ಮುಂಬೈ: ದೇಶೀಯ ಷೇರು(Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ(ಡಿ.16) ತೀವ್ರ ಕುಸಿತ ಕಂಡಿದೆ.
ಸೆನ್ಸೆಕ್ಸ್ 534 ಪಾಯಿಂಟ್‌ಗಳು ಕುಸಿದು 84,679.86 ಕ್ಕೆ ಕೊನೆಗೊಂಡಿತು. ಆದರೆ, ನಿಫ್ಟಿ 167 ಅಂಕಗಳು ಇಳಿದು 25,860.10 ಕ್ಕೆ ಸ್ಥಿರವಾಯಿತು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ 0.78% ಕುಸಿದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ 0.69% ಕುಸಿದಿದೆ.
ಮಂಗಳವಾರದ ಮುಕ್ತಾಯದ ವೇಳೆಗೆ ಬಿಎಸ್‌ಇ(ಬಾಂಬೆ ಸ್ಟಾಕ್ ಎಕ್ಸ್ಚೆಂಚ್) ಪಟ್ಟಿಯಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 471 ಲಕ್ಷ ಕೋಟಿ ರೂಗಳಷ್ಟಿದ್ದು, ಹೂಡಿಕೆದಾರರು ಒಂದೇ ವಹಿವಾಟಿನಲ್ಲಿ ಸುಮಾರು 4 ಲಕ್ಷ ಕೋಟಿಗಳಷ್ಟು ನಷ್ಟ ಅನುಭವಿಸಿದ್ದಾರೆ.
ಷೇರುಪೇಟೆ ಕುಸಿತಕ್ಕೆ ಕಾರಣ
ಭಾರತೀಯ ರೂಪಾಯಿ ಮೌಲ್ಯವು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಯುಎಸ್ ಡಾಲರ್ ಎದುರು 91 ರ ಸಮೀಪಕ್ಕೆ ತಲುಪಿದ್ದು, ಮಾರುಕಟ್ಟೆ ಭಾವನೆಗೆ ತೀವ್ರ ಹೊಡೆತ ನೀಡಿದೆ. ಮಂಗಳವಾರದ ಇಂಟ್ರಾ-ಡೇ ವಹಿವಾಟಿನಲ್ಲಿ ಮೊದಲ ಬಾರಿಗೆ ದೇಶೀಯ ಕರೆನ್ಸಿ 36 ಪೈಸೆ ಕುಸಿದು 91 ರ ಗಡಿ ದಾಟಿದೆ,(ಏಜೆನ್ಸೀಸ್).