ ನಿಯಮವನ್ನು ಉಲ್ಲೇಖಿಸಿ ಪ್ರವೇಶ ನಿರಾಕರಿಸಿದೆ.

ಟಾಯ್ಲೆಟ್​​ ಸೀಟ್​ ಹಿಡಿದು ಪ್ರತಿಭಟಿಸಿದ್ದು ಯಾಕೆ?

ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿಲ್ಲ ಎಂಬ ನೆಪ ಹೇಳಿ ಪ್ರವೇಶ ನಿರಾಕರಿಸಲಾಗುತ್ತಿದೆ. ಹಾಗಾಗಿ ನಾನೇ ಶೌಚಾಲಯದ ಸೀಟನ್ನು ತಂದಿದ್ದೇನೆ, ಇದನ್ನು ಇಟ್ಟುಕೊಂಡು ನನ್ನ ಮಗಳಿಗೆ ಶಿಕ್ಷಣ ನೀಡಿ ಎಂದು ಕಾಲೇಜಿನ ಆಡಳಿತ ಮಂಡಳಿಯ ಈ ಬೇಜವಾಬ್ದಾರಿಯುತ ಹೇಳಿಕೆ ವಿರುದ್ಧ ಅವರು ಪ್ರತಿಭಟಿಸಿದರು. ಕಾಲೇಜಿನ ಗೇಟಿನ ಮುಂದೆ ಕೈಯಲ್ಲಿ ಹೊಸ ಟಾಯ್ಲೆಟ್ ಸೀಟ್ ಒಂದನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಜಿಂಕು ಲಾಲ್ ತ್ರಿವೇಣಿ ರಾಮ್ ಚೌಧರಿ ಇಂಟರ್​​ ಕಾಲೇಜು ಸ್ಥಾಪನೆಯಾದ ಕೆಲವು ವರ್ಷ ಕೋ ಎಜುಕೇನ್​ ಇತ್ತು. ಆದರೆ,1957ರ ಕಾಲಘಟ್ಟದಲ್ಲಿ ಕಾರಣಾಂತರಗಳಿಂದಾಗಿ ಹೆಣ್ಣು ಮಕ್ಕಳಿಗೆ ಪ್ರವೇಶವನ್ನು ನಿರ್ಬಂಧಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಕಾಲೇಜಿನಲ್ಲಿ ಗಂಡು ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಟಾಯ್ಲೆಟ್​​ ಇಲ್ಲ ಎನ್ನುವುದು ನೆಪ ಮಾತ್ರ ಎಂದು ಸ್ಥಳೀಯರು ಮಾತನಾಡಿದ್ದಾರೆ. ಜೊತೆಗೆ "ಬೇಟಿ ಬಚಾವೋ, ಬೇಟಿ ಪಢಾವೋ" ಎನ್ನುವ ಸರ್ಕಾರಿ ಘೋಷಣೆ ಮಧ್ಯೆ ಇಂತಹ ಸಂಸ್ಥೆಗಳ ವರ್ತನೆಯು ಸಾರ್ವಜನಿಕರನ್ನು ಕೆರಳಿಸುವಂತೆ ಮಾಡಿದೆ.
ಶಿಕ್ಷಣ ಇಲಾಖೆ ಕೈಗೊಂಡ ಕ್ರಮವೇನು?
ಈ ಟಾಯ್ಲೆಟ್​ ಪ್ರತಿಭಟನೆಯು ಸದ್ದು ಮಾಡುತ್ತಲೇ ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಿ ಕಾಲೇಜಿ ನೋಟಿಸ್​​ ನೀಡಿದೆ. ಇನ್ನು ಈ ಬಗ್ಗೆ ಬಸ್ತಿ ಜಿಲ್ಲಾ ಶಾಲೆಗಳ ನಿರೀಕ್ಷಕ (ಡಿಐಒಎಸ್) ಸಂಜಯ್ ಸಿಂಗ್, ಮಾತನಾಡಿ ವ್ಯಕ್ತಿ ಮಾಡಿರುವ ಆರೋಪ ನಿಜ ಎಂದು ಸಾಬೀತಾದರೆ, ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು, (ಏಜೆನ್ಸೀಸ್​).