TAJ MAHAL  
ದೇಶ

ತಾಜ್‌ ಮಹಲ್‌ ಅಲ್ಲ ಶಿವನ ದೇಗುಲ? ಹೈಕೋರ್ಟ್‌ ನೋಟಿಸ್‌ ಬೆನ್ನಲ್ಲೇ ಬಯಲಾಗುತ್ತಾ 22 ಮುಚ್ಚಿದ ಕೊಠಡಿ ರಹಸ್ಯ?

ಪ್ರೇಮ ಸೌಧ ವಿಶ್ವ ವಿಖ್ಯಾತ ತಾಜ್ ಮಹಲ್ ಈ ಹಿಂದೆ ಶಿವ ಮಂದಿರವಾಗಿತ್ತು ಎಂದು ವಾದಿಸಿರುವ ವಕೀಲರ ಗುಂಪೊಂದು ಅದನ್ನು ಹಿಂದೂಗಳಿಗೆ ವರ್ಗಾಯಿಸಬೇಕೆಂದು ಕೋರ್ಟ್ ಮೆಟ್ಟಿಲೇರಿತ್ತು. ದಶಕಗಳಿಂದಲೂ ಸಾಕಷ್ಟು ಇತಿಹಾಸಕರರೂ ತಾಜ್​ ಮಹಲ್​ ಹಿಂದೂ ದೇವಾಲಯವೇ ಎಂದು ತೀವ್ರವ ಚರ್ಚೆಯನ್ನೂ ನಡೆಸುತ್ತಿದ್ದರು. ಇದೀಗ ಈ ಚರ್ಚೆ ನೇರವಾಗಿ ಅಲಹಬಾದ್​​ ಹೈಕೋರ್ಟ್​​ ಮೆಟ್ಟಿಲೇರಿದೆ. ಈ ಬಗ್ಗೆ ಪೂರ್ಣ ವಿಚಾರಣೆ ನಡೆಸಿರೋ ಅಲಹಬಾದ್​​ ಹೈಕೋರ್ಟ್​​, ಈ ಬಗ್ಗೆ ಸೂಕ್ತ ವಿವರಣೆ ಮತ್ತು ಕೌಂಟರ್​ ಅಫಿಡವಿಟ್​​ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಪುರಾತತ್ವ ಇಲಾಖೆಗೆ ನೋಟಿಸ್​​ ಜಾರಿ ಮಾಡಿದೆ. ಹೈಕೋರ್ಟ್​ನ ನ್ಯಾಯಮೂರ್ತಿ ರೋಹಿತ್​​ ರಂಜನ್​ ಅಗರ್ವಾಲ್​, ಅವರ ಏಕಸದಸ್ಯ ಪೀಠ ನೀಡಿರುವ ಈ ಕಠಿಣ ಆದೇಶ ಇವತ್ತು ಇಡೀ ದೇಶದಲ್ಲಿ ಭಾರೀ ಸಂಚಲನವನ್ನ ಮೂಡಿಸಿದೆ. ತಾಜ್​ ಮಹಲ್​ ಶಿವ ದೇವಾಲಯವಾಗಿತ್ತಾ ಹಾಗಿದ್ರೆ ಕೋರ್ಟ್​​ ಹೇಳಿದ್ದೇನು ನೋಡೋಣ...
11 ವರ್ಷಗಳ ಹಿಂದೆ 2015ರ ಜುಲೈ ತಿಂಗಳಿನಲ್ಲಿ 6 ವಕೀಲರು ಸೇರಿ ಸಲ್ಲಿಸಿರುವ ಅರ್ಜಿಯನ್ನು ವಿಭಾಗೀಯ ನ್ಯಾಯಾಲಯದ ನ್ಯಾಯಾಧೀಶರು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ರವಾನಿಸಿದ್ದು, 2015 ಆಗಸ್ಟ್ 1 0ರೊಳಗಾಗಿ ಪ್ರತಿಕ್ರಿಯೆ ನೀಡಲು ಈ ಹಿಂದೆಯೇ ಸೂಚಿಸಿತ್ತು. ತಾಜ್ ಶಿವಮಂದಿರವಾಗಿತ್ತು ಎನ್ನುವ ಈ ವಕೀಲರ ವಾದವನ್ನು ಈ ಹಿಂದೆ ಭಾರತೀಯ ಪುರಾತತ್ವ ಇಲಾಖೆಯು ತಳ್ಳಿಹಾಕಿತ್ತು.
ಅಲ್ಲದೇ 'ತಾಜ್ ಮಹಲ್ ಈ ಹಿಂದೆ ಅಗ್ರೇಶ್ವರ ಮಹದೇವ ಮಂದಿರವಾಗಿತ್ತು ಎಂಬುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಹಾಗಾಗಿ ಅದರ ಮಾಲಿಕತ್ವವನ್ನು ಹಿಂದೂಗಳಿಗೆ ವರ್ಗಾಯಿಸಿ ಅಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಮಾಡುವುದಕ್ಕೆ ನಿರ್ಬಂಧ ಹೇರಬೇಕು,'ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ತಮ್ಮ ಅರ್ಜಿಯಲ್ಲಿ ಅಗ್ರೇಶ್ವರ ಮಹದೇವನೇ ತಾಜ್‌ಮಹಲ್‌ನ ಮಾಲಿಕ ಎಂದು ಉಲ್ಲೇಖಿಸಿರುವ ವಕೀಲರು ಆತನೇ ಬಂದು ತನ್ನ ಮಾಲಿಕತ್ವವನ್ನು ಸಾಬೀತುಪಡಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಇದೀಗ "ವಿಶ್ವ ಪರಂಪರೆಯ ತಾಣ ಹಾಗೂ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಮೂಲತಃ ಶಿವನಿಗೆ ಸಮರ್ಪಿತವಾದ 'ತೇಜೋ ಮಹಾಲಯ' ಎಂಬ ಹಿಂದೂ ದೇವಾಲಯವಾಗಿತ್ತು ಎಂದು ಹೇಳಲಾಗಿದೆ. ಸದ್ಯ ಇದರ ಪರಿಶೀಲನೆಯನ್ನ ಕೋರಿ ವಕೀಲರು ಸಲ್ಲಿಸಲಾದ ಅರ್ಜಿಯ ಕುರಿತು ಸೋಮವಾರ ಅಲಹಾಬಾದ್ ಹೈಕೋರ್ಟ್, ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆಗೆ ಉತ್ತರ ನೀಡುವಂತೆ ಸೂಚಿಸಿದೆ.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಅರ್ಜಿಗೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ತಾಜ್ ಮಹಲ್ ಅನ್ನು ಪರಿಶೀಲಿಸಲು ಮತ್ತು ಅದರ ಛಾಯಾಚಿತ್ರಗಳನ್ನು ತೆಗೆಯಲು 'ಅಡ್ವೊಕೇಟ್ ಕಮಿಷನರ್' ಒಬ್ಬರನ್ನು ನೇಮಿಸುವಂತೆ ಕೋರಿದ ವಿನಂತಿಯನ್ನು ಕೆಳ ನ್ಯಾಯಾಲಯಗಳು ಈಗಾಗಲೇ ಎರಡು ಬಾರಿ ತಿರಸ್ಕರಿಸಿವೆ ಎಂದು ದಿ ವೈರ್ ವರದಿ ಮಾಡಿದೆ.
ಮೊಘಲರ ಆಡಳಿತಾವಧಿಗೂ ಮುನ್ನ ತಾಜ್​ ಮಹಲ್​ ಶಿವನ ದೇವಾಲಯವಾಗಿತ್ತು...!
ಅಲಹಬಾದ್​​ ಹೈಕೋರ್ಟ್​​​ನಲ್ಲಿ ಈ ಅರ್ಜಿಯನ್ನ ಸ್ವತ: ಆರಾಧ್ಯ ದೇವತೆ ಲಾರ್ಡ್​​ ಶ್ರೀ ಭಗವಾನ್ ಅಗ್ರೇಶ್ವರ ಮಹಾದೇವ್ ನಾಗನಾಥೇಶ್ವರ ವಿರಾಜಮಾನ್ ತೇಜೋ ಮಹಾಲಯ ಟೆಂಪಲ್​​ ಪ್ಯಾಲೇಸ್​​ ಪರವಾಗಿ ಸಲ್ಲಿಸಲಾಗಿದೆ. ಭಾರತೀಯ ಕಾನೂನಿನ ಅಡಿಯಲ್ಲಿ ಯಾವುದೇ ದೇವಸ್ಥಾನ ಮೂರ್ತಿ ಅಥವಾ ದೇವತೆಯನ್ನ ಕಾನೂನಾತ್ಮಕ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಪ್ರಸಿದ್ಧ ವಕೀಲ ಹರಿಶಂಕರ್​ ಜೈನ್​ ದೇವತೆಯ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಜೊತೆಗೆ ದೇಶದ ನೂರಾರು ಶಿವಭಕ್ತರು ಕಾನೂನು ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಈ ಸಿವಿಲ್ ಮೊಕದ್ದಮೆಯು 2015 ರಿಂದ ಆಗ್ರಾ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ತಾಜ್ ಮಹಲ್ ಮೂಲತಃ ಶಿವನ ದೇವಾಲಯವಾಗಿತ್ತು ಮತ್ತು ಮೊಘಲರ ಆಡಳಿತಾವಧಿಯಲ್ಲಿ ಅದನ್ನು ಮುಮ್ತಾಜ್ ಮಹಲ್ ಅವರ ಸಮಾಧಿಯಾಗಿ (ಮಕ್ಬರಾ) ಪರಿವರ್ತಿಸಲಾಯಿತು ಎಂದು ಘೋಷಿಸಬೇಕು ಎಂದು ಅರ್ಜಿದಾರರು ಬಯಸಿದ್ದಾರೆ. ಅಲ್ಲದೇ ತಾಜ್​ ಮಹಲ್​​ ಒಳಾಂಗಣದಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಮತ್ತು ಪೂಜೆಗಳನ್ನು ನೆರವೇರಿಸಲು ಅನುಮತಿ ನೀಡಬೇಕೆಂದು ಅವರು ಕೋರಿದ್ದಾರೆ.
ಅರ್ಜಿದಾರರ ಬೇಡಿಕೆ ಏನು?
ಅರ್ಜಿದಾರರ ಬೇಡಿಕೆ ಏನೆಂದರೆ...ತಾಜ್​ ಮಹಲ್​ ಎಂಬುದು ಮೊಗಲರಿಗಿಂತ ಮೊದಲೇ ಅಸ್ತಿತ್ವದಲ್ಲಿದ್ದ ಭಗವಾನ್​ ಶಿವನಿಗೆ ಸಮರ್ಪಿತವಾದ ತೇಜೋ ಮಹಾಲಯ ದೇವಾಲಯವಾಗಿದ್ದು, ಇದನ್ನ ಹಿಂದೂ ದೇವಾಲಯವೆಂದು ಅಧಿಕೃತವಾಗಿ ಘೋಷಿಸಬೇಕು ಮತ್ತು ಭಾರತೀಯ ಸಂವಿಧಾನ ಅನುಚ್ಛೇದ 25ರ ಅಡಿಯಲ್ಲಿ ಪ್ರತಿಯೊಬದ್ ಹಿಂದೂ ಪ್ರಜೆಗೂ ತನ್ನ ಧರ್ಮವನ್ನ ಪಾಲಿಸುವ ಮೂಲಭೂತ ಹಕ್ಕು ಇರುವುದರಿಂದ ತಾಜ್​ ಮಹಲ್​ ಒಳಗೆ ಹೋಗಿ ದರ್ಶನ ಪೂಜೆ ಅಭಿಷೇಕ ಮಾಡಲು ಪೂರ್ಣ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.
ನೆಲ ಮಾಳಿಗೆಯೊಳಗೆ ಫೋಟೋ ತೆಗೆಯಲು ಒತ್ತಾಯ...!
2015ರ ಅರ್ಜಿ ಬಾಕಿ ಇರುವಾಗಲೇ ಅರ್ಜಿದಾರ 2017ರಲ್ಲಿ ಮತ್ತೊಂದು ಅತ್ಯಂತ ಪ್ರಮುಖ ಅರ್ಜಿಯನ್ನ ಸಲ್ಲಿಸಿದ್ದರು. ಅವರ ಪ್ರಕಾರ ತಾಜ್​ ಮಹಲ್​ನ ಮುಚ್ಚಿರುವ ಕೊಠಡಿಗಳು ಮತ್ತು ನೆಲಮಾಳಿಗೆಯ ಒಳಗೆ ಹಿಂದೂ ದೇವಸ್ಥಾನಗಳ ವಾಸ್ತು ಶಿಲ್ಪ ಶೈಲಿ ಹಾಗೂ ಹಿಂದೂ ದಾರ್ಮಿಕ ಚಿ9ಹ್ನೆಗಳು ಇರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ರಹಸ್ಯಗಳನ್ನ ಕೇವಲ ಮೌಖಿಕ ಸಾಕಷ್ಇಗಳಿಂದ ಸಾಬೀತು ಪಡಿಸಲು ಸಾಧ್ಯವಿಲ್ಲ....ಆದ್ದರಿಂದ ತಾಜ್​ ಮಹಲನ್ನು ಸಂಪೂರ್ಣವಾಗಿ ವೈಜ್ಞಾನಿಕವಾಗಿ ಪರಿಶೀಲಿಸಲು ಫೋಟೋ ಮತ್ತು ವಿಡಿಯೋಗ್ರಾಫಿ ಮಾಡಲು ಹಾಗೂ ನ್ಯಾಯಾಲಯಕ್ಕೆ ನಿಖರ ವರದಿಯನ್ನು ಸಲ್ಲಿಸಲು ಒಬ್ಬ ಸ್ವತಂತ್ರ ಅಡ್ವೋಕೇಟ್​​ ಕಮಿಷ್​ನರ್​​​ನನ್ನ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ರು.
ಆಗ್ರಾ ಕೋರ್ಟ್​​ನ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ...!
ಕಮಿಷನರ್​ ನೇಮಿಸಿ ಎಂದ ಹೈಕೋರ್ಟ್​​​
ಆದರೆ ಆಗ್ರಾದ ಸಿವಿಲ್ ಕೆಳ ನ್ಯಾಯಾಲವು 2019ರಲ್ಲಿ ಈ ಕಮಿಷನರ್​ ನೇಮಕ ಅರ್ಜಿಯನ್ನ ತಿರಸರ್ಕಾರ ಮಾಡಿತ್ತು. ಅಲ್ಲಿ ಯಾವುದೇ ಸ್ಥಳೀಯ ತನಿಖೆಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಇದೇ ನಿರ್ಧಾರವನ್ನ ಆಗ್ರಾದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೂ ಸಹಿತ ಏ.4 2026ರಂದು ತೀರ್ಪನ್ನ ಎತ್ತಿ ಹಿಡಿದಿದ್ದು, ಕೆಳ ನ್ಯಾಯಾಲಯಗಳು ಅರ್ಜಿ ತಿರಸ್ಕರಿಸಲು ನೀಡಿದ ಕಾರಣ ಏನು ಅಂದ್ರೆ ಅಲ್ಲಿನ ಭು ದಾಖಲೆಗಳು ಸರಿಯಾಗಿ ಸಲ್ಲಿಕೆಯಾಗಿಲ್ಲ ಖಾತಾ ಸಂಖಯೆಯೂ ತಿಳಿಯಲು ಸಾಧ್ಯವಿಲ್ಲ ಅಲ್ಲದೇ ವಾದ ಪ್ರತಿವಾದವು ದಾಖಲೆಯೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದಿದ್ದರು. ಈಗ ಇದೇ ವಿಚಾರಕ್ಕೆ ಪ್ರಶ್ನಿಸಿ ಅರ್ಜಿದಾರರು ಅಲಹಬಾದ್​ ಹೈಕೋರ್ಟ್​ ಮೆಟ್ಟಿಲೇರಿದ್ದು, ಕೋರ್ಟ್​ ಆಡಳಿತಾತ್ಮಕವಾಗಿ ಸತ್ಯಾಸತ್ಯತೆ ಪತ್ತೆಹಚ್ಚಲು ಕಮಿಷನರ್​ ನೇಮಿಸುವು ಖಡ್ಡಾಯ ಎಂದು ವಾದಿಸಿದ್ದಾರೆ.
ಅಯೋಧ್ಯೆ ಕೇಸ್​​ ತೀರ್ಪಿನ ಆಧಾರದ ಮೇಲೆ ವಾದ
ಹೈಕೋರ್ಟ್​ನಲ್ಲಿ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಪ್ರಸಿದ್ಧ ವಕೀಲ ವಿಷ್ಣು ಶಂಕರ್​, ಜೈನ್​​ ಮತ್ತು ಸೌಮ್ಯ ಶ್ರೀವಾಸ್ತವ್​​ ರವರು ಅಯೋಧ್ಯೆಯ ರಾಮಜನ್ಮಭೂಮಿ ಪ್ರಕರಣದ ಸುಪ್ರೀಂ ಕೋರ್ಟ್​ನ ಐತಿಹಾಸಿಕ ತೀರ್ಪನದ್ನ ಉಲ್ಲೇಖಿಸಿದ್ದಾರೆ. ಅಯೋಧ್ಯೆ ವಿವಾದದಲ್ಲೂ ಸುಪ್ರೀಂ ಕೋರ್ಟ್​ ಸ್ಪಷ್ಟಪಡಿಸಿದಂತೆ civil procedure codeನ ಆರ್ಡರ್​​ XXV1 RULE 9ರ ಅಡಿಯಲ್ಲಿ ಯಾವುದೇ ವಿವಾದಾದ್ಮಕ ಸ್ಥಳದ ಭೌತಿಕ ಮತ್ತು ವಾಸ್ತು ಶಿಲ್ಪದ ಲಕ್ಷಣಗಳನ್ನ ಪತ್ತೆ ಹಚ್ಚಿ ಪರಿಶೀಲಿಸಲು ನಾಗರಿಕ ನ್ಯಾಯಾಲಯಗಳಿಗೆ ಪೂರ್ಣ ಅಧಿಕಾರವಿದೆ. ಪ್ರಸ್ತುತ ತಾಜ್​ಮಮಹಲ್​ ASI ನಿಯಂತ್ರಣದಲ್ಲಿರುವ ಸಂರಕ್ಷಿತ ಸ್ಮಾರಕವಾಗಿರೋದ್ರಿಂದ ಸಾಮಾನ್ಯ ಜನರು ಅಲ್ಲಿಗೆ ಹೋಗಿ ಸ್ವತಂತ್ರವಾಗಿ ಸಾಕ್ಷ ಸಂಗ್ರಹಿಸಲು ಅಥವಾ ನೆಳಮಾಳಿಗೆಯ ಫೋಟೋ ತೆಗೆಯಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯಾಲಯವೇ ಮಧ್ಯ ಪ್ರವೇಶ ಮಾಡಿ ಕಮಿಷನರ್​ ಮೂಲಕ ಸರ್ವೇ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ,
1155-56ರಲ್ಲಿ ತೇಜೋ ಮಹಾಲಯ​ ನಿರ್ಮಾಣ...!
ಶಹಜಾನ್​ ಅರಮನೆ ಕಿತ್ತುಕೊಂಡಿದ್ದು ನಿಜವೇ?!
ಈಗಾಗಲೇ ಸಲ್ಲಿಸಿರೋ ಅರ್ಜಿಯಲ್ಲಿ ತಾಜ್​ಮಹಲ್​ಗೆ ಸಂಬಂಧಿಸಿದಂತೆ ಅತ್ಯಂತ ರೋಚಕ ವಿವರಗಳನ್ನ ನೀಡಲಾಗಿದೆ. ಕ್ರಿ. ಶ 1155-56ರ ಅವಧಿಯಲ್ಲಿ ಆಗಿನ ರಾಜ ಪರಮಾರ್ಥದಿ ದೇವ ಅವರು ಭವ್ಯವಾದ ತೇಜೋ ಮಹಾಲಯ ಶಿವ ದೇವಾಲಯವನ್ನ ನಿರ್ಮಿಸಿದ್ರು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ತದನಂತರ ಈ ದೇವಾಲಯವು ಜೈಪುರದ ರಾಜ ಮಾನ್ಸಿಂಗ್​ ಮತ್ತು ರಾಜ ಜೈಸಿಂಗ್​​ ರವರ ನಿಯಂತ್ರಣಕ್ಕೆ ಬಂದಿತ್ತು. ಆದರೆ 17ನೇ ಶತಮಾನದಲ್ಲಿ ಮೊಘಲ್​ ಚಕ್ರವರ್ತಿ ಶಹಜ ಆನ್​ ರಾಜ ಜೈಸಿಂಗ್​ ರವರು ಬಲವಂತವಾಗಿ ಈ ಸುಂದರ ಅರಮನೆ ಮತ್ತು ದೇವಸ್ಥಾನವನ್ನ ಕಿತ್ತುಕೊಂಡು ಅದರ ವಾಸ್ತುಶಿಲ್ಪಕ್ಕೆ ಕೆಲವು ಇಸ್ಲಾಮಿಕ್ ಲಕ್ಷಣಗಳನ್ನ ಸೇರಿಸಿ ತನ್ನ ಮೃತ ಪತ್ನಿ ಮುಮ್ತಾಜ್ ಬೇಗಮ್ ಸ್ಮಾರಕವಾಗಿ ಬದಲಾಯಿಸಿದನು ಎಮಬುದು ಅರ್ಜಿದಾರರ ಪ್ರಮುಖ ವಾದವಾಗಿದೆ.ಈವರೆಗೂ ಪ್ರಶ್ಎಯಾಗಿಯೇ ಉಳಿದಿರುವ ಈ ರಹಸ್ಯಗಳ ಸತ್ಯಾಸತ್ಯತೆ ಇಂಜಿನಿಯರಿಂಗ್​ ಸರ್ವೇಯಿಂದ ಹಾಗೂ ASI ಜಂಟಿ ಶೋಧನೆಯಿಂದ ಮಾತ್ರ ಹೊರಬರಲು ಸಾಧ್ಯವೆಂದು ಭಕ್ತರು ಹೇಳುತ್ತಿದ್ದಾರೆ.
ಇತಿಹಾಸಕಾರರ ಪ್ರಕಾರ ಅಲ್ಲಿರುವ ಕಳಸ ಕಲ್ಪ ವೃಕ್ಷದ ಕೆತ್ತನೆಗಹಳು ಮುಚ್ಚಿರುವ ಕೊಠಡಿಯಲ್ಲಿನ ವಾಸ್ತುಶಿಲ್ಪವನ್ನು ಅವರು ಇದು ಹಿಂದೂ ದೇವಾಲಯ ಎಂಬುದಕ್ಕಡೆ ಸಾಕ್ಷ್ಯವಾಗಿ ಉಲ್ಲೇಖಿಸಿದ್ದಾರೆ. ತಾಜ್​ ಮಹಾಲ್​​​​ನ 22 ಕಠಡಿಗಳನ್ನ ತೆರೆದು ಜಿಪಿಆರ್​​ ಸಮೀಕ್ಷೆ ನಡೆಸಬೇಕೆಂದು 2022ರಲ್ಲೂ ಅಲಹಬಾದ್​ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಆಗ ಕೋರ್ಟ್​​ ಅರ್ಜಿಯನ್ನ ವಜಾ ಗೊಳಿಸಿತ್ತು. ಆ ಸಂದರ್ಭದಲ್ಲಿ ಭಾರತೀಯ ಪುರಾತತ್ವ ಇಲಾಖೆ ಆ ಕೊಠಡಿಗಳಲ್ಲಿ ಕೇವಲ ಮಣ್ಣು ಇಟ್ಟಿಗೆ ಇರಿಸಲಾಗಿದೆಯೆಂದು ಹೇಓಳಿತ್ತು. ಸದ್ಯ ತಾಜ್​ಮಹಲ್​​ ಶಹಜಾನ್​​​​ ಕಟ್ಟಿಸಿದ ಸಮಾಧಿಯೋ ಅಥವಾ ತೇಜೋ ಮಹಾಲಾಯ ಶಿವನ ದೇವಾಲಯವೋ ಅನ್ನೋದು ಅಲಹಬಾದ್​​ ಹೈಕೋರ್ಟ್​​ನಲ್ಲಿದೆ. ಕೇಂದ್ರ ಸರ್ಕಾರ ಮತ್ತು ASIಯ ಉತ್ತರ ಇದೀಗ ತಾಜ್​ ಮಹಾಲ್​​​​ ಅನ್ನು ಹಿಂದೂ ದೇವಾಲಯವಾಗಿ ಇತಿಹಾದವನ್ನೇ ಬದಲಿಸಲಿದೆಯೇ ಅನ್ನೋದನ್ನ ಕಾದು ನೋಡಬೇಕಿದೆ,