ಸಾಂದರ್ಭಿಕ ಚಿತ್ರ 
ದೇಶ

ಟಿ20 ಸರಣಿ: ಇಂಗ್ಲೆಂಡ್ ವಿರುದ್ಧ ಎರಡನೇ ರೋಚಕ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ: ಜಾಕೋಬ್ ಬೆಥೆಲ್ ಅಬ್ಬರ | INDvENG

INDvENG: ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ನೀಡಿದ 191 ರನ್​ಗಳ ಗುರಿ ಬೆನ್ನಟ್ಟಿ ಯಶಸ್ವಿಯಾಗಿದ್ದು, ಸರಣಿಯ ಎರಡನೇ ಪಂದ್ಯವನ್ನು ಗೆದ್ದಿದೆ.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್​ಗಳನ್ನು ಗಳಿಸಿತ್ತು. ಟೀಂ ಇಂಡಿಯಾಕ್ಕೆ ಆಯ್ಕೆಯಾದ ಮೊದಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಕೇವಲ 14 ರನ್​​ಗಳಿಸಿ ಔಟ್​ ಆಗಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.
191ರನ್​ಗಳ ಗುರಿ ಬೆನ್ನತ್ತಿದೆ ಇಂಗ್ಲೆಂಡ್ ತಂಡದ ಪರ ಇಂಗ್ಲೆಂಡ್‌ನ ಯುವ ಆಟಗಾರ ಜಾಕೋಬ್ ಬೆಥೆಲ್ ಅಬ್ಬರದ ಅರ್ಧಶತಕದೊಂದಿಗೆ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಮತ್ತು ಭಾರತದ ಬೌಲರ್​ಗಳನ್ನು ಚಚ್ಚಿ ಹಾಕಿದರು. ಹ್ಯಾರಿ ಬ್ರೂಕ್ (32) ಮತ್ತು ಟಾಮ್ ಬ್ಯಾಂಟನ್ (39) ಅವರೊಂದಿಗೆ ಪಾಟ್ನಾರ್ಶಿಪ್ ಆಟವಾಡಿದರು. ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.