ಮೋಟರ್ ಕದ್ದ ಶಂಕೆಯ ಮೇಲೆ ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಕರೆಂಟ್ ಶಾಕ್ ನೀಡಿದ ಕ್ರೂರಿಗಳು 
ದೇಶ

ಮೋಟರ್ ಕದ್ದ ಶಂಕೆ: ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಕರೆಂಟ್ ಶಾಕ್ ನೀಡಿದ ಪಾಪಿಗಳು; ವಿಡಿಯೋ ವೈರಲ್ ಆಗ್ತಿದ್ದಂತೆ ಶಾಕ್ ಕೊಟ್ಟ ಪೊಲೀಸರು! Two Youths Given Electric Shocks

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರದೇಶದ ರೈಸೇನ್‌ನಲ್ಲಿ ಅಮಾನವೀಯ ಘಟನೆ!
  • ಮೋಟರ್ ಕದ್ದ ಶಂಕೆಯ ಮೇಲೆ ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಕರೆಂಟ್ ಶಾಕ್ ನೀಡಿದ ಕ್ರೂರಿಗಳು
  • ವಿಡಿಯೋ ವೈರಲ್ ಬೆನ್ನಲ್ಲೇ ಇಬ್ಬರ ಬಂಧನ
ರೈಸೇನ್: ಗದ್ದೆಯಲ್ಲಿದ್ದ ಮೋಟರ್​​ ಅನ್ನು ಕಳ್ಳತನ ಮಾಡಿದ್ದಾರೆಂಬ ಅನುಮಾನದ ಆಧಾರದಲ್ಲಿ ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಇಲೆಕ್ಟ್ರಿಕ್​ ಶಾಕ್ (Two Youths Given Electric Shocks)​ ನೀಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ರೈಸನ್​ಲ್ಲಿ ವರದಿಯಾಗಿದೆ.
ಈ ಹಿಂಸೆ ನೀಡುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆದ ಹಿನ್ನಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯಪ್ರವೇಶಿದ ಹಿನ್ನಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ವಿಡಿಯೋನಲ್ಲೇನಿದೆ?

ಗದ್ದೆಗೆ ನೀರನ್ನು ಹಾಯಿಸಲು ಬಳಸುತ್ತಿದ್ದ ಮೋಟರ್​​ ಅನ್ನು ಕಳ್ಳತನ ಮಾಡಿದ್ದಾರೆಂಬ ಶಂಕೆಯ ಮೇಲೆ ಇಬ್ಬರು ಯುವಕರನ್ನು ಹೊಡೆದು, ಅವರನ್ನು ಕಂಬಕ್ಕೆ ಕಟ್ಟಿಹಾಕಿ ಕರೆಂಟ್​ ಶಾಕ್​ ನೀಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋನಲ್ಲಿ ನೋಡಬಹುದಾಗಿದೆ.
ಕರೆಂಟ್​ ಶಾಕ್​ ನೀಡಿದಾಗ, ಯುವಕರು ಚೀರುವ, ಬೊಬ್ಬೆ ಹಾಕುವುದನ್ನು ಕೇಳಿಸಿಕೊಳ್ಳಬಹುದಾಗಿದೆ. ಈ ಘಟನೆ ರೈಸೇನ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಮೋಡಿಯಾ ಗ್ರಾಮದಲ್ಲಿ ನಡೆದಿದ್ದು, ಬಲಿಪಶುಗಳು ಧನಿಯಾಖೇಡಿ ಗ್ರಾಮದ ನಿವಾಸಿಗಳಾಗಿದ್ದು, ಬೈರಾಗಿ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗುತ್ತಿದೆ.

ಇಬ್ಬರ ಬಂಧನ!

ವನ್ಯಜೀವಿಗಳಿಂದ ಗದ್ದಗೆ ರಕ್ಷಣೆಗಾಗಿ ಬಳಸಲಾಗುವ ಕರೆಂಟ್​ಅನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಿದ ಹಿನ್ನಲೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸ್ಥಳೀಯ ಪೊಲೀಸರಿಗೆ ಕೂಡಲೇ ಕ್ರಮ ಕೈಗೊಳ್ಳಲು ತಿಳಿಸಿದೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗದ ದೂರನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಡಿಪಿಯೋ ಪ್ರತಿಭಾ ಶರ್ಮಾ ತಿಳಿಸಿದ್ದಾರೆ. ಈ ಘಟನೆ ಜುಲೈ 4 ರಂದು ನಡೆದಿದ್ದು, ಗದ್ದೆಗೆ ನೀರು ಹಾಯಿಸಲು ಬಳಸುತ್ತಿದ್ದ ಮೋಟರ್​ನ್ನು ಕದ್ದಿದ್ದಾರೆಂದು ಬಂಧಿತ ಆರೋಪಿಗಳು ಕರೆಂಟ್​ ಶಾಕ್​ ನೀಡಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದ್ದು, ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಪ್ರತಿಭಾ ಶರ್ಮಾ ತಿಳಿದಿದ್ದಾರೆ, (ಏಜನ್ಸೀಸ್​).