ಸೆಲ್ಫಿ ಕ್ಲಿಕ್ಕಿಸಿಕೊಂಡು, ರಾಹುಲ್ ಗಾಂಧಿಗೆ ಮುತ್ತಿಟ್ಟ ವಿದ್ಯಾರ್ಥಿನಿ
- ಪುಣೆಯಲ್ಲಿ ನಡೆದಿದ್ದ ಛಾತ್ರೋಂಕೆ ಗೂಂಜ್ ಕಾರ್ಯಕ್ರಮ
- ಸಭೆ ಬಳಿಕ ಸೆಲ್ಫಿ, ಆಟೋಗ್ರಾಫ್ ಪಡೆಯಲು ಬಂದ ವಿದ್ಯಾರ್ಥಿಗಳು
- ಸೆಲ್ಫಿ ಕ್ಲಿಕ್ಕಿಸಿಕೊಂಡು, ರಾಹುಲ್ ಗಾಂಧಿಗೆ ಮುತ್ತಿಟ್ಟ ವಿದ್ಯಾರ್ಥಿನಿ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಪುಣೆ: ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಹಿಳೆಯರನ್ನು, ವಿಶೇಷವಾಗಿ ವಿದ್ಯಾರ್ಥಿನಿಯರನ್ನು ಗುರಯಾಸಿಕೊಂಡು, ಪುಣೆಯಲ್ಲಿ ಛಾತ್ರೋಂಕೆ ಗೂಂಚ್ (ವಿದ್ಯಾರ್ಥಿಗಳ ಕೂಗು) ಎಂಬ ಕಾರ್ಯಕ್ರಮವನ್ನು ಆಯೋಜಸಿದ್ದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿರುದ್ಧ, ಮನುಸ್ಮೃತಿ ವಿರುದ್ಧ ಹಾಗೂ ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ ತಮ್ಮ ನಿಲುವುಗಳನ್ನು ನೆರೆದಿದ್ದ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು.
ಆದರೆ, ಈಗ ಈ ಕಾರ್ಯಕ್ರಮ ಮುಗಿದ ನಂತರ ರಾಹುಲ್ ಗಾಂಧಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದ ವಿದ್ಯಾರ್ಥಿನಿ, (Student kisses Rahul Gandhi) ಕಾಂಗ್ರೆಸ್ ನಾಯಕನಿಗೆ ಮುತ್ತಿಟ್ಟಿರುವ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.
ವಿಡಿಯೋನಲ್ಲೇನಿದೆ?
ಸೋಷಿಯಲ್ ಮೀಡಿಯಾನಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಪುಣೆಯಲ್ಲಿ ನಡೆದಿದ್ದ ಛಾತ್ರೋಂಕೆ ಗೂಂಜ್ ಕಾರ್ಯಕ್ರಮ ಸಮಾಪ್ತಿಯಾದ ನಂತರ, ರಾಹುಲ್ ಗಾಂಧಿ ಪ್ರೀತಿಪಾತ್ರರೊಂದಿಗೆ ಫೋಟೊ ಮತ್ತು ಆಟೋಗ್ರಾಫ್ ನೀಡಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಮೊದಲು ರಾಹುಲ್ ಗಾಂಧಿ ಜೊತೆ ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ನಂತರ ರಾಹುಲ್ ಗಾಂಧಿ ಕೆನ್ನೆಗೊಂದು ಮುತ್ತಿಟ್ಟಿದ್ದಾಳೆ.
ರಾಹುಲ್ ಗಾಂಧಿ ಕೂಡ ಇದನ್ನು ಬಹಳ ಸಕಾರಾತ್ಮಕವಾಗಿ ಸ್ವೀಕರಿಸಿ, ಆ ವಿದ್ಯಾರ್ಥಿ ಜೊತೆ ಹ್ಯಾಂಡ್ಶೆಕ್ ಮಾಡಿ ವೇದಿಕೆಯಿಂದ ಕೆಳಗಿಳಿದಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಯಾ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಲಕ್ಷಾಂತರ ವೀಕ್ಷಣೆ ದೊರೆಯುತ್ತಿದೆ. ರಾಜಕೀಯ ನಾಯಕ ಎಂದರೆ ಹೀಗೆ ಜನರ ಜೊತೆ ಬೆರೆಯಬೇಕೆಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಆ ಹುಡುಗಿ ಮಾಡಿದ್ದು ಮಹಾ ತಪ್ಪೇನು ಅಲ್ಲ. ಆದರೆ ತಾನು ಯಾವ ವೇದಿಕೆ ಮೇಲಿದ್ದೇನೆ? ತಾನು ಮಾಡುವ ಕೆಲಸದಿಂದ ಆ ವ್ಯಕ್ತಿಗೆ ಮುಜುಗರ ಉಂಟಾಗುತ್ತಾ? ಎಂದು ಯೋಚಿಸಬೇಕಿತ್ತೆಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿಗೆ ಈ ವಿದ್ಯಾರ್ಥಿನಿ ಮುತ್ತಿನ ಪರಿಣಾಮದಿಂದಲಾದರೂ ಅಧಿಕಾರ ರಾಜಕಾರಣದಲ್ಲಿ ಉನ್ನತಿ ಕಾಣಲಿ ಎಂದು ಮತ್ತೊಬ್ಬರು ಕಿಚಾಯಿಸಿದ್ದಾರೆ, (ಏಜನ್ಸೀಸ್).