ದೆಹಲಿ: ಅರಾವಳಿ ಬೆಟ್ಟಗಳಲ್ಲಿನ ಗಣಿಗಾರಿಕೆಗೆ ಸಂಬಂಧಿಸಿದ ವಿಷಯವನ್ನು ಸುಪ್ರೀಂ ಕೋರ್ಟ್ ಇಂದು(ಡಿ. 29) ವಿಚಾರಣೆ ನಡೆಸಲಿದ್ದು, ಸಿಜೆಐ ಸೂರ್ಯ ಕಾಂತ್, ನ್ಯಾ. ಜೆ.ಕೆ. ಮಹೇಶ್ವರಿ ಹಾಗೂ ಎ.ಜಿ. ಮಸಿಹ್ ನೇತೃತ್ವದ ತ್ರಿಸದಸ್ಯ ಪೀಠ ಸ್ವಯಂ ಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ.
ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ಪರ್ವತ ಶ್ರೇಣಿಗಳಲ್ಲೊಂದಾದ ಅರಾವಳಿ ಬೆಟ್ಟದ ಪರಿಸರಕ್ಕೆ ಹಾನಿಯನ್ನುಂಟಾಗಬಹುದು ಎಂದು ಅನೇಕರು ಆತಂಕಗಳ ವ್ಯಕ್ತಪಡಿಸಿದ ಬಳಿಕ ಮತ್ತು ರಾಜಸ್ಥಾನ ಸೇರಿ ಉತ್ತರದ ರಾಜ್ಯಗಳಲ್ಲಿ ಪ್ರತಿಭಟನೆ ಹಿನ್ನೆಲೆ ತನ್ನದೇ ತೀರ್ಪನ್ನು ಮರು ವಿಚಾರಣೆ ನಡೆಸಲಿದೆ.
ನ. 20ರಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್, 100 ಮೀಟರ್ಗಳಿಗಿಂತ ಎತ್ತರ ಇರುವ ಬೆಟ್ಟಗಳು ಮಾತ್ರ ಅರಾವಳಿ ಬೆಟ್ಟ ಎಂದು ಪರಿಗಣಿಸುವುದನ್ನು ಅನುಮೋದಿಸಿತ್ತು. ಈ ಕ್ರಮವು ಅನಿಯಂತ್ರಿತ ಗಣಿಗಾರಿಕೆ ಮತ್ತು ತೀವ್ರ ಪರಿಸರ ನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿ ಹೋರಾಟಕ್ಕೆ ಇಳಿದಿದ್ದಾರೆ.
ಈ ಹಿನ್ನೆಲೆ ಅರಾವಳಿ ಪ್ರದೇಶದಲ್ಲಿನ ಗಣಿಗಾರಿಕೆ ಚಟುವಟಿಕೆಗಳು ಮತ್ತು ಪರಿಸರದ ಮೇಲಿನ ಅವುಗಳ ಪ್ರಭಾವಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನ್ಯಾಯಾಲಯ ಮರು ಪರಿಶೀಲಿಸಲನೆ ನಡೆಸಲಿದೆ (ಏಜೆನ್ಸೀಸ್).