- ಜನವರಿ 3ರಂದು ವರ್ಷದ ಮೊದಲ 'ಸೂಪರ್‌ಮೂನ್'
- ಎಂದಿಗಿಂತ ದೊಡ್ಡದಾಗಿ, ವಿಶೇಷವಾಗಿ ಕಾಣಿಸಲಿದ್ದಾನೆ ಚಂದಿರ
- ಚಂದ್ರನು ಭೂಮಿಗೆ ಸಮೀಪಿಸುವ ಸಮಯಕ್ಕೆ ದೊಡ್ಡದಾಗಿ ಗೋಚರ
ನವದೆಹಲಿ: 2026ರ ಹೊಸ್ತಿಲಿಗೆ ಕಾಲಿಟ್ಟಿರುವ ದೇಶದ ಜನತೆ, ವರ್ಷದ ಮೊದಲ ಸೂಪರ್‌ಮೂನ್ ನೋಡಲು ಉತ್ಸುಕರಾಗಿದ್ದಾರೆ. ಹೊಸ ವರ್ಷ ಪ್ರಾರಂಭವಾದ ಮೂರನೇ ದಿನಕ್ಕೆ ಬಾಹ್ಯಾಕಾಶದಲ್ಲಿ ಮೊದಲ ಪವಾಡ ಗೋಚರಿಸಲಿದೆ.
ವುಲ್ಫ್ ಮೂನ್ ಎಂದೂ ಕರೆಯಲ್ಪಡುವ ಈ ಸೂಪರ್‌ಮೂನ್ ಜನವರಿ 3ರಂದು ಕಾಣಿಸಿಕೊಳ್ಳಲಿದೆ. ಇದು ಎಂದಿಗಿಂತ ಹೆಚ್ಚು ಪ್ರಕಾಶಮಾನವಾಗಿ ಮತ್ತು ದೊಡ್ಡ ಗಾತ್ರದಲ್ಲಿ ಗೋಚರಿಸಲಿದೆ ಎಂಬುದು ವಿಶೇಷ. ಚಂದ್ರನು ಭೂಮಿಗೆ ಸಮೀಪಿಸುತ್ತಿದ್ದಂತೆ ಸೂಪರ್‌ಮೂನ್ ರೂಪುಗೊಳ್ಳುತ್ತದೆ.
ಹುಣ್ಣಿಮೆಯ ದಿನದಂದು ಚಂದ್ರನು ಭೂಮಿಗೆ ಇನ್ನಷ್ಟು ಹತ್ತಿರವಾಗ್ತಿದ್ದಾನೆ ಎಂದಾಗ ಈ ಸೂಪರ್‌ಮೂನ್ ಸಂಭವಿಸುತ್ತದೆ. ಜನವರಿ 3ರಂದು, ಚಂದ್ರನು ಭೂಮಿಯಿಂದ ಸರಿಸುಮಾರು 3,56,500 ಕಿ.ಮೀ.ಗಳಷ್ಟು ದೂರದಲ್ಲಿರುತ್ತಾನೆ. ಇದು ಸಾಮಾನ್ಯಕ್ಕಿಂತ ಶೇ.14ರಷ್ಟು ದೊಡ್ಡದಾಗಿ ಮತ್ತು ಶೇ.30ರಷ್ಟು ಪ್ರಕಾಶಮಾನವಾಗಿ ಗೋಚರಿಸುತ್ತೆ.
ಭೂಮಿ ಮತ್ತು ಚಂದ್ರನ ನಡುವಿನ ಸರಾಸರಿ ಅಂತರ ಸುಮಾರು 3,84,400 ಕಿ.ಮೀ ಇರಲಿದೆ. ಸೂಪರ್‌ಮೂನ್ ನೋಡಲು ಸೂಕ್ತ ಸಮಯ ಸಂಜೆ 5:45ಕ್ಕೆ ಎಂಬುದು ನೆನಪಿರಲಿ,(ಏಜೆನ್ಸೀಸ್).