ನೋಯ್ಡಾ: ದೆಹಲಿ ಬಳಿಯ ಹಾಸ್ಟೆಲ್ವೊಂದರಲ್ಲಿ 25ರ ವಿದ್ಯಾರ್ಥಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಜಾರ್ಖಂಡ್ನ ನಿವಾಸಿ ಕೃಷ್ಣಕಾಂತ್ ಮೃತ ಎಂದು ಗುರುತಿಸಲಾಗಿದೆ. ಈತ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶಷನ್(ಎಂಸಿಎ) ವ್ಯಾಸಂಗ ಮಾಡುತ್ತಿದ್ದನು.
ಪೊಲೀಸ್ ಪ್ರಾಥಮಿಕ ತನಿಖೆ ಪ್ರಕಾರ, ಕೃಷ್ಣಕಾಂತ್ ರೂಮ್ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಜೊತೆ ಇದ್ದನು. ಕೃಷ್ಣಕಾಂತ್ ಶನಿವಾರ ಕಾಲೇಜಿಗೆ ಹೋಗಿರಲ್ಲಿ, ಹೊರಗಡೆ ಹೋಗಿ ಬರುವುದಾಗಿ ರೂಮ್ಮೇಟ್ ಹೇಳಿ ಹೊರ ನಡೆದಿದ್ದ. ಇತ್ತ ರೂಮ್ಮೇಟ್ ಎಂದಿನಂತೆ ಕಾಲೇಜಿಗೆ ಹೋಗಿದ್ದರು.
ಕಾಲೇಜಿನಲ್ಲಿದ್ದ ರೂಮ್ಮೇಟ್ಗೆ ಕೃಷ್ಣಕಾಂತ್ ತಂದೆ ಕರೆ ಮಾಡಿ ಬೇಗ ರೂಮ್ಗೆ ಹೊರಡು, ಅವನು(ಕೃಷ್ಣಕಾಂತ್) 'ಏನಾದರೂ ಮಾಡಲಿದ್ದಾನೆ' ಎಂದು ಹೇಳಿದ್ದರು. ಕೂಡಲೇ ರೂಮ್ಮೇಟ್, ಕೆಲ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಕರೆದುಕೊಂಡ ರೂಮ್ ಬಳಿಗೆ ತೆರಳಿದ್ದಾನೆ. ರೂಮ್ ಲಾಕ್ ಹಾಕಿದ್ದು ಕಂಡ ವಿದ್ಯಾರ್ಥಿಗಳು ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಕೃಷ್ಣಕಾಂತ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿದ್ದಾರೆ. ಆತ್ಮಹತ್ಯೆ ಸ್ಥಳದಲ್ಲಿ ಡೆತ್ನೋಟ್ ಸಿಕ್ಕಿದೆ. ಪತ್ರದಲ್ಲಿ "ನಾನು ಶರಣಾಗುತ್ತೇನೆ. ದಯವಿಟ್ಟು ನನ್ನ ದೇಹ ಮತ್ತು ನನ್ನ ವಸ್ತುಗಳನ್ನು ನನ್ನ ಕುಟುಂಬಕ್ಕೆ ನೀಡಿ. ತೊಂದರೆಗೆ ಕ್ಷಮಿಸಿ" ಎಂದು ಬರೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ,(ಏಜೆನ್ಸೀಸ್).