ಚೆನ್ನೈ: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ವಾರ್ಷಿಕ ವರದಿ "ಹೌ ಇಂಡಿಯಾ ಇನ್‌ಸ್ಟಾಮಾರ್ಟೆಡ್ 2025" ಭಾರತೀಯರ ಆನ್‌ಲೈನ್ ಶಾಪಿಂಗ್ ಅಭಿರುಚಿಗಳ ಬಗ್ಗೆ ಆಸಕ್ತಿದಾಯಕ ಮಾಹಿತಿಗಳನ್ನು ಇದೀಗ ಬಿಚ್ಚಿಟ್ಟಿದೆ.
ಈ ವರದಿಯಲ್ಲಿ ಅತ್ಯಂತ ಗಮನ ಸೆಳೆದಿದ್ದು ಚೆನ್ನೈನ ಒಬ್ಬ ಬಳಕೆದಾರರ ಇಡೀ 2025ರಲ್ಲಿ ಕೇವಲ ಕಾಂಡೋಮ್‌ಗಳಿಗಾಗಿ 1,06,398 ಖರ್ಚು ಮಾಡಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಇನ್ನು ಸ್ವಿಗ್ಗಿ ಪ್ರಕಾರ, ಈ ಬಳಕೆದಾರರು ಒಟ್ಟು 228 ಬಾರಿ ಪ್ರತ್ಯೇಕ ಆರ್ಡರ್‌ಗಳನ್ನು ಮಾಡಿದ್ದಾರೆ. ಇದು ಸುಮಾರು ಪ್ರತಿ 1.5 ದಿನಕ್ಕೊಮ್ಮೆ ಖರೀದಿ ಮಾಡಿದಂತೆ! ಕಂಪನಿಯು ಇದನ್ನು ಹಾಸ್ಯಮಯವಾಗಿ "ಪ್ಲ್ಯಾನಿಂಗ್ ಅಹೆಡ್" (ಮುಂಗಡ ಸಿದ್ಧತೆ) ಎಂದು ಕರೆದಿದೆ.
ಆಸಕ್ತಿದಾಯಕ ಅಂಶಗಳು:ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿ 127 ಆರ್ಡರ್‌ಗಳಲ್ಲಿ ಒಂದರಲ್ಲಿ ಕಾಂಡೋಮ್ ಪ್ಯಾಕ್ ಇರುತ್ತದೆ. ಅಲ್ಲದೆ, ಇದೇ 2025ರ ಸೆಪ್ಟೆಂಬರ್ ತಿಂಗಳು ಕಾಂಡೋಮ್ ಖರೀದಿಯಲ್ಲಿ 24% ಏರಿಕೆ ಕಂಡಿದೆ. ಈ ತಿಂಗಳು "ಅತ್ಯಂತ ಶೃಂಗಾರಮಯ ತಿಂಗಳು" ಎಂದು ಕರೆಯಲಾಗಿದೆ.
ಹಾಲು ಭಾರತೀಯರ ಮೊದಲ ಆಯ್ಕೆ
2025ರಲ್ಲಿ ಪ್ರತಿ ಸೆಕೆಂಡಿಗೆ ನಾಲ್ಕು ಪ್ಯಾಕೆಟ್‌ಗಳಿಗಿಂತ ಹೆಚ್ಚು ಹಾಲು ಆರ್ಡರ್ ಮಾಡಲಾಗುತ್ತಿತ್ತು. ಈ ಪ್ರಮಾಣವು 26,000 ಒಲಿಂಪಿಕ್ ಈಜುಕೊಳಗಳನ್ನು ತುಂಬಲು ಸಾಧ್ಯ ಎಂದು ವರದಿ ಹೇಳಿದೆ. ಹಾಲು ಭಾರತೀಯ ಜೀವನದ ಪ್ರಮುಖ ಭಾಗವಾಗಿದೆ ಎಂದು ವರದಿ ಸಾಬೀತುಪಡಿಸಿದೆ.
ಬೆಂಗಳೂರಿನಲ್ಲಿ ಒಬ್ಬರು ಕೇವಲ 10 ಗೆ ಪ್ರಿಂಟ್‌ಔಟ್ ಆರ್ಡರ್ ಮಾಡಿದ್ದಾರೆ, ಇದು ವರ್ಷದ ಅತ್ಯಂತ ಚಿಕ್ಕ ಆರ್ಡರ್ ಆಗಿದೆ ಎಂದು ವರದಿ ಉಲ್ಲೇಖಿಸಿದೆ. ಇನ್ನು ಮುಂಬೈನ ಬಳಕೆದಾರರೊಬ್ಬರು ಇನ್‌ಸ್ಟಾಮಾರ್ಟ್‌ನಿಂದ ಬರೋಬ್ಬರಿ 15.16 ಲಕ್ಷ ಮೌಲ್ಯದ ಚಿನ್ನವನ್ನು ಖರೀದಿಸಿದ್ದನ್ನು ಬಹಿರಂಗ ಪಡಿಸಿದೆ.
ಒಟ್ಟಾರೆಯಾಗಿ, 2025ರಲ್ಲಿ ಭಾರತೀಯರು ಇನ್‌ಸ್ಟಾಮಾರ್ಟ್‌ನಲ್ಲಿ ಹಾಲು, ತರಕಾರಿ, ಐಫೋನ್, ಚಿನ್ನದ ನಾಣ್ಯಗಳು ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಿದ್ದಾರೆ.
ಈ ವರದಿ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಭಾರತೀಯರ ದೈನಂದಿನ ಜೀವನದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ,(ಏಜೆನ್ಸೀಸ್).